ಹುಡುಗರು ಖ್ಯಾತಿಯ ಶೆಫಾಲಿ ನಿಧನ ; ಚಂದ್ರ-ಕುಜ-ಕೇತು. ಹಠಾತ್ ಸಾವು, ನಿಜವಾಯ್ತು ಬಿಗ್ ಬಾಸ್ ಸ್ಫರ್ಧಿಯ ಭವಿಷ್ಯ ?
ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ. ಈ ವಾದ-ವಿವಾದಗಳು ಏನೇ ಇರಲಿ ಆದರೆ ಸದ್ಯ ಶೆಫಾಲಿ ಜರಿವಾಲಾ ವಿಚಾರದಲ್ಲಿ ಹತ್ತು ತಿಂಗಳ..
ಹಿಂದೆ ಪರಾಸ್ ಛಾಬ್ರಾ ನುಡಿದ ಭವಿಷ್ಯ ನಿಜವಾಗಿದೆಯಾ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಪರಾಸ್ ಛಾಬ್ರಾ ಮತ್ತು ಶೆಫಾಲಿ ಅವರ ಸಂದರ್ಶನದ ತುಣುಕು ವೈರಲ್ ಕೂಡ ಆಗುತ್ತಿದೆ.

ಹೌದು ಪರಾಸ್ ಛಾಬ್ರಾ.. ಹಿಂದಿ ಬಿಗ್ ಬಾಸ್ ಸೀಸನ್ 13ರ ಸ್ಫರ್ಧಿ. ಇದೇ ಸೀಸನ್‌ನಲ್ಲಿ ಹೃದಯಾಘಾತಕ್ಕೆ ಬಲಿಯಾದ ಸಿದ್ಧಾರ್ಥ್ ಶುಕ್ಲಾ ಮತ್ತು ಶೆಫಾಲಿ ಜರಿವಾಲಾ ಕೂಡ ಭಾಗವಹಿಸಿದ್ದರು. ಸಿದ್ಧಾರ್ಥ್ ಶುಕ್ಲಾ ಈ ಸೀಸನ್ ನ ವಿನ್ನರ್ ಆದರೆ ಪರಾಸ್ ಛಾಬ್ರಾ ಕೊನೆಯ ಹಂತದವರೆಗೆ ಇದ್ದರು. ಹತ್ತು ಲಕ್ಷಕ್ಕೆ ತೃಪ್ತಿ ಪಟ್ಟಿದ್ದರು.
ಇನ್ನೂ ಶೆಫಾಲಿ ಹೆಚ್ಚು ಕಡಿಮೆ ಮನೆಯಲ್ಲಿ 120 ದಿನ ಇದ್ದರು. ಇಂಥಾ ಪರಾಸ್ ಛಾಬ್ರಾ ಹತ್ತು ತಿಂಗಳ ಹಿಂದೆ ಶೆಫಾಲಿ ಜರಿವಾಲಾ ಅವರ ಸಂದರ್ಶನ ಮಾಡಿದ್ದರು. ಶೆಫಾಲಿ ಜೊತೆ ಹಲವಾರು ವಿಚಾರಗಳ ಕುರಿತು ಚರ್ಚೆ ಮಾಡಿದ್ದರು. ಇದೇ ಸಮಯದಲ್ಲಿ ಸಾವಿನ ಭವಿಷ್ಯವನ್ನು ಕೂಡ ಪರಾಸ್ ಹೇಳಿದ್ದರು.
ಈ ಕುರಿತು ಮಾತನಾಡಿದ್ದ ಪರಾಸ್ ಛಾಬ್ರಾ ನಾನು ನಿಮ್ಮ ಜಾತಕ ನೋಡಿದೆ, ನಿಮ್ಮ ಜನ್ಮ ಕುಂಡಲಿಯ 8ನೇ ಮನೆಯಲ್ಲಿ ಚಂದ್ರ, ಬುದ್ಧ ಮತ್ತು ಕೇತು ಗ್ರಹಗಳು ಕುಳಿತಿವೆ. ಚಂದ್ರ ಮತ್ತು ಕೇತು ಗ್ರಹಗಳು ತುಂಬಾ ಕೆಟ್ಟ ಪರಿಣಾಮಗಳು ನಿಮ್ಮ ಮೇಲೆ ಬೀರಲಿವೆ ಎಂದು ಹೇಳಿದ್ದರು.
8ನೇ ಮನೆ ನಷ್ಟ.. ಇದರ ಜೊತೆಗೆ ಬುಧ ಗ್ರಹ ಕೂಡ ಇದ್ದು.. ಇದು ಖ್ಯಾತಿ, ಗುಪ್ತ ರಹಸ್ಯಗಳು, ತಾಂತ್ರಿಕ ಸಂಬಂಧಿತ ವಿಷಯಗಳನ್ನು ಸಹ ಸೂಚಿಸುತ್ತದೆ ಎಂದು ಶೆಫಾಲಿಗೆ ಹೇಳಿದ್ದ ಪರಾಸ್ ಛಾಬ್ರಾ ಹಠಾತ್ ಸಾವು ಕೂಡ ಸಂಭವಿಸಬಹುದು ಎಂದು ಹೇಳಿದ್ದರು. ಆತಂಕ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಸೂಚಿಸುತ್ತಿದೆ ಎಂದು ಕೂಡ ಶೆಫಾಲಿ ಅವರಿಗೆ ಪರಾಸ್ ಛಾಬ್ರಾ ಹೇಳಿದ್ದರು.

ದುರಾದೃಷ್ಟವಶಾತ್ ಪರಾಸ್ ಛಾಬ್ರಾ ಅವರ ಈ ಭವಿಷ್ಯವಾಣಿ ನಿಜವಾಗಿದ್ದು, ಶೆಫಾಲಿ ಜರಿವಾಲಾ ಮತ್ತು ಬಿಗ್ ಬಾಸ್ ಅಭಿಮಾನಿಗಳು ಈ ಭವಿಷ್ಯವಾಣಿ ಕೇಳಿ ಆಘಾತಕ್ಕೊಳಗಾಗಿದ್ದಾರೆ. ಹಲವರು ತಮ್ಮ ಮನದ ಮಾತುಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಪರಾಸ್ ಅವರನ್ನು ಗುರಿಯಾಗಿಸಿಕೊಂಡು ಕೆಂಡ ಕೂಡ ಕಾರುತ್ತಿದ್ದಾರೆ.
ಸದ್ಯ ಪರಾಸ್ ಛಾಬ್ರಾ ನುಡಿದ ಭವಿಷ್ಯವಾಣಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ್ಹಾಗೇ ಇದೇ ಸಂದರ್ಶನದಲ್ಲಿ ಪರಾಸ್ ಅವರ ಈ ಮಾತುಗಳಿಗೆ ಉತ್ತರಿಸಿದ್ದ ಶೆಫಾಲಿ ತಾವು ಮೂರ್ಛೆ ರೋಗದಿಂದ { ಅಪಸ್ಮಾರ } ಬಳಲುತ್ತಿದ್ದೇ ಎಂದು ಕೂಡ ಹೇಳಿದ್ದರು. ಹತ್ತನೇ ತರಗತಿಯಲ್ಲಿದ್ದಾಗ ನನಗೆ ಮೊದಲ ಬಾರಿಗೆ ಸೆಳೆತ ಕಾಣಿಸಿಕೊಂಡಿತ್ತು, ಈ ನರವೈಜ್ಞಾನಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುವ ಔಷಧಿಗಳಿವೆ ಎಂದು ಹೇಳಿದ್ದ ಶೆಫಾಲಿ ನೀವು ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಧ್ಯಾನ ಮತ್ತು ಯೋಗ ಇದರಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ಕೂಡ ಹೇಳಿದ್ದರು.
ಕಳೆದ 20 ವರ್ಷಗಳಿಂದ ನಾನು ಅಪಸ್ಮಾರದಿಂದ ಮುಕ್ತಳಾಗಿದ್ದೇನೆ ಮತ್ತು ನಾನು ಅದರ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಹೇಳಿದ್ದ ಶೆಫಾಲಿ ವೈದ್ಯಕೀಯ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ಹೇಳಿದ್ದರು.


Click it and Unblock the Notifications











