For Quick Alerts
  ALLOW NOTIFICATIONS  
  For Daily Alerts

  'ಡಿನ್ನರ್' ಅಂದ್ರೆ 'ಮಂಚಕ್ಕೆ ಬಾ' ಎನ್ನುವುದು ಗೊತ್ತಿರಲಿಲ್ಲ: ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ 'ಕಾಮಸೂತ್ರ' ನಟಿ

  |

  ಬಾಲಿವುಡ್ ನ ಹಾಟ್ ನಿಟ ಶರ್ಲಿನ್ ಚೋಪ್ರಾ ಯಾರಿಗೆ ತಾನೆ ಗೊತ್ತಿಲ್ಲ. ನಟಿಸಿದ್ದು ಬೆರಳೆಣಿಕೆಯ ಸಿನಿಮಾಗಳಾದರು ಯಾರಿಗೂ ಸಿಗದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಕಾಮಸೂತ್ರ 3D ಎನ್ನುವ ಕಾಮಪ್ರಚೋದಕ ಸಿನಿಮಾ. ಈ ಚಿತ್ರದ ಮೂಲಕ ಶರ್ಲಿನ್ ವಿಶ್ವವ್ಯಾಪಿ ಖ್ಯಾತಿ ಗಳಿಸಿದ್ದಾರೆ.

  ಪ್ರಿಯಾಂಕಾ ಹಾಕಿದ ಬಟ್ಟೆಗೆ ನೆಟ್ಟಿಗರಿಂದ ಬ್ಯಾಡ್ ಕಾಮೆಂಟ್ಸ್ | PRIYANKA CHOPRA | ATTIRE | ONEINDIA KANNADA

  ಬಾಲಿವುಡ್ ಈ ಬೋಲ್ಡ್ ನಟಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವಕಾಶ ನೀಡುವುದಾಗಿ ಮಂಚಕ್ಕೆ ಕರೆಯುವ ಕೆಟ್ಟ ಪದ್ದತಿಯ ಬಗ್ಗೆ ಶರ್ಲಿನ್ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಚಿತ್ರರಂಗದ ಕಾಮಾಪುರಾಣದ ಬಗ್ಗೆ ಹಾಟ್ ನಟಿ ಹೇಳಿದ್ದು ಹೀಗೆ. ಮುಂದೆ ಓದಿ..

  ಕೆಚ್ಚ ಅನುಭವದ ಬಗ್ಗೆ ಶರ್ಲಿನ್ ಮಾತು

  ಕೆಚ್ಚ ಅನುಭವದ ಬಗ್ಗೆ ಶರ್ಲಿನ್ ಮಾತು

  ಕಾಸ್ಟಿಂಗ್ ಕೌಚ್ ಎನ್ನುವುದು ಚಿತ್ರರಂಗದ ಒಂದು ಭಾಗವಾಗಿದೆ. ಅನೇಕ ನಟಿಯರಿಗೆ ಈ ಅನುಭವವಾಗಿದೆ. ಅವಕಾಶ ನೀಡುವುದಾಗಿ ಹೇಳಿ ಮಂಚಕ್ಕೆ ಕರೆಯುವ ಕೆಟ್ಟ ವ್ಯವಸ್ಥೆಯ ಬಗ್ಗೆ ಅನೇಕ ನಟಿಯರು ಸಿಡಿದೆದ್ದಿದ್ದಾರೆ. ಮೀ ಟೂ ಅಭಿಯಾನದ ಮೂಲಕ ಅನೇಕ ಕಾಸ್ಟಿಂಗ್ ಕೌಚ್ ಪ್ರಕರಣಗಳು ಬಹಿರಂಗವಾಗಿವೆ. ಸಾಕಷ್ಟು ನಟಿಯರು ತಮಗಾದ ಕೆಟ್ಟ ಅನುಭವನ್ನು ಬಹಿರಂಗಪಡಿಸುತ್ತಿದ್ದಾರೆ. ಈಗ ನಟಿ ಶರ್ಲಿನ್ ಚೋಪ್ರಾ ಕೂಡ ಚಿತ್ರರಂಗದಲ್ಲಿ ಅನುಭವಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

  ಡಿನ್ನರ್ ಪದದ ನಿಜವಾದ ಅರ್ಥ ಗೊತ್ತಿರಲಿಲ್ಲ

  ಡಿನ್ನರ್ ಪದದ ನಿಜವಾದ ಅರ್ಥ ಗೊತ್ತಿರಲಿಲ್ಲ

  ಚಿತ್ರರಂಗದ ಆರಂಭಿಕ ದಿನಗಳಲ್ಲಿ ಶರ್ಲಿನ್ ತುಂಬಾ ಕಷ್ಟ ಅನುಭವಿಸಿದ್ದಾರೆ. "ಮೊದಲು ನಿರ್ಮಾಪಕರು ಡಿನ್ನರ್ ಗೆ ಕರೆಯುತ್ತಿದ್ದರು. ಆದರೆ ಅವರ ನೈಜ ಉದ್ದೇಶ ಏನು ಎನ್ನುವುದು ನನಗೆ ಮೊದಲು ಗೊತ್ತಿರಲಿಲ್ಲ. ಡಿನ್ನರ್ ನ ನಿಜವಾದ ಅರ್ಥ ತಿಳಿಯಲು ತುಂಬಾ ಸಮಯಬೇಕಾಯಿತು" ಎಂದು ಹೇಳಿದ್ದಾರೆ.

  ಡಿನ್ನರ್ ಅಂದರೆ

  ಡಿನ್ನರ್ ಅಂದರೆ "ನನ್ನ ಬಳಿಗೆ ಬಾ ಬೇಬಿ" ಎಂದರ್ಥ

  ಎಲ್ಲಾ ನಟಿಯರ ಕನಸಿನಂತೆ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಶರ್ಲಿನ್ ಗೂ ಇತ್ತು. "ವೃತ್ತಿ ಜೀವನದ ಆರಂಭದಲ್ಲಿ ನಿರ್ಮಾಪಕರೊಬ್ಬರು ನನ್ನ ಸಂಪರ್ಕ ಮಾಡುವುದಾಗಿ ಹೇಳಿದರು. ಅಲ್ಲದೆ ರಾತ್ರಿ 11 ಗಂಟೆ ಅಥವಾ 12ಗಂಟೆಗೆ ಡಿನ್ನರ್ ಗೆ ಆಹ್ವಾನಿಸಿದರು. ಈ ರೀತಿಯ ಅನುಭವ ನಾಲ್ಕೈದು ಬಾರಿಯಾಗಿದೆ. ಆ ನಂತರ ಗೊತ್ತಾಯಿತು, ಡಿನ್ನರ್ ಅಂದರೆ ಕಾಂಪ್ರುಮೈಸ್ ಆಗುವುದು ಎಂದು. ಡಿನ್ನರ್ ಎಂದರೆ "ನನ್ನ ಬಳಿಗೆ ಬಾ ಬೇಬಿ" ಎಂದರ್ಥ ಎಂದು" ಶರ್ಲಿನ್ ಹೇಳಿದ್ದಾರೆ.

  ಶರ್ಲಿನ್ ಪ್ರತಿಕ್ರಿಯೆ ಹೀಗಿರುತ್ತಿತ್ತು

  ಶರ್ಲಿನ್ ಪ್ರತಿಕ್ರಿಯೆ ಹೀಗಿರುತ್ತಿತ್ತು

  "ನಂತರ ಡಿನ್ನರ್ ಗೆ ಯಾರಾದರು ಕರೆದರೆ ಇಂಟ್ರಸ್ಟ್ ಇಲ್ಲ ಎಂದು ನೇರವಾಗಿ ಹೇಳುವುದನ್ನು ಕಲಿತುಕೊಂಡೆ. ಡಯಟ್ ಮಾಡುತ್ತಿದ್ದೀನಿ ಡಿನ್ನರ್ ಮಾಡಲ್ಲ ಎನ್ನುತ್ತಿದ್ದೆ" ಎಂದು ಹೇಳುವ ಮೂಲಕ ಚಿತ್ರರಂಗದಲ್ಲಿ ಅನುಭವಿಸಿದ ಕೆಟ್ಟ ಅನುಭವದ ಬಗ್ಗೆ ಶರ್ಲಿನ್ ಮನ ಬಿಚ್ಚಿಮಾತನಾಡಿದ್ದಾರೆ.

  ಕಾಮಸೂತ್ರ ಸಿನಿಮಾ ನಂತರ ಸಿನಿಮಾ ಮಾಡಿಲ್ಲ

  ಕಾಮಸೂತ್ರ ಸಿನಿಮಾ ನಂತರ ಸಿನಿಮಾ ಮಾಡಿಲ್ಲ

  ಶರ್ಲಿನ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾ ಕಾಮಸೂತ್ರ. 2014ರಲ್ಲಿ ರಿಲೀಸ್ ಆದಾ ಸಿನಿಮಾವಿದು. ಆ ನಂತರ ಶರ್ಲಿನ್ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. 2016ರಲ್ಲಿ ವಿಶೇಷ ಪಾತ್ರದ ಮೂಲಕ ತೆರೆಮೇಲೆ ಬಂದಿದ್ದರು. ಆ ನಂತರ ಶಾರ್ಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಬಿಟ್ಟರೆ ಶರ್ಲಿನ್ ಮತ್ತೆ ಸಿನಿಮಾದಲ್ಲಿ ಬಣ್ಣಹಚ್ಚಿಲ್ಲ.

  English summary
  Bollywood Actress Sherlyn Chopra opens up on casting couch experience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X