For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ವಿರುದ್ಧ ದೂರು ನೀಡಿದ ಶೆರ್ಲಿನ್ ಚೋಪ್ರಾ

  |

  ರಾಜ್ ಕುಂದ್ರಾ ಬಂಧನ ಆದ ದಿನದಿಂದಲೂ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ಬಾಲಿವುಡ್‌ನ ಗ್ಲಾಮರಸ್ ನಟಿ ಶೆರ್ಲಿನ್ ಚೋಪ್ರಾ ಇದೀಗ ಈ ದಂಪತಿ ವಿರುದ್ಧ ದೂರು ದಾಖಲಿಸಿದ್ದಾರೆ.

  ಏಪ್ರಿಲ್ ತಿಂಗಳಿನಲ್ಲಿಯೇ ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಹಿಂಸಾಚಾರದ ದೂರು ದಾಖಲಿಸಿದ್ದರು, ಆದರೆ ಆ ದೂರನ್ನು ಹಿಂಪಡೆದಿದ್ದು, ಈಗ ಮತ್ತೆ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದಾರೆ.

  ದೂರು ನೀಡಿದ ಬಳಿಕ ಮಾತನಾಡಿರುವ ಶೆರ್ಲಿನ್ ಚೋಪ್ರಾ, ''ಈ ಹಿಂದೆ ದೂರು ನೀಡಿದ್ದಾಗ ನನಗೆ ರಾಜ್ ಕುಂದ್ರಾ ಕಡೆಯಿಂದ ಸತತ ಬೆದರಿಕೆಗಳು ಬಂದಿದ್ದವು ಹಾಗಾಗಿ ಒತ್ತಡಕ್ಕೆ ಒಳಗಾಗಿ ನಾನು ದೂರು ವಾಪಸ್ ಪಡೆದೆ. ಈಗ ಎಲ್ಲ ಧೈರ್ಯ ಒಟ್ಟು ಮಾಡಿಕೊಂಡು ದೂರು ನೀಡುತ್ತಿದ್ದೇನೆ'' ಎಂದಿದ್ದಾರೆ.

  ಲೈಂಗಿಕ ದೌರ್ಜನ್ಯ, ವಂಚನೆ ಮತ್ತು ಬೆದರಿಕೆ ಆರೋಪಗಳನ್ನು ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಮಾಡಿದ್ದಾರೆ. ದೂರುಗಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಬೇಕು ಎಂದು ಶೆರ್ಲಿನ್ ಒತ್ತಾಯಿಸಿದ್ದಾರೆ.

  ''ರಾಜ್ ಕುಂದ್ರಾ ಕಳೆದ ವರ್ಷ ಮಾರ್ಚ್ 27 ಕ್ಕೆ ನನ್ನ ಮನೆಗೆ ಬಂದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನನ್ನನ್ನು ಬಲವಂತವಾಗಿ ಫೊಟೊಶೂಟ್ ಮಾಡುವಂತೆ ಬೆದರಿಸಿದ್ದ ಆ ನಂತರ ಆತನದ್ದೇ ಕಂಪೆನಿಯೊಂದಕ್ಕೆ ಫಿಟ್‌ನೆಸ್ ವಿಡಿಯೋಗಳನ್ನು ಮಾಡಿಕೊಡುವಂತೆ ಹೇಳಿದ್ದ, ಅಂತೆಯೇ ನಾನು ಫಿಟ್‌ನೆಸ್ ವಿಡಿಯೋಗಳನ್ನು ಮಾಡಿಕೊಟ್ಟಿದ್ದೇನೆ'' ಎಂದಿದ್ದಾರೆ ಶೆರ್ಲಿನ್ ಚೋಪ್ರಾ.

  ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ರಾಜ್ ಕುಂದ್ರಾ ಬಂಧನಕ್ಕೆ ಒಳಗಾದಾಗಿನಿಂದಲೂ ಶೆರ್ಲಿನ್ ಚೋಪ್ರಾ ಸಾಮಾಜಿಕ ಜಾಲತಾಣದ ಮೂಲಕ ಕುಂದ್ರಾ ವಿರುದ್ಧ ಒಂದಲ್ಲ ಒಂದು ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಶಿಲ್ಪಾ ಶೆಟ್ಟಿಯ ಬಗ್ಗೆಯೂ ಹಲವು ಆರೋಪಗಳನ್ನು ಶೆರ್ಲಿನ್ ಚೋಪ್ರಾ ಮಾಡಿದ್ದರು.

  ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಅವನ್ನು ವಿದೇಶದಲ್ಲಿರುವ ತನ್ನ ಸಹೋದರ ಸಂಬಂಧಿಯ ಕಂಪೆನಿಯ ಸಹಾಯದ ಮೂಲಕ ಅವನ್ನು ಹಾಟ್‌ಶಾಟ್ಸ್‌ ಹೆಸರಿನ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡುತ್ತಿದ್ದರು. ಆ ಮೂಲಕ ದಿನವೊಂದಕ್ಕೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ಜುಲೈ 19 ರಂದು ಬಂಧನಕ್ಕೆ ಒಳಗಾಗಿದ್ದ ರಾಜ್ ಕುಂದ್ರಾ ಸೆಪ್ಟಂಬರ್ 21ಕ್ಕೆ ಜಾಮೀನಿನ ಮೇಲೆ ಹೊರಗೆ ಬಂದರು.

  English summary
  Sherlyn Chopra gave complaint against Raj Kundra and Shilpa Shetty. She alleged that Raj Kundra sexually harassed her and cheated her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X