ಆಕೆಗೆ ಕೇವಲ ಹಣ ಬೇಕು ; 30 ವರ್ಷದ ನಟಿಯ ಜೊತೆ 62 ವರ್ಷದ ಗೋವಿಂದ ಅನೈತಿಕ ಸಂಬಂಧ-ಕಣ್ಣೀರು ಹಾಕಿ ಪತ್ನಿ ಹೇಳಿದ್ದೇನು ?
ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಮದುವೆಯಾದ ನಂತರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಬೇಕು. ಸಂಬಂಧ ಆಳವಾಗಿ ಬೇರೂರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ..ಹೊಂದಾಣಿಕೆ ಕೊರತೆ.. ದೈಹಿಕ ಅತೃಪ್ತಿ.. ಪ್ರೀತಿಯ ಕೊರತೆ.. ಹೀಗೆ ಮುಂತಾದ ಕಾರಣಗಳಿಂದ ಹಲವರು..
ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಇಂದು ವೈವಾಹಿಕ ಸಂಬಂಧ ಪವಿತ್ರವಾದ ಅನುಬಂಧ ಎನ್ನುವ ಮಾತಿಗೆ ಬೆಲೆ ಕೊಡುವವರು ತೀರಾ ಕಡಿಮೆಯಾಗಿದ್ದಾರೆ. ಈ ಸಾಲಿನಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ''ಗೋವಿಂದ'' ಕೂಡ ಇದ್ದಾರೆ. ಈ ಮಾತನ್ನು ನಾವಲ್ಲ. ಬದಲಿಗೆ ಖುದ್ದು ಗೋವಿಂದ ಅವರ ಪತ್ನಿ ಸುನಿತಾ ಕೆಲ ತಿಂಗಳ ಹಿಂದೆ ಹೇಳಿದ್ದರು.

ಈ ಕುರಿತು ''ಬಿಗ್ ಬಾಸ್ 13''ರ ಸ್ಫರ್ಧಿ ಪಾರಸ್ ಛಾಬ್ರಾಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಸುನಿತಾ, ಈಗೀಗ ಬಾಲಿವುಡ್‌ಗೆ ಬರುವ ಬಹುತೇಕ ಹೊಸ ನಾಯಕಿಯರಿಗೆ ''ಶುಗರ್ ಡ್ಯಾಡಿ''ಗಳೇ ಬೇಕು ಎಂದು ಹೇಳಿದ್ದರು.
ನನ್ನ ಗಂಡನಿಗೆ 30 ವರ್ಷದ ನಟಿಯ ಜೊತೆ ಅನೈತಿಕ ಸಂಬಂಧ ಇದೆ ಎನ್ನುವ ವಿಚಾರ ನನ್ನ ಕಿವಿಗೆ ಕೂಡ ಬಿದ್ದಿದೆ ಎಂದು ಹೇಳಿದ್ದ ಸುನಿತಾ, ಅವಳು ಯಾವಳೋ ಒಬ್ಬಳು ಮರಾಠಿ ನಟಿ ಎನ್ನುವುದು ನನಗೆ ಗೊತ್ತು. ಆದರೆ ರೆಡ್ ಹ್ಯಾಂಡ್ ಆಗಿ ನಾನು ನನ್ನ ಗಂಡನನ್ನು ಹಿಡಿಯುವವರೆಗೆ ನಾನು ಏನೂ ಹೇಳುವುದಿಲ್ಲ ಎಂದಿದ್ದರು. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎಂದು ಹೇಳಿದ್ದ ಸುನಿತಾ, ನನ್ನ ಕೈಗೆ ಇಬ್ಬರು ಸಿಕ್ಕರೆ ಆಗ ಇದೆ ಮಾರಿ ಹಬ್ಬ ಎಂದು ಗುಡುಗಿದ್ದರು.
ಇಂಥಾ ಸುನಿತಾ ಅಹುಜಾ ಈಗ ತಿಂಗಳ ನಂತರ ಮತ್ತೊಮ್ಮೆ ತಮ್ಮ ಪತಿಯ ಅನೈತಿಕ ಸಂಬಂಧದ ಕುರಿತು ಮಾತನಾಡಿದ್ದಾರೆ. ನನ್ನ ಗಂಡನ ಹಿಂದೆ ಬಿದ್ದಿರುವಾಕೆಗೆ ಕೇವಲ ಹಣ ಬೇಕಷ್ಟೇ ಎಂದು ಹೇಳಿದ್ದಾರೆ. ''E Times''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸುನಿತಾ 2025 ನನ್ನ ಪಾಲಿಗೆ ತುಂಬಾ ಕರಾಳ ವರ್ಷವಾಗಿತ್ತು ಎಂದು ಹೇಳಿದ್ದಾರೆ. ಒಬ್ಬ ಚೆಲುವೆಯ ಹಿಂದೆ ನನ್ನ ಗಂಡ ಬಿದ್ದಿರುವ ವಿಚಾರ ನನಗೆ ಗೊತ್ತಾಗಿದ್ದು ಇದೇ ವರ್ಷದಲ್ಲಿ ಎಂದು ಹೇಳಿರುವ ಸುನಿತಾ, ಅವಳು ನಟಿಯಲ್ಲ ಎನ್ನುವ ವಿಚಾರ ನನಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಅವಳು ನಟಿಯಲ್ಲ ಎನ್ನುವುದು ನನಗೆ ಗೊತ್ತಾಗಿದೆ ಎಂದು ಹೇಳಿರುವ ಸುನಿತಾ, ನಟಿಯರು ಈ ತರಹದ ಕೆಲಸಗಳನ್ನೆಲ್ಲಾ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅವಳು ಗೋವಿಂದನನ್ನು ಪ್ರೀತಿಸುವುದಿಲ್ಲ, ಅವಳಿಗೆ ಕೇವಲ ನನ್ನ ಗಂಡ ಮಾತ್ರ ಬೇಕು ಎಂದು ಹೇಳಿರುವ ಸುನಿತಾ ಹಣದಾಸೆಗೆ ತಮ್ಮ ಪತಿಯ ಹಿಂದೆ ಯುವತಿಯೊಬ್ಬಳು ಬಿದ್ದಿದ್ದಾಳೆ ಎನ್ನುವುದನ್ನು ಈ ಮೂಲಕ ಸ್ಪಷ್ಟಪಡಿಸಿದ್ದಾರೆ. ಮಾತನಾಡುತ್ತಾ ಭಾವುಕರಾಗಿದ್ದಾರೆ.

ಮುಂದುವರೆದು 2026ರಲ್ಲಿ ನನ್ನ ಬದುಕು ಶಾಂತಿಯುತವಾಗಿರಲಿ, ನನ್ನ ಬದುಕಿನಲ್ಲಿ ನೆಮ್ಮದಿ ನೆಲೆಯೂರಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿರುವ ಸುನಿತಾ ಅಹುಜಾ, ನನ್ನ ಗಂಡ ಗೋವಿಂದಗೆ ತನ್ನ ಜೀವನದಲ್ಲಿ ಕೇವಲ ಮೂರು ಮಹಿಳೆಯರು ಮಾತ್ರ ಮುಖ್ಯ ಎನ್ನುವುದು ಅರಿವು ಆಗಬೇಕು ಎಂದು ಹೇಳಿದ್ದಾರೆ. ಅವರ ತಾಯಿ, ಹೆಂಡ್ತಿ ಮತ್ತು ಮಗಳು ಇಷ್ಟೇ ಅವರ ಪ್ರಾಮುಖ್ಯತೆಯಾಗಿರಬೇಕು ಎಂದು ಹೇಳಿರುವ ಸುನಿತಾ, ನನ್ನ ಪತಿಯ ಮೇಲೆ ನಾಲ್ಕನೇ ಮಹಿಳೆಯ ಹಕ್ಕಿಲ್ಲ. ನಮ್ಮ ಬದುಕಿನಲ್ಲಿ ಬೇರೆ ಮಹಿಳೆಗೆ ಪ್ರವೇಶ ಇಲ್ಲ ಎಂದು ಹೇಳಿದ್ದಾರೆ.
ವೈಯಕ್ತಿಕ ಸಮಸ್ಯೆಗಳಿದ್ದರೂ ಕೂಡ ವೃತ್ತಿಪರವಾಗಿ ಈ ವರ್ಷ ಚೆನ್ನಾಗಿತ್ತು ಎಂದು ಹೇಳಿರುವ ಸುನಿತಾ ಅಹುಜಾ, 2025ರಲ್ಲಿ ನಾನು ನನ್ನದೇ ಯೂಟ್ಯೂಬ್ ಆರಂಭ ಮಾಡಿದೆ, ದೇವರ ದಯೆಯಿಂದ ಅಲ್ಲಿ ನನಗೆ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ. ಜನರು ನನಗೆ ಇಷ್ಟ ಪಟ್ಟಿದ್ದಾರೆ ಅದೇ ಖುಷಿಯ ವಿಚಾರ ಎಂದು ಹೇಳಿದ್ದಾರೆ.


Click it and Unblock the Notifications











