ಸಿದ್ಧಾರ್ಥ್ ಇಲ್ಲದ ನೋವು: ಊಟ ಮಾಡ್ತಿಲ್ಲ, ನಿದ್ದೆ ಮಾಡ್ತಿಲ್ಲ ಗೆಳತಿ

ನೂರಾರು ಕನಸುಗಳನ್ನು ಕಂಡಿದ್ದ ಬಾಲಿವುಡ್ ಯುವ ನಟ ಸಿದ್ಧಾರ್ಥ್ ಶುಕ್ಲಾ ಅಕಾಲಿಕ ಮರಣಕ್ಕೆ ತುತ್ತಾದರು. ಸೆಪ್ಟೆಂಬರ್ 2 ರಂದು ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದರು. ಸಿದ್ಧಾರ್ಥ್ ಸಾವನ್ನು ಯಾರೊಬ್ಬರು ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ವಿಶೇಷವಾಗಿ ಅವರ ಆಪ್ತರು, ಜೊತೆಯಲ್ಲಿ ಸಮಯ ಕಳೆದವರು, ಕುಟುಂಬಸ್ಥರು ನೋವು ಹೇಳತೀರದು.

ಸಿದ್ಧಾರ್ಥ್ ಶುಕ್ಲಾ ಜೊತೆ ಹೊಸ ಬದುಕು ಕಟ್ಟಿಕೊಳ್ಳಬೇಕು, ಸುಂದರ ದಾಂಪತ್ಯ ಸಾಗಿಸಬೇಕು ಎಂದು ಕನಸು ಕಂಡಿದ್ದ ಗೆಳತಿ ಶೆಹನಾಜ್ ಗಿಲ್ ಪರಿಸ್ಥಿತಿ ಬಹಳ ಕಷ್ಟಕರವಾಗಿದೆ. ಸಿದ್ಧಾರ್ಥ್ ಇಲ್ಲದ ನೋವು ಆಕೆಯನ್ನು ಬೆಂಬಿಡದೆ ಕಾಡುತ್ತಿದೆ. ಊಟ ಮಾಡ್ತಿಲ್ಲ. ನಿದ್ರೆ ಮಾಡ್ತಿಲ್ಲ. ಪ್ರತಿದಿನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ ಎಂಬ ಬೇಸರದ ಸಂಗತಿ ವರದಿಯಾಗಿದೆ.

ಸಿದ್ಧಾರ್ಥ್ ಇನ್ನಿಲ್ಲ ಎಂಬ ಸುದ್ದಿ ತಿಳಿದಾಗನಿಂದಲೂ ಶೆಹನಾಜ್ ಗಿಲ್ ಆಘಾತಕ್ಕೆ ಒಳಗಾಗಿದ್ದಾರೆ. ಸ್ನೇಹಿತ ಇಲ್ಲ ಎಂಬ ನೋವು ಅಪಾರವಾಗಿ ಕಾಡ್ತಿದೆ. ಒಂದು ಕ್ಷಣವೂ ಒಬ್ಬಳನ್ನೆ ಬಿಟ್ಟು ಹೋಗಲು ಆಗ್ತಿಲ್ಲ ಎಂದು ಆಕೆಯ ತಾಯಿ ಅಳಲು ತೋಡಿಕೊಂಡಿದ್ದಾರೆ. ಮುಂದೆ ಓದಿ...

ಊಟ ಮಾಡ್ತಿಲ್ಲ, ನಿದ್ರೆ ಮಾಡ್ತಿಲ್ಲ

ಊಟ ಮಾಡ್ತಿಲ್ಲ, ನಿದ್ರೆ ಮಾಡ್ತಿಲ್ಲ

ಖಾಸಗಿ ವೆಬ್‌ಸೈಟ್‌ವೊಂದಕ್ಕೆ ತನ್ನ ಮಗಳ ಪರಿಸ್ಥಿತಿ ಬಗ್ಗೆ ವಿವರಿಸಿರುವ ಶೆಹನಾಜ್ ತಾಯಿ ''ಸಿದ್ಧಾರ್ಥ್ ಇಲ್ಲ ಎಂಬ ನಷ್ಟವನ್ನು ನಿಭಾಯಿಸಲು ಆಕೆಯಿಂದ ಸಾಧ್ಯವಾಗ್ತಿಲ್ಲ. ಶೆಹ್ನಾಜ್ ಈ ನೋವಿನಿಂದ ಹೊರಬರಲು ಇನ್ನು ಸಮಯಬೇಕಾಗಬಹುದು. ಈ ದುಃಖಕರ ಸಂದರ್ಭದಲ್ಲಿ ಅವಳು ಚೆನ್ನಾಗಿ ನಿದ್ರಿಸುತ್ತಿಲ್ಲ, ಸಾಕಷ್ಟು ತಿನ್ನುತ್ತಿಲ್ಲ ಮತ್ತು ಯಾರೊಂದಿಗೂ ಮಾತನಾಡುತ್ತಿಲ್ಲ. ಅವಳನ್ನು ಏಕಾಂಗಿಯಾಗಿ ಬಿಡಲು ಸಹ ಸಾಧ್ಯವಿಲ್ಲ. ಬಹುಶಃ ಈ ಸ್ಥಿತಿಯಲ್ಲಿ ಸಿದ್ಧಾರ್ಥ್ ಅವರ ತಾಯಿ, ಶೆಹನಾಜ್‌ಗಿಂತ ಹೆಚ್ಚು ಧೈರ್ಯವಾಗಿದ್ದಾರೆ'' ಎಂದು ಹೇಳಿದ್ದಾರೆ.

ಅಂತ್ಯಕ್ರಿಯೆ ಸಮಯದಲ್ಲಿ ಹೆಚ್ಚು ಭಾವುಕ

ಅಂತ್ಯಕ್ರಿಯೆ ಸಮಯದಲ್ಲಿ ಹೆಚ್ಚು ಭಾವುಕ

ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ಸಮಯದಲ್ಲಿ ಶೆಹನಾಜ್ ಗಿಲ್ ಹೆಚ್ಚು ಭಾವುಕರಾಗಿದ್ದರು. ಶೆಹನಾಜ್ ಅಳುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು ಸಹ ಒಂದು ಕ್ಷಣ ಭಾವುಕರಾಗುವಂತಿದೆ.

ಅಭಿಮಾನಿಗಳಿಂದ ನಮನ

ಅಭಿಮಾನಿಗಳಿಂದ ನಮನ

ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ ಎಂಬ ಸುದ್ದು ತಿಳಿದಾಗನಿಂದಲೂ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಬಗೆ ಬಗೆಯಲ್ಲಿ ಸಂತಾಪ, ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳಲ್ಲಿ ಕೆಲವರು ಮೇಣದಬತ್ತಿಗಳನ್ನು ಬೆಳಗಿಸಿದರೆ, ಕೆಲವರು ನಟನ ಚಿತ್ರಗಳನ್ನು ಚಿತ್ರಿಸಿದರು. ಅಭಿಮಾನಿಯೊಬ್ಬರು ಆಕೆಯ ಕೈಯಲ್ಲಿ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಅನೇಕರು ಹಳೆಯ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಮದುವೆಗೆ ಪ್ಲಾನ್

ಡಿಸೆಂಬರ್‌ನಲ್ಲಿ ಮದುವೆಗೆ ಪ್ಲಾನ್

ಸಿದ್ಧಾರ್ಥ್ ಶುಕ್ಲಾ ಮತ್ತು ಶೆಹನಾಜ್ ಗಿಲ್ ಇಬ್ಬರು ಇದೇ ವರ್ಷ ಮದುವೆಯಾಗಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ. ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ತಯಾರಿಯಲ್ಲಿದ್ದರು. ಆಗಲೇ ಮದುವೆಗಾಗಿ ಹೋಟೆಲ್ ಸಹ ಕಾಯ್ದಿರಿಸಿದ್ದರು ಎನ್ನುವ ವರದಿಗಳು ಗಮನ ಸೆಳೆದಿದೆ. ಆದರೆ, ಮದುವೆಗೂ ಮುಂಚೆಯೇ ಈ ಜೋಡಿಯ ಜೀವನದಲ್ಲಿ ವಿಧಿ ಆಟವಾಡಿದೆ. ಬಾಳಿ ಬದುಕಬೇಕಿದ್ದ ಯುವನಟ ಮರಳಿ ಬಾರದ ಲೋಕಕ್ಕೆ ತೆರಳಿ, ಗೆಳತಿಯನ್ನು ಒಂಟಿಯಾಗಿಸಿದರು.

ಬಿಗ್ ಬಾಸ್ ಜರ್ನಿ ಮರೆಯುವಂತಿಲ್ಲ

ಬಿಗ್ ಬಾಸ್ ಜರ್ನಿ ಮರೆಯುವಂತಿಲ್ಲ

ಅಂದ್ಹಾಗೆ, ಸಿದ್ಧಾರ್ಥ್ ಮತ್ತು ಶೆಹನಾಜ್ ಸ್ನೇಹ ಪ್ರಾರಂಭವಾಗಿದ್ದು ಬಿಗ್ ಬಾಸ್ 13 ಶೋನಿಂದ. ಬಿಗ್ ಬಾಸ್ ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಪ್ರಾರಂಭದಲ್ಲಿ ಇಬ್ಬರು ಸ್ನೇಹಿತರರಾಗಿದ್ದರು, ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಅಭಿಮಾನಿಗಳು ಈ ಜೋಡಿಯನ್ನು ಸಿದ್ನಾಜ್ ಎಂದೇ ಕರೆಯುತ್ತಿದ್ದರು.

More from Filmibeat

English summary
After Sidharth Shukla demise, his girl freind Shehnaaz gill is not eating or sleeping properly: says report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X