'ಜನನಾಂಗ ಮುಟ್ಟುವಂತೆ ಹೇಳಿದ್ದ': ನಿರ್ದೇಶಕನ ನಿಜ ಸ್ವರೂಪ ಬಿಚ್ಚಿಟ್ಟ್ ಶೆರ್ಲಿನ್ ಚೋಪ್ರಾ
ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಅತಿಯಾಗಿ ಕೇಳಿಬರುತ್ತಿವೆ. ಮೀ ಟೂ ಅಭಿಯಾನದ ಸಮಯದಲ್ಲಿ ಸಾಲು-ಸಾಲು ಆರೋಪಗಳನ್ನು ಸಾಜಿದ್ ಮೇಲೆ ಹೊರಿಸಲಾಗಿತ್ತು. ಈಗಲೂ ಅದು ಮುಂದುವರೆದಿದೆ.
ಕಾಮಸೂತ್ರ, ರೆಡ್ ಸ್ವಸ್ತಿಕ್ ಸೇರಿದಂತೆ ಹಲವು ಗ್ಲಾಮರಸ್ ಸಿನಿಮಾಗಳಲ್ಲಿ ನಟಿಸಿರುವ ಶೆರ್ಲಿನ್ ಚೋಪ್ರಾ, ಸಾಜಿದ್ ಖಾನ್ ತನ್ನೊಂದಿಗೆ ಹೇಗೆ ನಡೆದುಕೊಂಡಿದ್ದ ಎಂಬುದನ್ನು ಟ್ವಿಟ್ಟರ್ ನಲ್ಲಿ ಬಹಿರಂಗಗೊಳಿಸಿದ್ದಾರೆ.
'2005 ರ ಸಮಯದಲ್ಲಿ ನಾನು ಅವಕಾಶ ಕೇಳಿಕೊಂಡು ಸಾಜಿದ್ ಖಾನ್ ಮನೆಗೆ ಹೋಗಿದ್ದೆ. ಆಗ ಅತಿ ಕೆಟ್ಟದಾಗಿ ವರ್ತಿಸಿದ್ದ ಸಾಜಿದ್, ತನ್ನ ಜನನಾಂಗವನ್ನು ಹೊರತೆಗೆದು, ಅದನ್ನು ಮುಟ್ಟುವಂತೆ ನನಗೆ ಹೇಳಿದ್ದ. ಪುರುಷ ಜನನಾಂಗ ಹೇಗಿರುತ್ತದೆ ಎಂಬುದು ನನಗೆ ಗೊತ್ತು, ನಿನ್ನ ಜನನಾಂಗ ಹೇಗಿದೆ ಎಂದು ರೇಟಿಂಗ್ ಕೊಡಲು ನಾನು ಇಲ್ಲಿಗೆ ಬಂದಿಲ್ಲ' ಬೈದು ಅಲ್ಲಿಂದ ಹೊರಟು ಬಂದಿದ್ದೆ ಎಂದಿದ್ದಾರೆ ಶೆರ್ಲಿನ್ ಚೋಪ್ರಾ.

ಬಾಲಿವುಡ್ ಮಾಫಿಯಾ ಇದೆ: ಶೆರ್ಲಿನ್ ಚೋಪ್ರಾ
'ಸಾಜಿದ್ ಖಾನ್ ನ ವರ್ತನೆಗಳನ್ನು ಡಿಫೆಂಡ್ ಮಾಡಿಕೊಳ್ಳುವ ದೊಡ್ಡ ಬಾಲಿವುಡ್ ನಟರ ಬಳಗವೇ ಇದೆ ಎಂದು ಆರೋಪಿಸಿರುವ ಶೆರ್ಲಿನ್ ಚೋಪ್ರಾ. 'ಬಾಲಿವುಡ್ ಮಾಫಿಯಾ' ಎಂಬುದು ಬಹಳ ಒಗ್ಗಟ್ಟಿನ ಸಂಘಟನೆ' ಎಂದಿದ್ದಾರೆ.

ಜಿಯಾ ಖಾನ್ ಸಹೋದರಿಯಿಂದ ಆರೋಪ
ಬಿಬಿಯ ಹೊಸ ಡಾಕ್ಯುಮೆಂಟರಿಯಲ್ಲಿ ಮಾತನಾಡಿರುವ ಮೃತ ಜಿಯಾ ಖಾನ್ ಸಹೋದರಿ ಕರಿಶ್ಮಾ ಖಾನ್, 'ಸಾಜಿದ್ ಖಾನ್, ನನ್ನ ಅಕ್ಕನ ಬಳಿ ಕೆಟ್ಟದಾಗಿ ವರ್ತಿಸಿದ್ದ. ನನ್ನ ಬಳಿಯೂ ಕೆಟ್ಟದಾಗಿ ವರ್ತಿಸಿದ್ದ. ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ' ಎಂದು ಆರೋಪಿಸಿದ್ದಾರೆ.

2018 ರಲ್ಲಿ ಹಲವು ನಟಿಯರಿಂದ ಆರೋಪ
ಸಾಜಿದ್ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಇದು ಮೊದಲೇನಲ್ಲ. 2018 ರಲ್ಲಿ ಮೀ ಟೂ ಅಭಿಯಾನ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾಗ. ಹಲವಾರು ನಟಿಯರು, ಮಾಡೆಲ್‌ಗಳು ಕೊನೆಗೆ ಮಹಿಳಾ ಪತ್ರಕರ್ತೆಯರು ಸಹ ಸಾಜಿದ್ ಖಾನ್ ವಿರುದ್ಧ ಆರೋಪ ಮಾಡಿದ್ದರು.
Recommended Video

ಜಾಕ್ವೆಲಿನ್ ಫರ್ನಾಂಡೀಸ್ ಆರೋಪ
ಸಾಜಿದ್ ಖಾನ್ ವಿರುದ್ಧ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಮಂದನಾ ಕರಿಮಿ, ಸಲೋನಿ ಚೋಪ್ರಾ, ಸಿಮ್ರನ್ ಸೂರಿ, ಮರೀನಾ ಕುವಾರ್, ಪತ್ರಕರ್ತೆ ಕೃಷ್ಣಮಾ ಉಪಾಧ್ಯಾಯ್, ಕರಿಶ್ಮಾ ಖಾನ್, ಜಿಯಾ ಖಾನ್ ಪ್ರಸ್ತುತ ಶೆರ್ಲಿನ್ ಚೋಪ್ರಾ ಸಹ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಾರೆ.


Click it and Unblock the Notifications











