ಜಸ್ಟ್ 10th ಪಾಸ್ ಆದ ಈ ಬ್ಯೂಟಿಯೀಗ ಬಾಲಿವುಡ್‌ನ ಟಾಪ್ ನಟಿ; ಯಾರಿವರು?
ನಟನೆ ಎನ್ನುವುದು ವಯಸ್ಸಿಗೆ ಸೀಮಿತವಾದ ವಿಷಯವಲ್ಲ. ಆಸಕ್ತಿ ಮತ್ತು ನಟನಾ ಸಾಮರ್ಥ್ಯ ಇದ್ದವರು ಯಾವ ವಯಸ್ಸಿನಲ್ಲಾದರೂ ನಟನೆಯಲ್ಲಿ ಮಿಂಚುತ್ತಾರೆ. ಇದಕ್ಕೆ ಸಿನಿ ರಂಗವೂ ಹೊರತಲ್ಲ. ಕೆಲವರು ಸಣ್ಣ ವಯಸ್ಸಿನಲ್ಲಿಯೇ ಸಿನಿ ಲೈಫಿಗೆ ಎಂಟ್ರಿ ಕೊಟ್ರೆ ಇನ್ನು ಕೆಲವರು ಬೇರೆ ಕೆಲಸಗಳನ್ನು ಬಿಟ್ಟು ಕಲಾವಿದರಾಗುತ್ತಾರೆ.
ಕೆಲವರು ಓದನ್ನೂ ಮುಗಿಸಿ, ನಟನೆಯ ತರಬೇತಿಯನ್ನೂ ಪಡೆದುಕೊಂಡೇ ಬರುತ್ತಾರೆ. ಆದರೆ, ಕೆಲವು ಸೂಪರ್ ಸ್ಟಾರ್‌ಗಳು ಓದದೆಯೇ ಅಥವಾ ಓದನ್ನು ಅರ್ಧಕ್ಕೆ ಕೈ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಇಂದು ಬಾಲಿವುಡ್‌ನ ಜನಪ್ರಿಯ ನಟ, ನಟಿಯರಲ್ಲಿ ಒಬ್ಬರಾಗಿ ಖ್ಯಾತರಾಗಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್‌ನ ಹವಾ ತುಂಬಾ ಹಳೆಯದು. ಈ ಚಿತ್ರರಂಗಕ್ಕೆ ಕಾಲಿಟ್ಟರೆ ಹೆಸರು, ಹಣ ಎಲ್ಲವೂ ದೊಡ್ಡ ಮಟ್ಟದಲ್ಲಿಯೇ ಸಿಗುತ್ತೆ. ಈ ಕಾರಣಕ್ಕೆ ಬಾಲಿವುಡ್‌ನಲ್ಲಿ ಮಿಂಚುವ ಆಸೆ ನಟ-ನಟಿಯರಿಗಿರುತ್ತದೆ. ಇಂತಹ ಹಿಂದಿ ಸಿನಿಮಾರಂಗದಲ್ಲಿ ಗೆದ್ದು ಬೀಗಿದವರು ನಟಿ ಆಲಿಯಾ ಭಟ್.
ಪ್ರಸ್ತುತ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಆಲಿಯಾ ಭಟ್ ಕುರಿತಂತೆ ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. ಇವರದ್ದು ಒಂಥರಾ ಡು ಆರ್ ಡೈ ಕ್ಯಾರೆಕ್ಟರ್. ನಟಿಯಾಗಬೇಕೆಂಬ ಕನಸನ್ನು ಪೂರ್ಣಗೊಳಿಸುವುದರೊಂದಿಗೆ, ತಮ್ಮ ನೆಚ್ಚಿನ ಹೀರೋನನ್ನು ಮದುವೆಯಾಗುವ ಕನಸನ್ನೂ ಈಡೇರಿಸಿಕೊಂಡಿದ್ದಾರೆ. ಇಂದು ಆಲಿಯಾರದ್ದು ಗೆಲುವು ತುಂಬಿರುವ ಬ್ಯೂಟಿಫುಲ್ ಜೀವನ.
ತಮ್ಮದೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ನಟಿಯ ಇತ್ತೀಚಿನ ಕಾಮಿಡಿ ವಿತ್ ಲವ್ ಸ್ಟೋರಿ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ತುಂಬಾ ಸದ್ದು ಮಾಡಿತ್ತು. 2012ರಲ್ಲಿ ತಮ್ಮ ಚೊಚ್ಚಲ ಸಿನಿಮಾ 'ಸ್ಟುಡೆಂಟ್ ಆಫ್ ದಿ ಇಯರ್' ನ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ ಏಳುಬೀಳುಗಳನ್ನು ಕಂಡರೂ ಕೂಡ ಇಂದು ಯಶಸ್ವಿ ಬಾಲಿವುಡ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.
ಇನ್ನು ಪ್ಯಾನ್ ಇಂಡಿಯಾ ಸಿನಿಮಾ 'RRR'ನಲ್ಲಿ ಆಲಿಯಾ ಅಭಿನಯಿಸಿರುವುದೇ ಇದಕ್ಕೊಂದು ನಿದರ್ಶನ. ಅಲ್ಲದೆ 'ಗಂಗೂಬಾಯಿ ಕಾಠಿಯಾವಾಡಿ'ಯಲ್ಲಿ ಆಲಿಯಾ ತಮ್ಮ ನಟನೆಯಿಂದ ಸಿನಿ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
ಇನ್ನು ಆಲಿಯಾ ಭಟ್ ರದ್ದು ಸಿನಿರಂಗಕ್ಕೆ ಒಗ್ಗಿಕೊಂಡಿರುವ ಮನೆತನ. ಅವರ ತಂದೆ ಮಹೇಶ್ ಭಟ್ ನಿರ್ಮಾಪಕರಾಗಿ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಹೀಗಾಗಿ ಬಾಲ್ಯದಿಂದಲೂ ನಟನೆಯ ಕುರಿತು ಆಸಕ್ತಿಯನ್ನು ಹೊಂದಿದ್ದ ಆಲಿಯಾ ತನ್ನ ಎರಡನೇ ವಯಸ್ಸಿಗೆ ತಾನು ಕೂಡ ಮುಂದೆ ದೊಡ್ಡ ನಟಿಯಾಗಬೇಕೆಂಬ ಕನಸನ್ನು ಕಂಡಿದ್ದರಂತೆ.

ಹಾಗಾಗಿ ಓದಿನಲ್ಲಿ ಉತ್ತಮವಾಗಿದ್ದರೂ ಕೂಡ ನಟನೆಯ ಬಗೆಗಿನ ಆಸಕ್ತಿ ಅವರನ್ನು ಸಿನಿ ರಂಗದೆಡೆಗೆ ಸೆಳೆಯಿತು. ಹೌದು, ಅಸಲಿಗೆ ಆಲಿಯಾ ಭಟ್ ಓದಿರುವುದು ಕೇವಲ 10ನೇ ತರಗತಿ. ಅವರು 10ನೇ ತರಗತಿಯಲ್ಲಿ ಶೇಕಡಾ 71 ಅಂಕಗಳನ್ನು ಪಡೆದಿದ್ದರಂತೆ.ಇದನ್ನು ಸ್ವತಃ ತಾವೇ ಹೇಳಿಕೊಳ್ಳುವ ಆಲಿಯಾ, "ನನಗೆ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಆಡಿಷನ್ ಬಗ್ಗೆ ಮಾಹಿತಿ ಸಿಕ್ಕಾಗ ಪಿಯುಸಿ ಪರೀಕ್ಷೆಯನ್ನೂ ಕೈ ಬಿಟ್ಟು ಆಡಿಷನ್ ಕೊಟ್ಟು ಸೆಲೆಕ್ಟ್ ಆದೆ. ಸಿನಿರಂಗದಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಬಯಕೆಯಿಂದ ಅಧ್ಯಯನವನ್ನು ಮಧ್ಯದಲ್ಲಿಯೇ ತೊರೆದೆ" ಎನ್ನುತ್ತಾರೆ.
ನಟನೆಯ ಹೊರತಾಗಿ, ಉದ್ಯಮಗಳಲ್ಲಿಯೂ ತೊಡಗಿದ್ದಾರೆ. ಹಾಗೇ ಸಿನಿಮಾ ಪ್ರೊಡಕ್ಷನ್ ಸೇರಿದಂತೆ ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಆಲಿಯಾ ನಿರ್ಮಿಸಿದ್ದ 'ಡಾರ್ಲಿಂಗ್ಸ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.
ನಟನೆಗಾಗಿ ವಿದ್ಯಾಭ್ಯಾಸವನ್ನು ತೊರೆದರೂ ಕೂಡ ಪುಸ್ತಕಗಳನ್ನು ಓದುವುದೆಂದರೆ ಆಲಿಯಾಗೆ ಅಚ್ಚು ಮೆಚ್ಚು. ಹಾಗಾಗಿ ಇಂದಿಗೂ ಅವರು ಪುಸ್ತಕವನ್ನು ಓದುವ ಅಭ್ಯಾಸವನ್ನು ಬಿಟ್ಟಿಲ್ಲ. ತಮ್ಮ ಬಳಿ ಇರುವ ಪುಸ್ತಕ ಸಂಗ್ರಹಗಳ ಬಗ್ಗೆ, ಓದುವ ಅಭಿರುಚಿಯ ಬಗ್ಗೆ ಅವರು ಆಗಾಗ ಹೇಳುತ್ತಿರುತ್ತಾರೆ. ಸದ್ಯಕ್ಕೆ ಸಖತ್ ಬ್ಯುಸಿಯಾಗಿರುವ ನಟಿ ವೇದಾಂಗ್ ರೈನಾ ಜೊತೆಗೆ 'ಜಿಗ್ರಾ'ದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಅದರ ಜೊತೆಗೆ ಯಶ್ ರಾಜ್ ಫಿಲ್ಮ್ಸ್ ಅವರ ಆಕ್ಷನ್ ಸಿನಿಮಾ 'ಆಲ್ಫಾ'ದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











