75 ಕೋಟಿ ರು ಪರಿಹಾರ ನೀಡುವಂತೆ ಶಿಲ್ಪಾ-ಕುಂದ್ರಾ ದಂಪತಿಗೆ ಶೆರ್ಲಿನ್ ಚೋಪ್ರಾ ನೋಟಿಸ್

ಕೆಲವು ದಿನಗಳ ಹಿಂದಷ್ಟೆ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ, ನಟಿ ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಶಿಲ್ಪಾ-ಕುಂದ್ರಾರ ನೋಟಿಸ್ ಗೆ ಉತ್ತರಿಸಿರುವ ಶೆರ್ಲಿನ್ ಚೋಪ್ರಾ ತಮಗೆ 75 ಕೋಟಿ ರುಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಬಂಧನಕ್ಕೆ ಒಳಗಾದ ಬಳಿಕ ನಟಿ ಶೆರ್ಲಿನ್ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ರಾಜ್ ಕುಂದ್ರಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆಂದು ದೂರು ಸಹ ನೀಡಿದ್ದರು.

ಇದೀಗ ರಾಜ್ ಕುಂದ್ರಾ ಜಾಮೀನು ಪಡೆದು ಹೊರಗೆ ಬಂದಿದ್ದು, ಶೆರ್ಲಿನ್ ಮೇಲೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಜಂಟಿಯಾಗಿ 50 ಕೋಟಿ ರುಪಾಯಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

Sherlyn Chopra Demand 75 Crore Rs From Shilpa Shetty Raj Kundra

ಶಿಲ್ಪಾ-ಕುಂದ್ರಾರ ಮಾನನಷ್ಟ ಮೊಕದ್ದಮೆಗೆ ಉತ್ತರ ನೀಡಿರುವ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಶೆರ್ಲಿನ್ ಚೋಪ್ರಾ, ''ಭೂಗತ ಪಾತಕಿಗಳನ್ನು ಬಿಟ್ಟು ನನ್ನನ್ನು ಹೆದರಿಸಿದ್ದಾರೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ, ಈಗ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನಾನು ರಾಜ್ ಕುಂದ್ರಾ ವಿರುದ್ಧ ನೀಡಿರುವ ದೂರಿನ ಬಗ್ಗೆ ಪೊಲೀಸರು ನನ್ನ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದೇನೆ'' ಎಂದಿದ್ದಾರೆ ಶೆರ್ಲಿನ್. ಅಷ್ಟೇ ಅಲ್ಲದೆ, ''ಅವರಿಂದ ನನಗೆ ಆಗಿರುವ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ 75 ಕೋಟಿ ರುಪಾಯಿ ಪರಿಹಾರ ನೀಡುವಂತೆ ಪ್ರತಿ ನೋಟಿಸ್ ಕಳಿಸಿದ್ದೇನೆ'' ಎಂದಿದ್ದಾರೆ.

ತಾವು ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾಗೆ ತಮ್ಮ ಕಾನೂನು ಸಲಹೆಗಾರರ ತಂಡದ ಮೂಲಕ ಕಳಿಸಿರುವ ನೋಟಿಸ್ ನ ಕೆಲವು ಪ್ರತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೆರ್ಲಿನ್ ಚೋಪ್ರಾ ಹಂಚಿಕೊಂಡಿದ್ದಾರೆ.

ನಟಿ ಶೆರ್ಲಿನ್ ಚೋಪ್ರಾ ಈ ಹಿಂದೆ ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಪೊಲೀಸರಿಗೆ ದೂರು ಸಹ ನೀಡಿದ್ದರು ಆದರೆ ಆ ನಂತರ ದೂರನ್ನು ಹಿಂಪಡೆದಿದ್ದರು. ಆ ನಂತರ ಮತ್ತೊಮ್ಮೆ ಅಕ್ಟೋಬರ್ 14ರಂದು ದೂರು ನೀಡಿದರು. ಈ ಹಿಂದೆ ತಮಗೆ ಭೂಗತಲೋಕದವರಿಂದ ಬೆದರಿಕೆ ಹಾಕಿಸಿದ ಪರಿಣಾಮ ನಾನು ದೂರು ಹಿಂಪಡೆದಿದ್ದೆ ಎಂದಿದ್ದರು. ಆದರೆ ಶಿಲ್ಪಾ ಶೆಟ್ಟಿ-ಕುಂದ್ರಾ ಕಳಿಸಿರುವ ನೋಟಿಸ್ ನಲ್ಲಿ ದೂರು ಹಿಂಪಡೆಯಲು 48 ಲಕ್ಷ ಹಣಕ್ಕೆ ಶೆರ್ಲಿನ್ ಬೇಡಿಕೆ ಇಟ್ಟಿದ್ದರು'' ಎಂದಿದೆ.

ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ ಮತ್ತು ಶ್ರೀಮತಿ ಶಿಲ್ಪಾ ಶೆಟ್ಟಿ ಕುಂದ್ರಾ ವಿರುದ್ಧ ಮಾಡಿರುವ ಎಲ್ಲ ಆರೋಪಗಳು, ಯಾವುದೇ ಸಾಕ್ಷ್ಯಾಧಾರವಿಲ್ಲದ, ಸುಳ್ಳು, ಆಧಾರ ರಹಿತ ಆರೋಪಗಳಾಗಿವೆ. ಕೇವಲ ಮಾನಹಾನಿಯ ಉದ್ದೇಶಕ್ಕಾಗಿ ಈ ಆರೋಪಗಳನ್ನು ಮಾಡಲಾಗಿದೆ. ಹಾಗೂ ಹಣ ಸುಲಿಗೆ ಮಾಡುವ ತಂತ್ರ ಇದಾಗಿದೆ. ಜೆಎಲ್‌ ಸ್ಟ್ರೀಮ್ ಅಪ್ಲಿಕೇಶನ್, ಕಿರು ವಿಡಿಯೋ ಅಪ್ಲಿಕೇಶನ್ ಆಗಿದ್ದು, ಇಲ್ಲಿ ಬಳಕೆದಾರರು ತಮ್ಮ ಮೆಚ್ಚಿನ ಸೆಲೆಬ್ರಿಟಿಗಳು ಅಪ್‌ಲೋಡ್ ಮಾಡುವ ಕಂಟೆಂಟ್ ಅನ್ನು ನೋಡಬಹುದಾಗಿದೆ. 300 ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಈ ಅಪ್ಲಿಕೇಶನ್‌ನಲ್ಲಿದ್ದಾರೆ. ಶೆರ್ಲಿನ್ ಚೋಪ್ರಾ ಸಹ ಈ ಫ್ಲ್ಯಾಟ್‌ಫಾರ್ಮ್‌ನ ಕಂಟೆಂಟ್ ಕ್ರಿಯೇಟರ್ ಆಗಿದ್ದರು. ಆದರೆ ಈ ಅಪ್ಲಿಕೇಶನ್‌ಗೂ ಶಿಲ್ಪಾ ಶೆಟ್ಟಿಗೂ ಯಾವುದೇ ಸಂಬಂಧವಿಲ್ಲ. ಆದರೆ ಶೆರ್ಲಿನ್ ಚೋಪ್ರಾ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಶಿಲ್ಪಾ ಶೆಟ್ಟಿಯ ಹೆಸರು ಎಳೆಯುತ್ತಿದ್ದಾರೆ ಎಂದು ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯನ್ನು ಹೇಳಿದ್ದಾರೆ.

More from Filmibeat

English summary
Sherlyn Chopra demand 75 crore rs from Shilpa Shetty and Raj Kundra for mental harassment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X