For Quick Alerts
  ALLOW NOTIFICATIONS  
  For Daily Alerts

  ನಿಂತು ಹೋಗಿದ್ದ ಸುಶಾಂತ್ ಸಿಂಗ್-ರಿಯಾ ಚಕ್ರವರ್ತಿ ಸಿನಿಮಾ ಮತ್ತೆ ಪ್ರಾರಂಭ!

  |

  ಸುಶಾಂತ್ ಸಿಂಗ್ ರಜಪೂತ್ ಹಾಗೂ ರಿಯಾ ಚಕ್ರವರ್ತಿ ಪರಸ್ಪರ ಪ್ರೇಮದಲ್ಲಿದ್ದಾಗ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲು ತಯಾರಾಗಿದ್ದರು. ಕತೆ, ನಿರ್ಮಾಪಕರೂ ಓಕೆ ಆಗಿದ್ದರು. ಆದರೆ ಸಿನಿಮಾ ಸೆಟ್ಟೇರುವ ಹೊತ್ತಿಗೆ ಲಾಕ್‌ಡೌನ್ ಆಯಿತು, ಆ ನಂತರ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದರು.

  ಆದರೆ ಆಗ ನಿಂತಿದ್ದ ಸುಶಾಂತ್ ಸಿಂಗ್-ರಿಯಾ ಚಕ್ರವರ್ತಿ ಸಿನಿಮಾ ಈಗ ಮತ್ತೆ ಪ್ರಾರಂಭವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಬದಲಿಗೆ ಬೇರೊಬ್ಬ ನಾಯಕನನ್ನು ಹಾಕಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ ನಿರ್ದೇಶಕರು.

  ರಿಯಾ ಜೊತೆಗೆ ಈಗಾಗಲೇ 'ಚೆಹರೆ' ಸಿನಿಮಾ ಮಾಡಿರುವ ನಿರ್ದೇಶಕ ರೂಮಿ ಜಫ್ರಿ, ರಿಯಾ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾದ ಕತೆಯೂ ಈಗಾಗಲೇ ತಯಾರಾಗಿದ್ದು, ನಾಯಕ-ನಾಯಕಿ ಪಾತ್ರವೂ ಸಹ ಅಂತಿಮವಾಗಿದೆಯಂತೆ.

  ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಅವರೊಟ್ಟಿಗೆ ಲಾಕ್‌ಡೌನ್ ಗೂ ಮೊದಲೇ ಸಿನಿಮಾ ಯೋಜನೆ ಆಗಿತ್ತು. ಲಂಡನ್‌ನಲ್ಲಿ ನಡೆಯುವ ಪ್ರೇಮಕತಾ ಸಿನಿಮಾವನ್ನು ನಿರ್ಮಿಸುವ ಯೋಜನೆ ಮಾಡಿ ಇಬ್ಬರಿಗೂ ಕತೆ ಹೇಳಿ, ಅವರೂ ಸಹ ಒಪ್ಪಿಕೊಂಡಿದ್ದರು. ಆದರೆ ಈ ಲಾಕ್‌ಡೌನ್ ನಲ್ಲಿಯೇ ಬೇರೆಯೇ ನಡೆಯಿತು' ಎಂದಿದ್ದಾರೆ ರೂಮಿ ಜಫ್ರಿ.

  ಸುಶಾಂತ್ ಸಿಂಗ್ ನಟಿಸಬೇಕಿದ್ದ ಸ್ಥಾನಕ್ಕೆ ಪ್ರತಿಭಾವಂತ ಸ್ಟಾರ್ ನಟನನ್ನೇ ಆಯ್ಕೆ ಮಾಡಿದ್ದಾರಂತೆ ರೂಮಿ. ಆದರೆ ಆ ನಾಯಕ ಯಾರು ಎಂದು ಮಾಧ್ಯಮಗಳ ಮುಂದೆ ಹೇಳಿಲ್ಲ. ಬದಲಿಗೆ ರಿಯಾ ಜೊತೆ ಕೆಲಸ ಮಾಡಲು ಆ ನಟನಿಗೆ ಬಹಳ ಇಷ್ಟವಿರುವುದಾಗಿ ಮಾತ್ರ ಹೇಳಿದ್ದಾರೆ.

  ನಾನು ಆ ನಟನಿಗೆ ಕತೆ ಹೇಳಿ ರಿಯಾ ಚಕ್ರವರ್ತಿ ನಾಯಕಿ ಎಂದು ಹೇಳಿದಾಗ, 'ನನಗೂ ಆಕೆಯೊಂದಿಗೆ ನಟಿಸಲು ಇಷ್ಟವಿದೆ. ಆಕೆ ಸುಂದರ ಹಾಗೂ ಪ್ರತಿಭಾವಂತ ಹುಡುಗಿ. ಆಕೆ ಜಾಮೀನಿನ ಮೇಲಿದ್ದರೂ ನನಗೆ ಆಕೆಯೊಂದಿಗೆ ನಟಿಸಲು ಅಡ್ಡಿಯಿಲ್ಲ. ಸಂಜಯ್ ದತ್ ಸಹ ಜಾಮೀನಿನ ಮೇಲಿದ್ದಾಗ ಎಷ್ಟೋಂದು ಸಿನಿಮಾಗಳನ್ನು ಮಾಡಿದರು' ಎಂದು ಆ ನಟ ಹೇಳಿದ್ದಾರಂತೆ.

  ತೆಲುಗು ನೆಲದಲ್ಲಿ ಭರ್ಜರಿಯಾಗಿ ಅಬ್ಬರಿಸಲಿದ್ದಾರೆ ರಾಕಿ ಭಾಯ್ | KGF 2 | PrashanthNeel | Yash

  ರಿಯಾ ಚಕ್ರವರ್ತಿ, ಅಮಿತಾಬ್ ಬಚ್ಚನ್, ಇಮ್ರಾನ್ ಅಶ್ಮಿ ಇನ್ನೂ ಹಲವರು ನಟಿಸಿರುವ 'ಚೆಹ್ರೆ' ಸಿನಿಮಾವು ಏಪ್ರಿಲ್ 30 ರಂದು ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದ ಬಿಡುಗಡೆ ನಂತರ ರಿಯಾ ನಾಯಕಿಯಾಗಿರುವ ಹೊಸ ಸಿನಿಮಾ ಸೆಟ್ಟೇರಲಿದೆ. ಸಿನಿಮಾದ ನಿರ್ಮಾಣವನ್ನು ವಶು ಭಗ್ನಾನಿ ಮಾಡಲಿದ್ದಾರೆ.

  English summary
  Shelved Sushant Singh And Rhea Chakraborty's movie to start again with new actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X