"ಛಾಯಾಗ್ರಾಹಕರು ನನ್ನ ಹಿಂಬದಿ ಫೋಟೊ ಕ್ಲಿಕ್ಕಿಸಿದರೆ ಪರವಾಗಿಲ್ಲ" ಎಂದ ಬಿಂದಾಸ್ ಬೆಡಗಿ

ಫೋಟೊಗ್ರಫರ್‌ಗಳ ಮೇಲೆ ಕೆಲವೊಮ್ಮೆ ನಟಿಯರು ಬೇಸರ ವ್ಯಕ್ತಪಡಿಸುವುದು ಇದೆ. ನಮ್ಮ ಹಿಂಭಾಗವನ್ನು ಅಥವಾ ಪುಷ್ಠವನ್ನು ಜೂಮ್‌ ಮಾಡಿ ಕೆಲವರು ಫೋಟೊ, ವೀಡಿಯೋ ಕ್ಲಿಕ್ಕಿಸುತ್ತಾರೆ ಎಂದು ಮೃಣಾಲ್, ಜಾನ್ವಿ ಕಪೂರ್ ಸೇರಿದಂತೆ ಕೆಲ ನಟಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ರೀತಿ ಮಾಡಬೇಡಿ ಎಂದು ಕೆಲವರು ಮನವಿ ಕೂಡ ಮಾಡಿದ್ದಾರೆ.

ಇತ್ತೀಚೆಗೆ 'ಹೆಬ್ಬುಲಿ' ಸಿನಿಮಾ ನಟಿ ಅಮಲಾ ಪೌಲ್ ಕೇರಳದ ಕಾಲೇಜ್‌ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಈ ವೇಳೆ ಆಕೆ ಧರಿಸಿದ್ದ ಡ್ರೆಸ್‌ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಕಾಲೇಜಿಗೆ ಇಂತಹ ಕಾಸ್ಟ್ಯೂಮ್‌ನಲ್ಲಿ ಹೋಗೋದಾ? ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಮಲಾ, ನನ್ನ ಬಟ್ಟೆ ಚೆನ್ನಾಗಿಯೇ ಇತ್ತು. ಎಲ್ಲಿಗೆ ಯಾವ ಬಟ್ಟೆ ಧರಿಸಬೇಕು ಎನ್ನುವುದು ನನಗೆ ಗೊತ್ತು. ಕ್ಯಾಮರಾಮನ್‌ಗಳು ಆ ರೀತಿ ಫೋಟೊ, ವೀಡಿಯೋ ಮಾಡಿದ್ದು ಅವರ ತಪ್ಪು ಎಂದಿದ್ದರು.

Shefali Jariwala reacts on paparazzi clicking her from behind

ಮುಂಬೈ ಬೆಡಗಿ ಶೆಫಾಲಿ ಜರಿವಾಲಾ ಮಾತ್ರ ಇದಕ್ಕೆ ಭಿನ್ನವಾದ ಹೇಳಿಕೆ ಕೊಟ್ಟಿದ್ದಾರೆ. ಪಾಪರಾಜಿಗಳು ಆ ರೀತಿ ಫೋಟೊ, ವೀಡಿಯೋ ತೆಗೆಯುವುದರಲ್ಲಿ ತಪ್ಪೇನು ಇಲ್ಲ ಎನ್ನುವಂತೆ ಮಾತನಾಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಪ್ರೇಕ್ಷಕರು ಏನು ಕೇಳುತ್ತಾರೋ ಅದನ್ನು ಫೋಟೊಗ್ರಾಫರ್ಸ್ ಹಾಕುತ್ತಿದ್ದಾರೆ ಬಿಡಿ ಎಂದು ಹೇಳಿ ಶೆಫಾಲಿ ಜರಿವಾಲಾ ಅಚ್ಚರಿ ಮೂಡಿಸಿದ್ದಾರೆ.

'ಕಾಂಟಾ ಲಗಾ' ಆಲ್ಬಮ್ ಸಾಂಗ್‌ನಿಂದ ಜನಪ್ರಿಯತೆ ಸಾಧಿಸಿದ ಶೆಫಾಲಿ ಜರಿವಾಲಾ ಬಳಿಕ ಹಿಂದಿ ಬಿಗ್‌ಬಾಸ್ ಶೋಗೂ ಹೋಗಿದ್ದರು. ಕನ್ನಡದಲ್ಲಿ 'ಹುಡುಗರು' ಚಿತ್ರದ ಸ್ಪೆಷಲ್‌ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದರು. 'ತೊಂದ್ರೆ ಇಲ್ಲಾ ಪಂಕಜಾ' ಹಾಡಿಗೆ ಬಿಂದಾಸ್ ಆಗಿ ಕುಣಿದಿದ್ದರು. ನಾನು ವರ್ಕ್‌ಔಟ್ ಮಾಡಿ ನನ್ನ ದೇಹವನ್ನು ಸುಂದರವಾಗಿಟ್ಟುಕೊಂಡಿದ್ದೇನೆ. ಹಾಗಾಗಿ ಹಿಂಬದಿ ಫೋಟೊ, ವೀಡಿಯೋ ಕ್ಲಿಕ್ಕಿಸಿದರೆ ಸಮಸ್ಯೆ ಇಲ್ಲ ಎಂದು ಆಕೆ ಹೇಳಿದ್ದಾರೆ.

"ಫೋಟೊಗ್ರಫರ್ಸ್ ಹಿಂಬದಿ ಕ್ಯಾಮರಾ ಫೋಕಸ್ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ. ನಿಜ ಹೇಳಬೇಕು ಅಂದ್ರೆ ನನ್ನ ಪುಷ್ಠದ ಭಾಗಕ್ಕೆ ನಾನು ಹೆಚ್ಚು ವರ್ಕ್‌ಔಟ್ ಮಾಡ್ತೀನಿ. ಚೆನ್ನಾಗಿ ಕಂಡರೆ ಪರವಾಗಿಲ್ಲ. ನಾನೇನು ಅಂದುಕೊಳ್ಳಲ್ಲ" ಎಂದಿದ್ದಾರೆ.

ನಾನು ಜಿಮ್‌ನಲ್ಲಿ ಕರಸತ್ತು ಮಾಡಿ ದೇಹವನ್ನು ಸದೃಢವಾಗಿಟ್ಟುಕೊಂಡಿದ್ದೇನೆ. ಯಾರಾದರೂ ಮೆಚ್ಚಿ ಮಾತನಾಡಿದರೆ ಪರವಾಗಿಲ್ಲ. ನಾನೇನು ಚಡ್ಡಿ ಹಾಕ್ಕೊಂಡು ಸುತ್ತಾಡುತ್ತಿಲ್ಲ. ನಾನು ಪೂರ್ತಿ ಬಟ್ಟೆ ಹಾಕಿಕೊಂಡು ಹೋಗುತ್ತೇನೆ. ನೀನು ನಿಮ್ಮ ದೇಹದ ಭಾಗವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ, ಅದಕ್ಕಂತ ಬುರ್ಖಾ ಧರಿಸಿ ಓಡಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಫೋಟೊಗ್ರಫರ್ಸ್ ಕೆಟ್ಟವರಲ್ಲ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಕೆಲ ನಟಿಯರು ಈ ಬಗ್ಗೆ ಬೇಸರ ವ್ಯಕ್ತಪಡಿಸುವುದು ಕೂಡ ಸ್ವಾಗತಾರ್ಹ. ಎಲ್ಲರಿಗೂ ಅವರದ್ದೇ ಅಭಿಪ್ರಾಯ ಇರುತ್ತದೆ. ಹಾಗೆ ನೋಡಿದರೆ ಸಾಮಾನ್ಯ ಜನರು ತಮ್ಮ ಮೊಬೈಲ್‌ನಲ್ಲಿ ಈ ರೀತಿ ಜೂಮ್ ಮಾಡಿ ಹಂಬದಿ ಫೋಟೊ ಕ್ಲಿಕ್ಕಿಸುತ್ತಾರೆ. ಎಲ್ಲರನ್ನೂ ತಡೆಯಲು ಸಾಧ್ಯವಿಲ್ಲ ಅಲ್ಲವೇ? ಕೆಲವರು ಇದನ್ನು ಅರ್ಥಮಾಡಿಕೊಂಡರೆ ಪರವಾಗಿಲ್ಲ" ಎಂದು ಶೆಫಾಲಿ ಜರಿವಾಲಾ ವಿವರಿಸಿದ್ದಾರೆ.

ಶೆಫಾಲಿ ಜರಿವಾಲಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆಲ್ಬಮ್‌ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕುಣಿದಿದ್ದಾರೆ. ಹಿಂದಿ ಬಿಗ್‌ಬಾಸ್-13 ಸ್ಪರ್ಧಿಯಾಗಿ 65 ದಿನ ದೊಡ್ಮನೆ ಒಳಗೆ ಇದ್ದಿದ್ದು ವಿಶೇಷ. 'ಬೇಬಿ ಕಂ ನಾ' ಎನ್ನುವ ಒಂದು ವೆಬ್ ಸೀರಿಸ್‌ನಲ್ಲಿ ಬಣ್ಣ ಹಚ್ಚಿದ್ದು ಇದೆ.

More from Filmibeat

English summary
Shefali Jariwala says she doesn't mind photographers clicking her back;
Read more about: bollywood hindi actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X