ನಟಿಯರು ಅಂದರೆ ವೇಶ್ಯೆಯರು ; ತಾಯಿಯಿಂದಲೇ ನಿಂದನೆ -ವಿರೋಧದ ನಡುವೆ ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ ಚೆಲುವೆ

ಮೊದಲೆಲ್ಲಾ ಚಿತ್ರರಂಗ ಅಂದರೆ ಅರೇ, ಅಲ್ಲಿ ನಮ್ಮಂತೋರು ಎಲ್ಲಿ ಬದುಕೋಕಾಗುತ್ತೆ, ದುಡ್ಡಿದ್ದವರಿಗೆ ಮಾತ್ರ ಅದು ಹೇಳಿ ಮಾಡಿಸಿದ ಪ್ರೊಫೆಷನ್‌ ಎಂದು ಅನೇಕರು ಹೇಳುತ್ತಿದ್ದರು. ಇಂತಹ ಹುಚ್ಚು ಆಲೋಚನೆಯನ್ನು ತಲೆಯಿಂದ ತೆಗೆದು ಹಾಕು ಎಂದು ತಮ್ಮ ಮಕ್ಕಳಿಗೆ ಹಿರಿಯರು ಹೇಳುತ್ತಿದ್ದರು. ಇನ್ನು, ಹೆಣ್ಣು ಮಕ್ಕಳ ಪಾಲಿಗಂತೂ ಚಿತ್ರರಂಗ ಎನ್ನುವುದು ಗಗನ ಕುಸುಮವಾಗಿತ್ತು. ಚಿತ್ರರಂಗ ಹೆಣ್ಣು ಮಕ್ಕಳಿಗೆ ಸುರಕ್ಷಿತವಾದ ಸ್ಥಳವಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು.

ಅವಕಾಶ ನೀಡುವ ನೆಪದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಾರೆ ಎಂದೇ ಅನೇಕರು ಅಂದುಕೊಂಡಿದ್ದರು. ಇಷ್ಟೇ ಅಲ್ಲ ಬೆಳ್ಳಿತೆರೆಯ ಮೇಲೆ ಚಿತ್ರ ನೋಡಿ ಖುಷಿ ಪಡುತ್ತಿದ್ದ ಹಲವರು ಕಲಾವಿದರನ್ನು ಅದರಲ್ಲಿಯೂ ಚಿತ್ರರಂಗದಲ್ಲಿನ ನಾಯಕಿಯರನ್ನು ಮತ್ತು ಮಹಿಳೆಯರನ್ನು ಗೌರವದಿಂದ ಕಾಣುತ್ತಿರಲಿಲ್ಲ. ಬದಲಿಗೆ ವೇಶ್ಯೆಯರು ಎಂದು ಭಾವಿಸುತ್ತಿದ್ದರು.

She Threatened to Slit Wrists Sayani Gupta Reveals Terrifying Battle to Pursue Acting

ಇಂತಹ ಚಿತ್ರರಂಗಕ್ಕೆ ತಮ್ಮ ಮನೆ ಮಗಳು ಹೋದರೆ ದಾರಿ ತಪ್ಪಿದ ಮಗಳಾಗುತ್ತಾಳೆ ಎಂಬ ಭಯದಲ್ಲಿ.. ಚಿತ್ರರಂಗಕ್ಕೆ ಹೋದರೆ ಸಮಾಜದಲ್ಲಿ ಮರ್ಯಾದೆ ಹೋಗುತ್ತೆ ಎಂಬ ಆತಂಕದಲ್ಲಿ ತಮ್ಮ ಮಕ್ಕಳ ಕನಸುಗಳನ್ನು ಹಲವರು ಚಿವುಟಿ ಹಾಕುತ್ತಿದ್ದರು. ಇಂತಹದ್ದೇ ಒಂದು ವಾತಾವರಣ ಸಯಾನಿ ಗುಪ್ತಾ ಅವರ ಮನೆಯಲ್ಲಿ ಕೂಡ ಇತ್ತು.

ಹೌದು, ಸಯಾನಿ ಗುಪ್ತಾ.. ಪಾತ್ರ ಯಾವುದೇ ಇರಲಿ ಆ ಪಾತ್ರಕ್ಕೆ ತನು-ಮನ ಅರ್ಪಿಸಿ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಕೆಲವೇ ಕೆಲ ಹಿಂದಿ ನಟಿಯರಲ್ಲಿ ಒಬ್ಬರು. ಬಾಲಿವುಡ್‌ನಲ್ಲಿ ಒಂದು ದಶಕ ಪೂರೈಸಿರುವ ಸಯಾನಿ ಇಲ್ಲಿಯವರೆಗೆ ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ.

''ಜಾಲಿ ಎಲ್‌.ಎಲ್.ಬಿ 2''.. ''ಪಾರ್ಚಡ್''.. ''ಜಗ್ಗಾ ಜಾಸೂಸ್''.. ''ಆರ್ಟಿಕಲ್ 15''.. ''ಮಾರ್ಗರಿಟಾ ವಿತ್ ಎ ಸ್ಟ್ರಾ'' ಇವರು ಅಭಿನಯಿಸಿರುವ ಕೆಲ ಪ್ರಮುಖ ಚಿತ್ರಗಳು. ಇನ್ನೂ ಕೇವಲ ನಟಿಯಾಗಿ ಅಷ್ಟೇ ಅಲ್ಲ ಗಾಯಕಿಯಾಗಿ ಕೂಡ ಸಯಾನಿ ಗುಪ್ತಾ ಗುರುತಿಸಿಕೊಂಡಿದ್ದಾರೆ. ''ಇನ್‌ಸೈಡ್ ಎಡ್ಜ್''.. ''ಫೋರ್ ಮೋರ್ ಶಾಟ್ಸ್''..''ದೆಹಲಿ ಕ್ರೈಮ್''.. ಸೇರಿ ಹಲವು ಜನ ಮನ ಗೆದ್ದ ವೆಬ್ ಸರಣಿಗಳಲ್ಲಿ ಕೂಡ ಸಯಾನಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇಂಥಾ ಸಯಾನಿ ಗುಪ್ತಾ ಅವರಿಗೆ ಅವರ ತಾಯಿ ಚಿತ್ರರಂಗಕ್ಕೆ ಹೋಗದಂತೆ ತಡೆಯುವ ಪ್ರಯತ್ನವನ್ನು ಹಲವಾರು ಬಾರಿ ಮಾಡಿದ್ದರು. ಮನೆಯಲ್ಲಿಯೇ ದಿಗ್ಭಂದನ ಹಾಕಿದ್ದರು. ಭಾವನಾತ್ಮಕವಾಗಿ ಬ್ಲ್ಯಾಕ್‌ ಮೇಲ್ ಕೂಡ ಮಾಡಿದ್ದರು. ನಿಂದಿಸುತ್ತಿದ್ದರು. ತಮ್ಮ ತಾಯಿಯ ಈ ನಡೆಯನ್ನು ಸಯಾನಿ ನೆನಪು ಮಾಡಿಕೊಂಡಿದ್ದಾರೆ.

She Threatened to Slit Wrists Sayani Gupta Reveals Terrifying Battle to Pursue Acting

ಈ ಕುರಿತು ''ಸೈರಸ್ ಬ್ರೋಚಾ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಯಾನಿ, 21ರ ಹರೆಯದಲ್ಲಿ ನನಗೆ ಕೈತುಂಬಾ ಸಂಬಳ ಬರುತ್ತಿತ್ತು. ಕಾರ್ಪೋರೇಟ್ ಕಂಪನಿಯ ಕೆಲಸ ಅದು. 9 ರಿಂದ 5 ಗಂಟೆವರೆಗೆ ಕೆಲಸ ಎಂದು ಹೇಳಿದ್ದಾರೆ. ಆದರೆ.. ನನ್ನ ಕನಸು.. ನನ್ನ ಗುರಿ ಅದಾಗಿರಲಿಲ್ಲ. ಹೀಗಾಗಿ ಒಂದೂವರೆ ವರ್ಷದ ನಂತರ ನಾನು ನನ್ನ ಕೆಲಸಕ್ಕೆ ರಾಜಿನಾಮೆ ನೀಡಿ ಹೊರ ಬಂದೆ ಎಂದು ಹೇಳಿರುವ ಸಯಾನಿ ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾಗೆ (ಎಫ್‌ಟಿಐಐ) ಸೇರಿ ನಾನು ನಟಿಯಾಗುವ ಪ್ರಯತ್ನಕ್ಕೆ ಮುಂದಾದೆ ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ನನ್ನ ತಂದೆಯ ಬೆಂಬಲ ಇತ್ತಾದರೂ ನನ್ನ ತಾಯಿ ತುಂಬಾನೇ ವಿರೋಧ ಮಾಡಲು ಶುರು ಮಾಡಿದ್ದರು ಎಂದು ಹೇಳಿರುವ ಸಯಾನಿ, ನಾನು ಆಕ್ಟಿಂಗ್ ಮಾಡಬಾರದೆಂದು ಕೋಣೆಯಲ್ಲಿ ನನ್ನನ್ನೂ ಕೂಡಿ ಹಾಕುತ್ತಿದ್ದರು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಮಾತು ಮೀರಿ ಹೋದರೆ ಕೈಕುಯ್ದುಕೊಳ್ಳುವ ಬೆದರಿಕೆಯನ್ನು ಕೂಡ ನನ್ನ ತಾಯಿ ಹಾಕುತ್ತಿದ್ದರು ಎಂದು ಹೇಳಿರುವ ಸಯಾನಿ ಕ್ಯಾಮರಾ ಎದುರಿಸುವ ಮೊದಲು ಮನೆಯ ಈ ಸೆರಮನೆಯಿಂದ ನಾನು ಹೊರ ಬರಬೇಕಿತ್ತು ಎಂದು ನೆನಪು ಮಾಡಿಕೊಂಡಿದ್ದಾರೆ.

ಮುಂದುವರೆದು ಹಲವರಲ್ಲಿ ಆಗ ನಟಿಯರು ಅಂದರೆ ವೈಶ್ಯೆಯರು ಎನ್ನುವ ಮನೋಭಾವ ಇತ್ತು. ನನ್ನ ತಾಯಿಯಲ್ಲಿಯೂ ಕೂಡ ಇದೇ ಮನೋಭಾವ ಇತ್ತು ಎಂದು ಹೇಳಿರುವ ಸಯಾನಿ ಅವರೆಲ್ಲ ವೇಶ್ಯೆಯರು ಅಲ್ಲಿ ನೀನು ಹೋಗಬೇಡ ಎಂದು ನನ್ನ ತಾಯಿ ಹೇಳುತ್ತಿದ್ದರು ಎಂದಿದ್ದಾರೆ. ನಾನು ತಾಯಿಯ ವಿರೋಧದ ನಡುವೆ ಕೂಡ ಆ ನಂತರ ಎಫ್‌ಟಿಐಐಗೆ ಸೇರಿದೆ ಆಗ ಒಂದು ತಿಂಗಳು ನನ್ನ ಜೊತೆ ಮಾತನಾಡುವುದನ್ನು ನನ್ನ ತಾಯಿ ಬಿಟ್ಟಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ಕೊನೆಗೆ ಒಂದು ದಿನ ನಾನು ಹೋಗುತ್ತಿದ್ದ ಎಫ್‌ಟಿಐಐ ಕ್ಯಾಂಪಸ್‌ಗೆ ನನ್ನ ತಾಯಿ ಬಂದರು. ಆಗ ಅವರ ಮನಸ್ಥಿತಿ ಬದಲಾಯ್ತು ಎಂದಿದ್ದಾರೆ. ಒಟ್ನಲ್ಲಿ ಚಿತ್ರರಂಗದಲ್ಲಿ ಕೇವಲ ಅವಕಾಶಕ್ಕೆ ಮಾತ್ರ ಅಲ್ಲ ಒಮ್ಮೊಮ್ಮೆ ಮನೆಯಲ್ಲಿ ಮನೆಯವರ ವಿರುದ್ಧ ಕೂಡ ತಮ್ಮ ಕನಸು ನನಸು ಮಾಡಿಕೊಳ್ಳಲು ಹೋರಾಡಬೇಕಾಗುತ್ತೆ ಎನ್ನುವುದಕ್ಕೆ ಸಯಾಮಿ ಗುಪ್ತಾ ಅವರ ಈ ಅನುಭವದ ಮಾತುಗಳು ನಿದರ್ಶನ.

More from Filmibeat

English summary
From being locked in her room to becoming a star: Discover Sayani Gupta’s journey of defying her family’s extreme opposition to follow her passion for cinema.
Read more about: actress dream
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X