ಕೆಟ್ಟ ಮೇಲೆ ಬುದ್ಧಿ ಬಂತು ; ಎದೆಯ ಮೇಲಿದ್ದ 825 ಗ್ರಾಂ 'ಪ್ಲಾಸ್ಟಿಕ್' ಭಾರ ಇಳಿಸಿದ ಶೆರ್ಲಿನ್ ಚೋಪ್ರಾ
ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ. ಕೇವಲ ಮುಖ ಮಾತ್ರ ಅಲ್ಲ. ದೇಹದ ಅಂಗಾಂಗಗಳ ಮೇಲೆ ಕೂಡ ಈ ಪ್ರಯೋಗ ಮಾಡುತ್ತಾರೆ.
ಆದರೆ.. ಹೀಗೆ ಸೌಂದರ್ಯ ವೃದ್ಧಿಗಾಗಿ ದೇಹದ ಅಂಗಾಂಗಗಳ ಮೇಲೆ ಹೀಗೆ ಮಾಡಿಕೊಳ್ಳಲಾಗುವ ಮಾರ್ಪಾಡು ದೇಹದ ಸಹಜ ಪ್ರಕೃತಿಗೆ ವಿರುದ್ಧವಾದದ್ದು. ಹಲವು ಅಡ್ಡ ಪರಿಣಾಮಗಳು ಈ ತರಹದ ಸರ್ಜರಿಗಳಿಂದ ಆಗುತ್ತವೆ. ನುರಿತ ವೈದ್ಯರ ಸಲಹೆ ಪಡೆದರು ಕೂಡ ಕೆಲ ಒಮ್ಮೆ ಈ ಸೌಂದರ್ಯ ಚಿಕಿತ್ಸೆಗಳು ಅಪಾಯಕಾರಿಯಾಗುತ್ತಾವೆ.

ಆದರೂ ಬಿಸಿ ರಕ್ತ .. ಹುಮ್ಮಸ್ಸು .. ಉತ್ಸಾಹ .. ಹೀಗಾಗಿಯೇ ಕಲ್ಲನ್ನೂ ಕುಟ್ಟಿ ಪುಡಿ ಮಾಡಿ ಬಿಡುವ ವಯಸ್ಸಿನಲ್ಲಿ ಹಲವರು ತಪ್ಪು ನಿರ್ಧಾರ ಮಾಡುತ್ತಾರೆ. ಆ ನಂತರ ಪಶ್ಚಾತಾಪ ಪಡುತ್ತಾರೆ. ಉದಾಹರಣೆಗೆ ಶೆರ್ಲಿನ್ ಚೋಪ್ರಾ.
ಹೌದು, ಅಂಗಾಂಗ ಪ್ರದರ್ಶನ ಮಾಡುವುದನ್ನೇ ಸಾಧನೆ ಎಂದುಕೊಂಡವರಲ್ಲಿ ಹಲವರು ಇದ್ದಾರೆ. ಆ ಪೈಕಿ ಶೆರ್ಲಿನ್ ಚೋಪ್ರಾ ಕೂಡ ಒಬ್ಬರು. ಬರೋಬ್ಬರಿ ಒಂದು ದಶಕದ ಹಿಂದೆಯೇ ಕಾಮಪ್ರಚೋದಕ ಚಲನಚಿತ್ರ ''ಕಾಮಸೂತ್ರ 3'' ಮೂಲಕ ಪಡ್ಡೆ ಹೈಕಳಿಗೆ ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದ ಶೆರ್ಲಿನ್ ಚೋಪ್ರಾ, ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಸಾರ ಆರೋಪದಡಿ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನಕ್ಕೊಳಗಾಗಿದ್ದಾಗ ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಗಂಭೀರ ಆರೋಪಗಳನ್ನು ಮಾಡಿದ್ದರು.
ನಾನು ಬೇಡ ಎಂದರೂ ಬಲವಂತವಾಗಿ ಮುತ್ತಿಡಲು ಮುಂದಾದರು. ನನಗೆ ಭಯವಾಗಿ ಹೀಗೆಲ್ಲ ವರ್ತಿಸದಂತೆ ಕೇಳಿಕೊಂಡೆ. ಆನಂತರ ಅವರನ್ನು ತಳ್ಳಿ ಅಲ್ಲಿಂದ ಬಚಾವ್ ಆದೆ. ಕೊನೆಗೆ ಅವರಿಂದ ತಪ್ಪಿಸಿಕೊಳ್ಳಲು ಶೌಚಾಲಯದಲ್ಲಿ ಅಡಗಿ ಕುಳಿತೆ" ಎಂದು ಹೇಳಿ ಸುದ್ದಿಯಾಗಿದ್ದರು ಶೆರ್ಲಿನ್ ಚೋಪ್ರಾ.
ಇಂಥಾ ಶೆರ್ಲಿನ್ ಚೋಪ್ರಾ ಬಾಲಿವುಡ್‌ನಲ್ಲಿ ಪ್ಲಾಸ್ಟಿಕ್ರಾಣಿ ಎಂದೇ ಫೇಮಸ್ಸು. ಕ್ಯಾಮರಾ ಹಿಡಿದು ಬರುವ ಪಾಪರಾಜಿಗಳ ಎದುರು ಸದಾ ಕಾಲ ತನ್ನ ದೇಹ ಸಿರಿಯನ್ನ ಪ್ರದರ್ಶಿಸುವ ಶೆರ್ಲಿನ್ ಚೋಪ್ರಾಗೆ ಈಗ ತನ್ನದೇ ಆದ ದೇಹ ಭಾರವಾಗಿದೆ.

ಹೀಗಾಗಿಯೇ ಕೆಲ ದಿನಗಳ ಹಿಂದೆ ಎದೆಯ ಮೇಲಿದ್ದ ಪ್ಲಾಸ್ಟಿಕ್ ಭಾರವನ್ನು ಇಳಿಸಿಕೊಳ್ಳುವುದಾಗಿ ಹೇಳಿದ್ದ ಶೆರ್ಲಿನ್ ಸದ್ಯ ಸ್ತ*ನ ಕಸಿ ( ಬ್ರೆಸ್ಟ್ ಇಂಪ್ಲಾಂಟ್ ) ಮಾಡಿಸಿದ್ದಾರೆ.
ಹೌದು, ಬೆನ್ನು ನೋವು.. ಎದೆ ನೋವು.. ಭುಜದ ನೋವು.. ಮತ್ತು ಎದೆಯ ಭಾರದ ಸಮಸ್ಯೆಗಳಿಂದ ಬಳಲುತ್ತಿದ್ದ ಶೆರ್ಲಿನ್ ಚೋಪ್ರಾ ವಾರದ ಹಿಂದೆ ಬ್ರೆಸ್ಟ್ ಇಂಪ್ಲಾಂಟ್ (ಸ್ತ*ನ ಕಸಿ ) ಮಾಡಿಸಿಕೊಳ್ಳುವುದಾಗಿ ಹೇಳಿದ್ದರು. ಜೀವನದಲ್ಲಿ ಒಂದು ಪ್ರಮುಖ ಬದಲಾವಣೆಗೆ ಮುಂದಾಗಿದ್ದೇನೆ. 2023ರ ಆಗಸ್ಟ್‌ನಲ್ಲಿ ನಾನು ನೈಜವಾಗಿ ಕಾಣಬೇಕೆಂದು ಮುಖದಿಂದ ಎಲ್ಲಾ ಸರ್ಜರಿ ಭಾಗವನ್ನ ತೆಗೆಸಿದ್ದೆ. ಈಗ ನನ್ನ ದೇಹದಲ್ಲಿರುವ ಹೆಚ್ಚುವರಿ ಹೊರೆಯನ್ನ ತೆಗೆದುಹಾಕಬೇಕೆಂಬ ಉದ್ದೇಶದಿಂದ ಬ್ರೆಸ್ಟ್ ಇಂಪ್ಲಾಂಟ್ ತೆಗೆಸುವ ನಿರ್ಧಾರಕ್ಕೆ ಬಂದಿದ್ದೇನೆ. ಅದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ ಎಂದು ಹೇಳಿದ್ದರು.
ಅದ್ರಂತೆ ಈಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಶೆರ್ಲಿನ್ ಚೋಪ್ರಾ ಸ್ತ*ನ ಕಸಿಗೆ ಒಳಗಾಗಿದ್ದು, ತೆಗೆದು ಹಾಕಲಾದ 825 ಗ್ರಾಂ ತೂಕದ ತನ್ನ ಸ್ತ*ನವನ್ನು ಕೈಯಲ್ಲಿ ಹಿಡಿದುಕೊಂಡು ಸಂದೇಶ ನೀಡಿದ್ದಾರೆ. ಬ್ರೆಸ್ಟ್ ಇಂಪ್ಲಾಂಟ್ ಮಾಡಿದ ನಂತರ ನಾನು ಈಗ ಚಿಟ್ಟೆಯಂತೆ ಹಗುರವಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ಮಾತನಾಡಿರುವ ಶೆರ್ಲಿನ್ ಚೋಪ್ರಾ, ನಾನು ಮಾಡಿದ ಈ ತಪ್ಪನ್ನು ಮಾಡಬೇಡಿ ಎಂದು ಹೇಳಿದ್ಧಾರೆ. ಅನಗತ್ಯ ಹೊರೆಯೊಂದಿಗೆ ಜೀವನವನ್ನು ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿರುವ ಶೆರ್ಲಿನ್ ಚೋಪ್ರಾ ಸಾಮಾಜಿಕ ಜಾಲತಾಣಗಳಲ್ಲಿ ನೋಡುವಂತಹ ವಿಡಿಯೋಗಳಿಂದ ಪ್ರಭಾವಕ್ಕೊಳಗಾಗಬೇಡಿ ಎಂದು ಯುವಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ದೇಹದ ಮೇಲೆ ಪ್ರಯೋಗಗಳನ್ನು ಮಾಡಬೇಡಿ ಎಂದು ಹೇಳಿರುವ ಶೆರ್ಲಿನ್ ಚೋಪ್ರಾ ನೀವು ಏನೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಅದರ ಲಾಭ-ನಷ್ಟಗಳನ್ನು ಸರಿಯಾಗಿ ಆಲೋಚನೆ ಮಾಡಿ ಎಂದು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ, ಮನೆಯವರ ಜೊತೆ ಮಾತನಾಡಿ, ವೈದ್ಯರ ಸಲಹೆ ಮೇರೆಗೆ ಮುಂದುವರೆಯಿರಿ ಎಂದು ಹೇಳಿದ್ದಾರೆ. ಕುರಿ ಹಿಂಡು ಹಿಂಬಾಲಿಸಬೇಡಿ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


Click it and Unblock the Notifications











