twitter
    For Quick Alerts
    ALLOW NOTIFICATIONS  
    For Daily Alerts

    3 ಮೊಟ್ಟೆಗೆ 1672 ರೂ! ಹೋಟೆಲ್ ಕೊಟ್ಟ ಬಿಲ್ ನೋಡಿ ಸಂಗೀತ ನಿರ್ದೇಶಕ ಶಾಕ್.!

    |

    Recommended Video

    ಹೋಟೆಲ್ ಕೊಟ್ಟ ಬಿಲ್ ನೋಡಿ ಶಾಕ್ ಆದ ಸಂಗೀತ ನಿರ್ದೇಶಕ | Oneindia Kannada

    ಒಂದು ಮೊಟ್ಟೆಯ ಬೆಲೆ ಎಷ್ಟು.? 10 ರೂಪಾಯಿ..? ತೀರಾ ಕಾಸ್ಟ್ಲಿ ಅಂದ್ರೆ 15 ರೂಪಾಯಿ ಕೊಡಬಹುದು. ಮೊಟ್ಟೆ ಬದಲು ಬಾಯಿಲ್ಡ್ ಎಗ್ ತಿನ್ನಬೇಕು ಅಂದ್ರೆ ನೀವೆಷ್ಟು ಖರ್ಚು ಮಾಡ್ತೀರಾ.? ಅಬ್ಬಬ್ಬಾ ಅಂದ್ರೆ 30 ರೂಪಾಯಿ.? ಮೂರು ಬಾಯಿಲ್ಡ್ ಎಗ್ ತಿನ್ನಬೇಕು ಅಂದರೂ ಜೇಬಲ್ಲಿ 50 ರೂಪಾಯಿ ಇದ್ದರೆ ಸಾಕು ಅಲ್ವಾ.?

    ಆದರಿಲ್ಲಿ.. ಮೂರು ಬಾಯಿಲ್ಡ್ ಎಗ್ ಆರ್ಡರ್ ಮಾಡಿದ್ದಕ್ಕೆ ಹೋಟೆಲ್ ನವರು ಕೊಟ್ಟ ಬಿಲ್ ಎಷ್ಟು ಗೊತ್ತಾ.? ಬರೋಬ್ಬರಿ 1672 ರೂಪಾಯಿ.! ಮೂರು ಉಂಡೆ ಕೋಳಿ ತಿಂದಿದ್ದರೂ ಇಷ್ಟೊಂದು ಖರ್ಚು ಆಗ್ತಿರ್ಲಿಲ್ವಲ್ಲಾ ಅಂತ ನೀವು ಬಾಯಿ ಮೇಲೆ ಬೆರಳಿಡಬಹುದು. ಆದರೆ ಇದೇ ಸತ್ಯ.!

    ಫೈವ್ ಸ್ಟಾರ್ ಹೋಟೆಲ್ ಗೆ ಹೋಗಿ ಮೂರು ಬಾಯಿಲ್ಡ್ ಎಗ್ ತಿಂದಿದ್ದಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಶೇಖರ್ ರವ್ಜಿಯಾನಿ 1672 ರೂಪಾಯಿ ಕೊಟ್ಟು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಫೈವ್ ಸ್ಟಾರ್ ಹೋಟೆಲ್ ನಲ್ಲಿ ಎರಡು ಬಾಳೆಹಣ್ಣು ತಿಂದು 442 ರೂಪಾಯಿ ಬಿಲ್ ಕೊಟ್ಟ ಬಗ್ಗೆ ಬಾಲಿವುಡ್ ನಟ ರಾಹುಲ್ ಬೋಸ್ ಕಿಡಿಕಾರಿದ್ದರು. ಇದೀಗ ಪ್ರಖ್ಯಾತ ಸಂಗೀತ ನಿರ್ದೇಶಕ ಶೇಖರ್ ರವ್ಜಿಯಾನಿಗೂ ಅಂಥದ್ದೇ ಪರಿಸ್ಥಿತಿ ಎದುರಾಗಿದೆ. ಮುಂದೆ ಓದಿರಿ...

    ಬೇಸರ ಹೊರ ಹಾಕಿರುವ ಶೇಖರ್ ರವ್ಜಿಯಾನಿ

    ಬೇಸರ ಹೊರ ಹಾಕಿರುವ ಶೇಖರ್ ರವ್ಜಿಯಾನಿ

    ನಿನ್ನೆ (ನವೆಂಬರ್ 14) ಸಂಜೆ ಅಹಮದಾಬಾದ್ ನ ಉಸ್ಮಾನ್ ಪುರದಲ್ಲಿರುವ ಸ್ಟಾರ್ ಹೋಟೆಲ್ ಒಂದಕ್ಕೆ ಸಂಗೀತ ನಿರ್ದೇಶಕ ಶೇಖರ್ ರವ್ಜಿಯಾನಿ ಹೋಗಿದ್ದರು. ಅಲ್ಲಿ ಮೂರು ಬಾಯಿಲ್ಡ್ ಎಗ್ ನ ಬೆಲೆ 1350 ರೂಪಾಯಿ. ಜಿ.ಎಸ್.ಟಿ ಮತ್ತು ಸರ್ವೀಸ್ ಚಾರ್ಜ್ ಸೇರಿ ಬಿಲ್ ಮೊತ್ತ 1672 ರೂಪಾಯಿ ಆಗಿದೆ. ಇಷ್ಟೊಂದು ದುಬಾರಿ ಬೆಲೆಯ ಮೊಟ್ಟೆ ತಿಂದು ಶೇಖರ್ ರವ್ಜಿಯಾನಿ ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

    ಎರಡು ಬಾಳೆಹಣ್ಣಿನ ಬೆಲೆ ಕೇಳಿ ಬೆಚ್ಚಿಬಿದ್ದ ಬಾಲಿವುಡ್ ನಟಎರಡು ಬಾಳೆಹಣ್ಣಿನ ಬೆಲೆ ಕೇಳಿ ಬೆಚ್ಚಿಬಿದ್ದ ಬಾಲಿವುಡ್ ನಟ

    ಟ್ವಿಟ್ಟರ್ ನಲ್ಲಿ ಮಿಶ್ರ ಪ್ರತಿಕ್ರಿಯೆ

    ಟ್ವಿಟ್ಟರ್ ನಲ್ಲಿ ಮಿಶ್ರ ಪ್ರತಿಕ್ರಿಯೆ

    ಸ್ಟಾರ್ ಹೋಟೆಲ್ ನಲ್ಲಿ ಬಾಯಿಲ್ಡ್ ಎಗ್ ತಿನ್ನುವ ಜರೂರತ್ತು ಏನಿತ್ತು.? ಬೀದಿ ಬದಿಯಲ್ಲಿ 15 ರೂಪಾಯಿ ಕೊಟ್ಟಿದ್ದರೆ, ಬಾಯಿಲ್ಡ್ ಎಗ್ ಜೊತೆಗೆ ಈರುಳ್ಳಿ, ಮೆಣಸು, ದನಿಯಾ, ಪುದೀನಾ ಚಟ್ನಿ ಕೂಡ ಕೊಟ್ಟಿರೋರು ಅಂತ ಒಬ್ಬರು ಕಾಮೆಂಟ್ ಮಾಡಿದರೆ, ಮೆನ್ಯೂ ಕಾರ್ಡ್ ನೋಡಿ ಆರ್ಡರ್ ಮಾಡಬೇಕಿತ್ತು ಅಂತ ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

    ಟ್ವಿಟ್ಟರ್ ನಲ್ಲಿ ಅತ್ತರೆ ಪ್ರಯೋಜನ ಇಲ್ಲ.!

    ಟ್ವಿಟ್ಟರ್ ನಲ್ಲಿ ಅತ್ತರೆ ಪ್ರಯೋಜನ ಇಲ್ಲ.!

    ಆರ್ಡರ್ ಮಾಡುವ ಮುನ್ನ ಬೆಲೆ ನೋಡಬೇಕಿತ್ತು. ದುಬಾರಿ ಬೆಲೆ ಕೊಟ್ಟ ಮೇಲೆ ಟ್ವಿಟ್ಟರ್ ನಲ್ಲಿ ಅತ್ತರೆ ಪ್ರಯೋಜನ ಇಲ್ಲ. ಸ್ಟಾರ್ ಹೋಟೆಲ್ ಅಂದ್ಮೇಲೆ ಬೆಲೆ ಜಾಸ್ತಿ ಇದ್ದೇ ಇರುತ್ತೆ. ಹೀಗಿರುವಾಗ, ಸ್ಟಾರ್ ಹೋಟೆಲ್ ಗೆ ಹೋಗುವುದು ಯಾಕೆ.? ಮಾಮೂಲಿ ಹೋಟೆಲ್ ನಲ್ಲಿ ತಿನ್ನಿ ಅಂತ ನೆಟ್ಟಿಗರು ಪ್ರತಿಕ್ರಿಯೆ ಕೊಡುತ್ತಿದ್ದಾರೆ.

    ರಾಹುಲ್ ಬೋಸ್ ಕಾಲೆಳೆದಿದ್ದ ಜನ.!

    ರಾಹುಲ್ ಬೋಸ್ ಕಾಲೆಳೆದಿದ್ದ ಜನ.!

    ಸ್ಟಾರ್ ಹೋಟೆಲ್ ನಲ್ಲಿ ಎರಡು ಬಾಳೆಹಣ್ಣು ತಿಂದು 442 ರೂಪಾಯಿ ಕೊಟ್ಟಿದ್ದ ಬಾಲಿವುಡ್ ನಟ ರಾಹುಲ್ ಬೋಸ್ ಗೂ ನೆಟ್ಟಿಗರು ಕಾಲೆಳೆದಿದ್ದರು. ಆದ್ರೆ, ಎರಡು ಬಾಳೆಹಣ್ಣಿಗೆ ಅಷ್ಟೊಂದು ಬಿಲ್ ಮಾಡಿದ್ದ ಆ ಹೋಟೆಲ್ ಮೇಲೆ ಅಬಕಾರಿ ಮತ್ತು ತೆರಿಗೆ ಇಲಾಖೆ ದಾಳಿ ಮಾಡಿ ತನಿಖೆ ನಡೆಸಿತ್ತು.

    English summary
    Music Director Shekhar Ravjiani has paid Rs 1672 for 3 eggs in 5 star hotel in Ahmedabad.
    Friday, November 15, 2019, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X