For Quick Alerts
  ALLOW NOTIFICATIONS  
  For Daily Alerts

  ಪ್ಲೇಬಾಯ್ ಪತ್ರಿಕೆಯಲ್ಲಿ ಶೆರ್ಲಿನ್ ನೀಲಿ ಚಿತ್ರಗಳು!

  By Rajendra
  |

  ಬಾಲಿವುಡ್ ಐಟಂ ಬಾಂಬ್ ಶೆರ್ಲಿನ್ ಚೋಪ್ರಾ ವೃತ್ತಿಜೀವನದಲ್ಲಿ ಇನ್ನೊಂದು ಮೈಲಿಗಲ್ಲನ್ನು ತಲುಪಿದ್ದಾರೆ. ಇಷ್ಟು ದಿನ ಆಕೆ ರಾಷ್ಟ್ರಮಟ್ಟದಲ್ಲಿ ತಮ್ಮ ಮಾದಕತೆಯನ್ನು ಪ್ರದರ್ಶಿಸುವ ಮೂಲಕ ಸುದ್ದಿ ಮಾಡಿದ್ದರು. ಈಗ ಏಕ್ ದಂ ಆಕೆಯ ಪ್ರತಿಷ್ಠೆ ಅಂತಾರಾಷ್ಟ್ರೀಯ ಮಟ್ಟಕ್ಕೇರಿದೆ. ಇದಕ್ಕೆ ಕಾರಣವಾಗಿರುವುದು 'ಪ್ಲೇಬಾಯ್' ನೀಲಿ ಪತ್ರಿಕೆ.

  ಪುರುಷರ ನಿಯತಕಾಲಿಕೆ 'ಪ್ಲೇಬಾಯ್' ಹೆಸರು ಕೇಳಿದರೆ ಸಾಕು ಎಂಥವರಿಗೂ ಕಿವಿ ನಿಮಿರುತ್ತದೆ. ಸಾಮಾನ್ಯವಾಗಿ ಓದುಗರ ಕೈಗೆ 'ಪ್ಲೇಬಾಯ್' ಪತ್ರಿಕೆ ಸಿಗುತ್ತಿದ್ದಂತೆ ಮಧ್ಯದ ಪುಟಕ್ಕೆ ಸರಸರ ಸರಿಯುತ್ತಾರೆ. ಮಧ್ಯದ ಪುಟದಲ್ಲಿ ಈ ಬಾರಿ ಯಾವ ಕಾಮಿನಿ ದರ್ಶನ ನೀಡಿರಬಹುದು ಎಂಬ ಕುತೂಹಲ ಓದುಗನದು.

  ಸಾಮಾನ್ಯವಾಗಿ 'ಪ್ಲೇಬಾಯ್' ಪತ್ರಿಕೆಗೆ ಪೋಸು ನೀಡುವ ಬೆಡಗಿಯರು ನಾಚಿಕೆ ಗೀಚಿಕೆಯನ್ನು ಊರಾಚೆಗೆ ಇಟ್ಟೇ ಬಂದಿರುತ್ತಾರೆ. ಶೆರ್ಲಿನ್ ಚೋಪ್ರಾ ಕೂಡ ಯಾವುದೇ ಬಿಗುಮಾನವಿಲ್ಲದಂತೆ ಪ್ಲೇಬಾಯ್ ಗಾಗಿ ಸಂಪೂರ್ಣ ಬೆತ್ತಲಾಗಿದ್ದಾರೆ.

  ಪತ್ರಿಕೆಗಾಗಿ ನಡೆದ ಫೋಟೋ ಶೂಟ್ ದೃಶ್ಯಗಳನ್ನು ನೀವಿಲ್ಲಿ ಕಾಣಬಹುದು. ಈ ಫೋಟೋಗಳನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕುವ ಮೂಲಕ ಪಡ್ಡೆಗಳ ಬಿಪಿ ರೈಸ್ ಮಾಡಿದ್ದಾರೆ. ಕೇವಲ ಸ್ವಲ್ಪ ಸಮಯ ಮಾತ್ರ ಈ ಫೋಟೋಗಳನ್ನು ಪ್ರದರ್ಶಿಸಿ ಬಳಿಕ ಡಿಲೀಟ್ ಮಾಡಿದ್ದಾರೆ.

  ಆಕೆ ಡಿಲೀಟ್ ಮಾಡುವಷ್ಟರಲ್ಲಾಗಲೆ ಲಕ್ಷಾಂತರ ಪ್ರೇಮಿಗಳು ಈ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಂಡಾಗಿತ್ತು. ಈಕೆಯ ಮೂಲ ಹೆಸರು ಮೋನಾ ಚೋಪ್ರಾ. ಹುಟ್ಟಿದ್ದು ಹೈದರಾಬಾದಿನಲ್ಲಿ. ಸ್ಥಳೀಯ ಸ್ಟಾನ್ಲಿ ಶಾಲೆಯಲ್ಲಿ ಎಬಿಸಿಡಿ ಕಲಿತ ಈಕೆ ಅರ್ಧಕ್ಕೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿದ್ದರು.

  ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಈಕೆಗೆ ಹೇಳಿಕೊಳ್ಳುವಂತಹ ಅವಕಾಶಗಳು ಬರಲಿಲ್ಲ. ಆಲ್ಬಂಗಳನ್ನು ಮಾಡಿ ಪ್ರಚಾರ ಗಿಟ್ಟಿಸಿದರು. ಹಾಟ್ ಫೋಟೋಗಳಿಂದ ಬಾಲಿವುಡ್ ನಿರ್ಮಾಪಕರ ಗಮನಸೆಳೆಯುವ ಪ್ರಯತ್ನ ಮಾಡಿದರು.

  ಈಕೆಯ ಆಸ್ತಿಪಾಸ್ತಿಯನ್ನು ನೋಡಿದ ಬಾಲಿವುಡ್ ನಿರ್ಮಾಪಕರು ರತ್ನಗಂಬಳಿ ಹಾಸಿ ಅವಕಾಶ ಕೊಟ್ಟರು. ಅಲ್ಲಿಂದ ಈಕೆ ಹಿಂತಿರುಗಿ ನೋಡಲಿಲ್ಲ. ಈಕೆಯ ಚಿತ್ರಗಳು ಹೇಳಿಕೊಳ್ಳುವಂತಹ ಸದ್ದು ಮಾಡದಿದ್ದರೂ ಈಕೆ ಮಾತ್ರ ಆಗಾಗ ಸದ್ದು ಮಾಡುತ್ತಲೇ ಇದ್ದಾರೆ.

  ಈ ಹಿಂದೊಮ್ಮೆ ಶೆರ್ಲಿನ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮದೇ ಆದ ನಗ್ನ ಫೋಟೋವನ್ನು ತೇಲಿಬಿಟ್ಟಿದ್ದರು. ನನ್ನ ಸಂಗ್ರಹಲ್ಲಿದ್ದ ಫೋಟೋವನ್ನು ಗೆಳೆಯರು ಹಾಗೂ ಅಭಿಮಾನಿಗಳ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು ಹಾಗಾಗಿ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿದ್ದೇನೆ ಎಂದಿದ್ದರು ಶೆರ್ಲಿನ್.(ಏಜೆನ್ಸೀಸ್)

  English summary
  Bollywood hot actress Sherlyn Chopra posted a series of her in birthday suit pictures clicked during the photoshoot for Playboy magazine. he model has become the first Indian to shoot for Hugh Hefner's adult magazine Playboy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X