For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣೇಶ ಸಂಭ್ರಮ

  |

  ಕೊರೊನಾ ವೈರಸ್ ನಡುವೆಯೂ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲು ಮುಂಬೈ ನಗರ ಸಜ್ಜಾಗುತ್ತಿದೆ. ಬಾಲಿವುಡ್‌ನಲ್ಲಿ ಈ ಸಂಭ್ರಮ ಶುರುವಾಗಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎರಡು ದಿನ ಮುಂಚೆಯೇ ಗಣೇಶ ವಿಗ್ರಹವನ್ನು ಮನೆಗೆ ತೆಗೆದುಕೊಂಡಿದ್ದಾರೆ.

  ಬ್ಲಾಕ್ ಟಿಕೆಟ್ ಮಾರಿ ಸೈಟ್ ತಗೊಂಡಿದ್ರು ಅಭಿಮಾನಿಗಳು | Filmibeat Kannada

  ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗಲು ಸ್ವತಃ ಶಿಲ್ಪಾ ಶೆಟ್ಟಿ ಅವರೇ ಹೋಗಿದ್ದರು. ಗುಲಾಬಿ ಮತ್ತು ಹಳದಿ ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿದ್ದರು. ಕೊರೊನಾ ಭೀತಿಯಿಂದ ಮಾಸ್ಕ್ ಮತ್ತು ಗ್ಲೌಸ್ ಸಹ ತೊಟ್ಟಿದ್ದರು.

  ಬಾಡಿಗೆ ತಾಯ್ತನ ಮೂಲಕ ಮತ್ತೆ ಅಮ್ಮನಾದ ಸಂಭ್ರಮದಲ್ಲಿ ನಟಿ ಶಿಲ್ಪ ಶೆಟ್ಟಿಬಾಡಿಗೆ ತಾಯ್ತನ ಮೂಲಕ ಮತ್ತೆ ಅಮ್ಮನಾದ ಸಂಭ್ರಮದಲ್ಲಿ ನಟಿ ಶಿಲ್ಪ ಶೆಟ್ಟಿ

  ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಈ ವರ್ಷದ ಗಣೇಶ ಹಬ್ಬ ವಿಶೇಷವಾಗಿರಲಿದೆ. ಏಕಂದ್ರೆ, ಶಿಲ್ಪಾ ಶೆಟ್ಟಿಯ ಮಗಳು ಸಮೀಷಾಗೆ ಇದು ಮೊದಲ ಗಣೇಶ ಹಬ್ಬ. ಹಾಗಾಗಿ, ಮನೆಯಲ್ಲಿ ಸಂಭ್ರಮ ಸ್ವಲ್ಪ ಜೋರಾಗಿರಲಿದೆ.

  ಪ್ರತಿ ವರ್ಷ ಶಿಲ್ಪಾ, ಅವರ ಪತಿ ರಾಜ್ ಕುಂದ್ರಾ ಮತ್ತು ಮಗ ವಿಯಾನ್ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದರು. ಇನ್ನು ಕಳೆದ ವರ್ಷ ಶಿಲ್ಪಾ ಶೆಟ್ಟಿ, ಪತಿ ಹಾಗೂ ಮಗ ಮುಂಬೈನ ನಿವಾಸದಲ್ಲಿ ಆಚರಿಸಿದ್ದನ್ನು ಸ್ಮರಿಸಬಹುದು.

  English summary
  Bollywood actress Shilpa Shetty brings Ganapati murti for home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X