For Quick Alerts
  ALLOW NOTIFICATIONS  
  For Daily Alerts

  ಗಂಡಸರು ಹತ್ತು ಮದುವೆಯಾಗಬಹದು ಹೆಂಗಸರು ಎರಡಾದರೆ ತಪ್ಪಾ ಎಂದ 'ಪಂಕಜಾ'

  |

  'ಹುಡುಗರು' ಸಿನಿಮಾದಲ್ಲಿ ಪಂಕಜಾ ಆಗಿ ಕುಣಿದು ಕುಪ್ಪಳಿಸಿದ್ದ ಶೆಫಾಲಿ ಜರಿವಾಲ ತಮ್ಮ ಬಿಂದಾಸ್ ಲುಕ್‌ಗಳಿಂದ ಆಗಾಗ್ಗೆ ವೈರಲ್ ಆಗುತ್ತಿರುತ್ತಾರೆ. ದೇಹಸಿರಿ ಪ್ರದರ್ಶಿಸಲು ಹಿಂಜರಿಯದ ಶೆಫಾಲಿ ಮಾತಿನ ಚಾಟಿ ಬೀಸುವುದರಲ್ಲೂ ಮುಂದು.

  ಶೆಫಾಲಿ ಈಗ ಎರಡನೇ ಮದುವೆ ಆಗಿ ಆರಾಮವಾಗಿದ್ದಾರೆ ಆದರೆ ಕೆಲವರು ಶಫಾಲಿಯ ಎರಡನೇ ಮದುವೆ ಬಗ್ಗೆ ಕೊಂಕು ಮಾತಾಡಿದ್ದಾರೆ. ಅವರಿಗೆ ಸೂಕ್ತ ಉತ್ತರವನ್ನೇ ನೀಡಿದ್ದಾರೆ ಶೆಫಾಲಿ.

  ಶೆಫಾಲಿ ಜರಿವಾಲ್ 2004 ರಲ್ಲಿ ಹರ್ಮೀತ್ ಸಿಂಗ್ ಜೊತೆ ವಿವಾಹವಾದರು. ಆಗಿನ್ನೂ ಅವರಿಗೆ 21 ವರ್ಷ ವಯಸ್ಸು. ನಂತರ 2009 ರಲ್ಲಿ ಹರ್ಮೀತ್ ಸಿಂಗ್‌ನಿಂದ ವಿಚ್ಛೇಧನ ಪಡೆದು ಒಂಟಿಯಾದರು ಶೆಫಾಲಿ.

  ನಂತರ 2014 ರಲ್ಲಿ ಪರಾಗ್ ತ್ಯಾಗಿ ಅನ್ನು ವಿವಾಹವಾಗಿದ್ದಾರೆ ಶೆಫಾಲಿ. ಈಗ ಅವರೊಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಶೆಫಾಲಿ, ''ನಾನು ಮತ್ತೆ ಪ್ರೀತಿಸುತ್ತೇನೆ. ಮದುವೆ ಆಗುತ್ತೇನೆ ಎಂದುಕೊಂಡಿರಲಿಲ್ಲ'' ಎಂದಿದ್ದಾರೆ.

  ಗಂಡಸರು ಹತ್ತಾಗಬಹುದು, ನಾವು ಎರಡಾಗಬಾರದಾ: ಶೆಫಾಲಿ

  ಗಂಡಸರು ಹತ್ತಾಗಬಹುದು, ನಾವು ಎರಡಾಗಬಾರದಾ: ಶೆಫಾಲಿ

  ''ವಿಚ್ಛೇಧನ ಪಡೆದು ಎರಡನೇ ಮದವೆ ಆಗುವ ಮಹಿಳೆಯರನ್ನು ತುಚ್ಛವಾಗಿ ಕಾಣುವ ಜನರ ಬಗ್ಗೆ ಮಾತನಾಡಿರುವ ಶೆಫಾಲಿ, ''ಅದ್ಯಾಕೆ ಹಾಗೆ? ಗಂಡಸರು ಹತ್ತು ಬಾರಿ ಬೇಕಾದರು ಮದುವೆ ಆಗಬಹುದು? ಹೆಣ್ಣು ಮಕ್ಕಳು ಎರಡು ಬಾರಿ ಮದುವೆ ಆದರೆ ಸಾಕು ಅವಳನ್ನು ಭಿನ್ನ ದೃಷ್ಟಿಯಿಂದ ನೋಡಲಾರಂಭಿಸುತ್ತಾರೆ'' ಎಂದಿದ್ದಾರೆ ಶೆಫಾಲಿ.

  ಇವಳದ್ದೇ ತಪ್ಪಿರುತ್ತದೆ ಎಂದಿದ್ದರು: ಶೆಫಾಲಿ

  ಇವಳದ್ದೇ ತಪ್ಪಿರುತ್ತದೆ ಎಂದಿದ್ದರು: ಶೆಫಾಲಿ

  ''ನನ್ನ ವಿಷಯದಲ್ಲಿಯೂ ಹೀಗೆಯೇ ಆಯಿತು. ಈಕೆಯೇ ಏನೋ ಮಾಡಿರುತ್ತಾಳೆ. ಈಕೆಯದ್ದೇ ತಪ್ಪಿರುತ್ತದೆ. ಈಕೆ 'ಕಾಟಾ ಲಗಾ' ಹಾಡಿನ ಹುಡುಗಿಯಲ್ಲವೇ. ಈಕೆ ಬಹಳ ಬೋಲ್ಡ್ ಆಗಿದ್ದಾಳೆ. ಗ್ಲಾಮರಸ್ ಆಗಿ ನಟಿಸುತ್ತಾಳೆ ಎಂದೆಲ್ಲ ಮಾತನಾಡಿಕೊಂಡರು'' ಎಂದಿದ್ದಾರೆ ಶೆಫಾಲಿ. ಈ ನಟಿ ಹಲವು ಐಟಂ ಹಾಡುಗಳಲ್ಲಿ ನರ್ತಿಸಿದ್ದಾರೆ. 'ಕಾಟಾ ಲಗಾ' ಶೆಫಾಲಿಯ ವೈರಲ್ ಹಾಡು.

  ಸಿನಿಮಾ ಪಾತ್ರವನ್ನು ಹೋಲಿಸಿ ಮಾತನಾಡುತ್ತಾರೆ: ಶೆಫಾಲಿ

  ಸಿನಿಮಾ ಪಾತ್ರವನ್ನು ಹೋಲಿಸಿ ಮಾತನಾಡುತ್ತಾರೆ: ಶೆಫಾಲಿ

  ''ಸಿನಿಮಾದ ಪಾತ್ರಕ್ಕೂ ನಿಜಜೀವನಕ್ಕೂ ಹೋಲಿಸಿ ಮಾತನಾಡುತ್ತಾರೆ. ಯಾರೊ ಒಬ್ಬರು ಸಿನಿಮಾದಲ್ಲಿ ದೆವ್ವದ ಪಾತ್ರ ಮಾಡಿದ್ದಾರೆಂದರೆ, ವಿಲನ್ ಪಾತ್ರ ಮಾಡಿದ್ದಾರೆಂದರೆ ನಿಜ ಜೀವನದಲ್ಲಿಯೂ ಹಾಗೆಯೇ ಇರುತ್ತಾರೇನು. ಬೋಲ್ಡ್ ಪಾತ್ರಗಳು ಸಹ ಹಾಗೆಯೇ'' ಎಂದಿದ್ದಾರೆ ಶೆಫಾಲಿ.

  lockdownನಲ್ಲಿ ಮದುವೆಯಾದ ಸೆಲೆಬ್ರಿಟಿಗಳು!! | Filmibeat Kannada
  ನನ್ನ ಕುಟುಂಬದವರು, ಸ್ನೇಹಿತರು ಸಹಾಯ ಮಾಡಿದರು

  ನನ್ನ ಕುಟುಂಬದವರು, ಸ್ನೇಹಿತರು ಸಹಾಯ ಮಾಡಿದರು

  ''ನನಗೆ ಮದುವೆಯಾದಾಗ ಹಾಗೂ ವಿಚ್ಛೇಧನ ಆದಾಗ ನನಗೆ ಹೆಚ್ಚು ವಯಸ್ಸಾಗಿರಲಿಲ್ಲ. ಆ ಸಮಯದಲ್ಲಿ ನಾನು ಕುಸಿದು ಹೋಗಿದ್ದೆ. ಆದರೆ ನನ್ನ ಕುಟುಂಬ, ನನ್ನ ಗೆಳೆಯರು ನನ್ನ ಬೆಂಬಲಕ್ಕೆ ನಿಂತರು. ನಾನು ಮತ್ತೆ ಪ್ರೀತಿಸುತ್ತೇನೆ, ಮದುವೆ ಆಗುತ್ತೇನೆ ಎಂದುಕೊಂಡಿರಲೇ ಇಲ್ಲ ಅಷ್ಟು ಖಿನ್ನತೆಯಲ್ಲಿದ್ದೆ. ಆದರೆ ಕಾಲ ಸರಿದಂತೆ ಎಲ್ಲವೂ ಸಾಧ್ಯವಾಯಿತು'' ಎಂದಿದ್ದಾರೆ ಶೆಫಾಲಿ.

  English summary
  Actress Shefali Jariwala asks, why people judge women who marry twice. She married twice.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X