Sherlyn Chopra: "ರಾಹುಲ್ ಗಾಂಧಿಯನ್ನು ಮದುವೆ ಆಗಲು ರೆಡಿ.. ಆದರೆ ಒಂದು ಶರತ್ತು" ಎಂದ ಬೋಲ್ಡ್ ಬ್ಯೂಟಿ!
ಬಾಲಿವುಡ್‌ನ ಬೋಲ್ಡ್ ಹಾಗೂ ವಿವಾದಾತ್ಮಕ ನಟಿ ಶರ್ಲಿನ್ ಚೋಪ್ರಾ. ಈಕೆಯ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ವೈರಲ್ ಆಗುತ್ತವೆ. ಅಲ್ಲದೆ ಈಕೆಯ ಹೇಳಿಕೆಗಳು ಕೂಡ ವಿವಾದಕ್ಕೆ ಎಡೆ ಮಾಡಿಕೊಡುತ್ತವೆ.
ಶರ್ಲಿನ್ ಚೋಪ್ರಾ ಸಿನಿಮಾಗಳು ಎಲ್ಲರಿಗೂ ಇಷ್ಟ ಆಗೋದಿಲ್ಲ. ಆದರೆ, ಹಿಂದಿ ಬಿಗ್ ಬಾಸ್ 13ನಲ್ಲಿ ಭಾಗವಹಿಸಿದ ಬಳಿಕ ನೆಟ್ಟಿಗರ ಫೆವರೀಟ್ ನಟಿಯಾಗಿದ್ದಾರೆ. ಇಲ್ಲಿಂದ ಪಾಪರಾಜಿಗಳು ಶೆರ್ಲಿನ್ ಚೋಪ್ರಾರನ್ನು ಫಾಲೋ ಮಾಡುತ್ತಲೇ ಇರುತ್ತಾರೆ. ಆಕೆ ಹೋದ ಕಡೆಯಲ್ಲೆಲ್ಲಾ ಕ್ಯಾಮರಾ ಹಿಡಿದು ಫೋಟೊ ಕ್ಲಿಕ್ಕಸುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

ಇತ್ತೀಚೆಗೆ ಶರ್ಲಿನ್ ಚೋಪ್ರಾ ಫಾಲೋ ಮಾಡಿಕೊಂಡು ಹೊರಟಿದ್ದ ಪಾಪರಾಜಿಗಳು ಕೇವಲ ಫೋಟೊಗಳನ್ನು ಕ್ಲಿಕ್ಕಿಸಿಲ್ಲ. ಆದರೆ, ಬದಲಾಗಿ ಚಿಕ್ಕದೊಂದು ಸವಾಲು ಎಸೆದಿದ್ದರು. ಅದಕ್ಕೆ ಆಕೆ ನೀಡಿದ ಉತ್ತರವೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಸಲಿಗೆ ಅಂತಹದ್ದೇನಾಯ್ತು? ಶರ್ಲಿನ್ ಚೋಪ್ರಾ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಗ್ಗೆ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಏನಿದು ರಾಹುಲ್ ಗಾಂಧಿ ಮದುವೆ ಪ್ರಸಂಗ?
ಶರ್ಲಿಂಗ್ ಚೋಪ್ರಾ ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಎಂದಿನಂತೆ ಗ್ಲಾಮರಸ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈಕೆಯನ್ನು ಫಾಲೋ ಮಾಡಿಕೊಂಡು ಹೋಗಿದ್ದ ಪಾಪರಾಜಿಗಳು ಒಂದಿಷ್ಟು ಫೋಟೊಗಳನ್ನು ಕ್ಲಿಕ್ಕಿಸಿದ್ದರು. ಸ್ಲೀವ್‌ಲೆಸ್ ಟಾಪ್ ಹಾಗೂ ಕಪ್ಪು ಬಣ್ಣದ ಮಿನಿಸ್ಕರ್ಟ್ ಅನ್ನು ಧರಿಸಿ ಬಂದಿದ್ದರು. ಈ ವೇಳೆ ಒಬ್ಬ ಪಾಪರಾಜಿ ಶರ್ಲಿನ್ ಚೋಪ್ರಾಗೆ ನೀವು ರಾಹುಲ್ ಗಾಂಧಿಯನ್ನು ವಿವಾಹವಾಗಿತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಒಂದು ಶರತ್ತು ವಿಧಿಸಿ ಉತ್ತರ ಕೊಟ್ಟಿದ್ದರು. ಅದೇ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಶರ್ಲಿನ್ ಚೋಪ್ರಾ ವಿಧಿಸಿದ ಶರತ್ತು ಏನು?
ಪಾಪರಾಜಿಯೊಬ್ಬರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನು ಮದುವೆ ಆಗಲು ಬಯಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಶರ್ಲಿನ್ ಚೋಪ್ರಾ ಕೂಲ್ ಆಗಿಯೇ ಉತ್ತರ ಕೊಟ್ಟಿದ್ದರು. " ಖಂಡಿತಾ.. ಯಾಕೆ ಆಗಬಾರದು?" ಎಂದಿದ್ದರು. ಆದರೆ, ಇಲ್ಲಿಗೆ ಸಿಲ್ಲಿಸಲಿಲ್ಲ. ಇದರೊಂದಿಗೆ ಒಂದು ಶರತ್ತು ಹಾಕಿದ್ದರು. "ಮದುವೆ ಬಳಿಕ ನನ್ನ ಸರ್ ನೇಮ್ ಅನ್ನು ಬದಲಾಯಿಸಿಕೊಳ್ಳುವುದಿಲ್ಲ" ಎಂದು ಹೇಳಿದ್ದರು. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆದ ರಾಹುಲ್ ಗಾಂಧಿ
ಒಂದು ಕಡೆ ಶರ್ಲಿನ್ ಚೋಪ್ರಾ ಹೇಳಿಕೆ ವೈರಲ್ ಆಗುತ್ತಿದ್ದಂತೆ ಮತ್ತೊಂದು ಕಡೆ ರಾಹುಲ್ ಗಾಂಧಿ ಸುದ್ದಿಯಲ್ಲಿದ್ದರು. ಶರ್ಲಿನ್ ಹೇಳಿಕೆಯಿಂದ ವೈರಲ್ ಆಗಬೇಕಿದ್ದ ರಾಹುಲ್ ಗಾಂಧಿ, ರಾಜಕೀಯ ವಿಷಯಕ್ಕೆ ಟ್ರೆಂಡಿಂಗ್‌ನಲ್ಲಿ ಇದ್ದರು. 'ಮೋದಿ' ಹೆಸರನ್ನು ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳದ ವಯನಾಡು ಎಂಪಿ ಸ್ಥಾನದಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗಿತ್ತು. ಅದೇ ವೇಳೆ ಸುಪ್ರೀಂ ಕೋರ್ಟ್ ಅನರ್ಹತೆಯನ್ನು ವಜಾಗೊಳಿಸಿತ್ತು.
'ಪೌರಾಶಪುರ 2' ಪ್ರಚಾರದಲ್ಲಿ ಶರ್ಲಿನ್ ಬ್ಯುಸಿ
ಶರ್ಲಿನ್ ಚೋಪ್ರಾ ಸದ್ಯ 'ಪೌರಾಶಪುರ 2' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಏಕ್ತಾ ಕಪೂರ್ ಈ ವೆಬ್ ಸೀರಿಸ್ ಅನ್ನು ಪ್ರಚಾರ ಮಾಡುತ್ತಿದ್ದಾರೆ. ಜುಲೈ 28ರಂದೇ ಈ ವೆಬ್ ಸೀರಿಸ್ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿದೆ. ಆ ಬಳಿಕ ರಾಹುಲ್ ಗಾಂಧಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಶರ್ಲಿನ್ ಚೋಪ್ರಾ ವೈರಲ್ ಆಗಿದ್ದಾರೆ.


Click it and Unblock the Notifications











