Sherlyn Chopra: "2 ಪ್ಯಾಕ್ ಕಾಣಿಸ್ತಿದ್ಯಾ? ಸಿಕ್ಸ್‌ಪ್ಯಾಕ್ಸ್ ಆದಷ್ಟು ಬೇಗ ಬರುತ್ತದೆ" ಎಂದ ಶೆರ್ಲಿನ್ ಚೋಪ್ರಾ

ವಿವಾದಾತ್ಮಕ ನಟಿ ಶೆರ್ಲಿನ್ ಚೋಪ್ರಾ ಒಂದಿಲ್ಲೊಂದು ಕಾರಣಕ್ಕೆ ಪದೇ ಪದೇ ಸುದ್ದಿ ಆಗುತ್ತಲೇ ಇರುತ್ತಾಳೆ. ಮೈಮಾಟ ಪ್ರದರ್ಶನಕ್ಕೂ ಆಕೆ ಹಿಂದುಮುಂದು ನೋಡಲ್ಲ. ತನ್ನ ಬೋಲ್ಡ್ ಇಮೇಜ್‌ನಿಂದಲೇ ಬಾಲಿವುಡ್‌ನಲ್ಲಿ ಈಕೆ ಗುರ್ತಿಸಿಕೊಂಡಿದ್ದಾಳೆ. ಇತ್ತೀಚೆಗೆ ಮುಂಬೈನ ಕೆಫೆವೊಂದರ ಮುಂದೆ ಶೆರ್ಲಿನ್ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಕ್ಯಾಮರಾಗಳ ಕಣ್ಣಿಗೆ ಬಿದ್ದಿದ್ದಾಳೆ. ಆ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಶೆರ್ಲಿನ್ ಚೋಪ್ರಾ ಅಂದ ಚೆಂದ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಕ್ಯಾಮರಾಗಳನ್ನು ನೋಡುತ್ತಾ ಚೆಲುವೆ ಮಾತನಾಡುತ್ತಾ ನಿಂತು ಬಿಟ್ಟಿದ್ದಾಳೆ. ಡಯೆಟ್, ಸಿಕ್ಸ್‌ಪ್ಯಾಕ್ ಹೀಗೆ ನಾನಾ ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ಏನ್ ಡಯೆಟ್ ಮಾಡ್ತೀರಾ ಎನ್ನುವ ಪ್ರಶ್ನೆಗೆ ಸ್ಪೆಷಲ್ ಡಯಟ್ ಮಾಡಲ್ಲ. ರೊಟ್ಟಿ, ಅನ್ನ, ಚಿಕನ್, ಮಟನ್, ಮೀನು ಎಲ್ಲವನ್ನೂ ತಿನ್ನುತ್ತೇನೆ ಎಂದಿದ್ದಾಳೆ. ಇದೇ ವೇಳೆ ಸಿಕ್ಸ್ ಪ್ಯಾಕ್ ಬಗ್ಗೆಯೂ ಮಾತು ಹೊರಳಿದೆ. ಸಿಕ್ಸ್‌ ಪ್ಯಾಕ್ ಇನ್ನು ಬಂದಿಲ್ಲ. 2 ಪ್ಯಾಕ್ ಬಂದಿದೆ ಎಂದು ಶೆರ್ಲಿನ್ ಕ್ಯಾಮರಾಗಳ ಮುಂದೆ ಪ್ರದರ್ಶಿಸಿದ್ದಾರೆ. ಸದ್ಯಕ್ಕೆ 2 ಪ್ಯಾಕ್ ಬಂದಿದೆ. ಉಳಿದಿದ್ದು ಬರುವ ಹಾದಿಯಲ್ಲಿದೆ ಎಂದು ನಕ್ಕಿದ್ದಾಳೆ.

Sherlyn Chopra shows her 6-pack abs In Front Of Paparazzi

ನಂತರ ಕೈ ಮುಷ್ಠಿ ಮಾಡಿ ಮೇಲೆತ್ತಿ ಶೆರ್ಲಿನ್ ಬೈಸಿಪ್ಸ್ ಪ್ರದರ್ಶಿಸಿದ್ದಾಳೆ. ಬೈಸಿಪ್ ಇನ್ನು ಚಿಕ್ಕದಾಗಿದೆ. ವರ್ಕೌಟ್‌ ಮಾಡುತ್ತಿದ್ದೇನೆ ಎಂದಿದ್ದಾಳೆ. ಆದರೆ ವಿಡಿಯೋ ನೋಡಿದವರು ಮಾತ್ರ ಆಕೆಯ ಎದೆಯ ಅಂದದ ಬಗ್ಗೆಯೇ ಹೆಚ್ಚು ಕಾಮೆಂಟ್ ಮಾಡುತ್ತಿದ್ದಾರೆ. ಆಕೆ ಸರ್ಜರಿ ಮಾಡಿಸಿಕೊಂಡಿದ್ದಾಳೆ, ಪ್ಲಾಸ್ಟಿಕ್ ಬ್ಯೂಟಿ ಅಂತೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ.

ಮುಂಬೈ ಮೂಲದ ಫಿಲ್ಮ್ ಫೈನಾನ್ಶಿಯರ್ ವಿರುದ್ಧ ಶೆರ್ಲಿನ್ ಚೋಪ್ರಾ ಏಪ್ರಿಲ್ 14 ರಂದು ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆತ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿದ್ದಳು. ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಿದ್ದಳು. ಮ್ಯೂಸಿಕ್ ವಿಡಿಯೋದಲ್ಲಿ ನಟಿಸುವಂತೆ ಫೈನಾನ್ಶಿಯರ್ ಕೇಳಿದ್ದು, ಹಣ ನೀಡಲು ಸಿದ್ಧನಿದ್ದೇನೆ ಎಂದು ಆತ ಹೇಳಿದ್ದಾಗಿ ಶೆರ್ಲಿನ್ ದೂರಿನಲ್ಲಿ ತಿಳಿಸಿದ್ದಳು. ಆ ಸುದ್ದಿ ಆಗ ಭಾರೀ ಸದ್ದು ಮಾಡಿತ್ತು.

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಚೆರ್ಕಿನ್ ಚೋಪ್ರಾ, ಮುಂದೆ ಬಾಲಿವುಡ್ ಪ್ರವೇಶಿಸಿದ್ದಳು. ಅದಕ್ಕು ಮುನ್ನ 1999ರಲ್ಲಿ ಮಿಸ್ ಹೈದರಾಬಾದ್ ಕಿರೀಟ ಮುಡಿಗೇರಿಸಿಕೊಂಡಿದ್ದಳು. 'ವೆಂಡಿ ಮಬ್ಬು' ಎನ್ನುವ ತೆಲುಗು ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಳು. ನಂತರ ತಮಿಳು ಸಿನಿಮಾಗಳಲ್ಲಿ ನಟಿಸಿದ ಈಕೆ 'ಟೈಂ ಪಾಸ್' ಸಿನಿಮಾ ಮೂಲಕ ಬಾಲಿವುಡ್‌ಗೆ ಅಡಿ ಇಟ್ಟಿದ್ದಳು.

ಜವಾನಿ ದಿವಾಜಿ, ದಿಲ್ ಬೋಲೆ ಹಡಿಪ್ಪಾ, ವಾಜ್ ತುಮ್ ಹೋ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾಳೆ. ಇಂಗ್ಲೀಷ್ ಪ್ರಾಜೆಕ್ಟ್ 'ಕಾಮಸೂತ್ರ' ನಿಂತೇ ಹೋಗಿದೆ. ಶೆರ್ಲಿನ್ ಚಿತ್ರಗಳಲ್ಲಿ ನಟಿಸಿದ್ದಕ್ಕಿಂತ ಮೈಮಾಟ ಪ್ರದರ್ಶನ ಹಾಗೂ ವಿವಾದಗಳಿಂದ ಸುದ್ದಿ ಆಗಿದ್ದೇ ಹೆಚ್ಚು. ಅಂದಹಾಗೆ ಈಗ ಆಕೆಯ ಕೈಯಲ್ಲಿ ಯಾವುದೇ ಸಿನಿಮಾಗಳು ಇಲ್ಲ.

More from Filmibeat

English summary
Sherlyn Chopra shows Hot 6-pack abs In Front Of Paparazzi. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X