For Quick Alerts
  ALLOW NOTIFICATIONS  
  For Daily Alerts

  ಪತಿ ಜೊತೆಗಿಲ್ಲದ ನೋವಿನಲ್ಲೂ ಗಣೇಶ ಹಬ್ಬ ಆಚರಿಸಿದ ಶಿಲ್ಪಾ ಶೆಟ್ಟಿ

  |

  ಬಾಲಿವುಡ್‌ನ ಕೆಲವು ಸೆಲೆಬ್ರಿಟಿಗಳು ಗಣೇಶ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಅದರಲ್ಲೂ ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ ಕುಟುಂಬವಂತೂ ಜಾತ್ರೆ ರೀತಿ ಸೆಲೆಬ್ರೆಟ್ ಮಾಡ್ತಿದ್ದರು. ಆದರೆ ಈ ವರ್ಷ ಸಲ್ಮಾನ್ ಖಾನ್ ಚಿತ್ರೀಕರಣ ಹಿನ್ನೆಲೆ ವಿದೇಶದಲ್ಲಿದ್ದಾರೆ. ಹಾಗಾಗಿ, ಗಣೇಶ ಹಬ್ಬ ಮಿಸ್ ಮಾಡಿಕೊಂಡರು. ಇನ್ನು ಪತಿ ಜೈಲು ಸೇರಿರುವ ಈ ಸಮಯದಲ್ಲೂ ಶಿಲ್ಪಾ ಶೆಟ್ಟಿ ಹಬ್ಬ ಆಚರಿಸಿ ಗಮನ ಸೆಳೆದಿದ್ದಾರೆ.

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿ ಜೈಲಿನಲ್ಲಿದ್ದರೂ, ಶಿಲ್ಪಾ ಶೆಟ್ಟಿ ಮಾತ್ರ ತನ್ನ ಮಕ್ಕಳ ಜೊತೆ ಗಣೇಶ ಹಬ್ಬ ಸಂಭ್ರಮಿಸಿರುವುದು ಚರ್ಚೆಗೆ ಕಾರಣವಾಗಿದೆ.

  ಪತಿಯ ಬ್ಲೂ ಫಿಲ್ಮ್ ದಂಧೆ ಪ್ರಕರಣದ ನಡುವೆಯೂ ಶಿಲ್ಪಾ ಶೆಟ್ಟಿ ಸಂಭ್ರಮ; ಮನೆಗೆ ಗಣಪನನ್ನು ಕರೆತಂದ ನಟಿಪತಿಯ ಬ್ಲೂ ಫಿಲ್ಮ್ ದಂಧೆ ಪ್ರಕರಣದ ನಡುವೆಯೂ ಶಿಲ್ಪಾ ಶೆಟ್ಟಿ ಸಂಭ್ರಮ; ಮನೆಗೆ ಗಣಪನನ್ನು ಕರೆತಂದ ನಟಿ

  ಈ ಹಿಂದಿನ ವರ್ಷದ ಗಣೇಶ ಹಬ್ಬ ಸಂಭ್ರಮಾಚರಣೆ ವೇಳೆ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಖುದ್ದು ತೆರಳಿ ಗಣೇಶನ ಮೂರ್ತಿ ತೆಗೆದುಕೊಂಡು ಬರ್ತಿದ್ದರು. ಮನೆಯವರೆಗೂ ಜೈಕಾರ ಹಾಕಿಕೊಂಡು ಬರ್ತಿದ್ದರು. ಆದರೆ ಈ ಸಲ ಪತಿ ಇಲ್ಲ. ಆದರೂ ಶಿಲ್ಪಾ ಶೆಟ್ಟಿ ಗಣೇಶನ ಪೂಜೆ ಮರೆತಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ವಿನಾಯಕನ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

  ರಾಜ್ ಕುಂದ್ರಾ ಬಂಧನವಾಗಿ ಎರಡು ತಿಂಗಳು ಆಗುತ್ತಿದೆ. ಜುಲೈ 19 ರಂದು ಅಶ್ಲೀಲ ವಿಡಿಯೋ ನಿರ್ಮಾಣ ಆರೋಪದಲ್ಲಿ ಮುಂಬೈ ಕ್ರೈಂ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದರು. ಜಾಮೀನು ಅರ್ಜಿ ಹಾಕಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಸೆಷನ್ಸ್ ನ್ಯಾಯಾಲಯ, ಹೈ ಕೋರ್ಟ್‌ನಲ್ಲೂ ಜಾಮೀನು ಅರ್ಜಿ ವಜಾಗೊಂಡಿದೆ. ಪತಿಯನ್ನು ಬಿಡುಗಡೆಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತ ಶಿಲ್ಪಾ ಶೆಟ್ಟಿ ಮಾನಸಿಕವಾಗಿ ಕುಗ್ಗಿದರು. ಹಾಗಂತ ಮನೆಯಲ್ಲಿ ಕೂತು ಕಣ್ಣೀರು ಹಾಕಲಿಲ್ಲ. ಪತಿಯ ಬಂಧನದಿಂದ ಅವಮಾನ, ಮುಜುಗರ ಎದುರಿಸಿದರೂ ಅದನ್ನೆಲ್ಲ ಲೆಕ್ಕಿಸದೆ ತನ್ನ ದೈನಂದಿನ ಜೀವನಕ್ಕೆ ವಾಪಸ್ ಆಗಿದ್ದಾರೆ. ಅದೇ ಮನಸ್ಸಿನಿಂದ ಈಗ ಗಣೇಶ ಹಬ್ಬವನ್ನು ಸಹ ಆಚರಿಸಿ ಗಮನ ಸೆಳೆದಿದ್ದಾರೆ.

  ಪತಿ ಇಲ್ಲದ ಈ ನೋವಿನಲ್ಲಿದ್ದರೂ ಶಿಲ್ಪಾ ಶೆಟ್ಟಿ ತನ್ನ ಮಕ್ಕಳ ಜೊತೆ ಸೇರಿ ಹಬ್ಬ ಆಚರಿಸಿದ್ದಾರೆ. ತನ್ನ ಮಗ ಮತ್ತು ಮಗಳ ಜೊತೆ ಗಣೇಶ ಪೂಜೆ ಮಾಡುತ್ತಿರುವ ಫೋಟೋವನ್ನು ಸ್ವತಃ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

  ರಾಜ್ ಕುಂದ್ರರಿಂದ ಮಕ್ಕಳನ್ನು ದೂರ ಇಟ್ಟ ಶಿಲ್ಪಾ ಶೆಟ್ಟಿ; ಪತಿಯಿಂದ ದೂರ ಆಗ್ತಾರಾ ನಟಿ?ರಾಜ್ ಕುಂದ್ರರಿಂದ ಮಕ್ಕಳನ್ನು ದೂರ ಇಟ್ಟ ಶಿಲ್ಪಾ ಶೆಟ್ಟಿ; ಪತಿಯಿಂದ ದೂರ ಆಗ್ತಾರಾ ನಟಿ?

  ಮತ್ತೊಂದೆಡೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿಯ ಮನೆಯಲ್ಲೂ ಗಣೇಶ ಹಬ್ಬ ಆಚರಿಸಿದ್ದು, ತೈಮೂರ್ ಅಲಿ ಖಾನ್ ಗಜಮುಖನಿಗೆ ನಮಸ್ಕರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿದೆ.

  Shilpa Shetty celebrates Ganesh Chaturthi at her house

  ಕಳೆದ ವರ್ಷ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಒಟ್ಟಿಗೆ ಗಣೇಶ ಹಬ್ಬ ಆಚರಿಸಿದ್ದರು. ಶಿಲ್ಪಾ ಶೆಟ್ಟಿ ಮಗಳು ಸಮೀಷಾಗೆ ಅದು ಮೊದಲ ವರ್ಷದ ಗಣೇಶ ಹಬ್ಬ ಆಗಿತ್ತು. ಹಾಗಾಗಿ, ಕೋವಿಡ್ ಭೀತಿಯ ನಡುವೆಯೂ ಸಂಭ್ರಮಿಸಲಾಗಿತ್ತು. ಆದರೆ, ಈ ವರ್ಷ ರಾಜ್ ಕುಂದ್ರಾ ಜೈಲಿನಲ್ಲಿದ್ದಾರೆ. ಆದರೂ ನೋವು ವ್ಯಕ್ತಪಡಿಸದ ನಟಿ ಖುಷಿಯಿಂದ ಹಬ್ಬ ಮಾಡಿದ್ದಾರೆ.

  ರಾಜ್ ಕುಂದ್ರಾ ಬಂಧನದ ಬಳಿಕ ಸುಮಾರು ಒಂದು ತಿಂಗಳು ಸಮಯ ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಡ್ಯಾನ್ಸ್ ಶೋನಿಂದಲೂ ಹಿಂದೆ ಸರಿದಿದ್ದರು. ತುಂಬಾ ದಿನಗಳ ನಂತರ ಮತ್ತೆ ಡ್ಯಾನ್ಸ್ ಕಾರ್ಯಕ್ರಮದ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಂಡರು.

  ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದರು. ನಟಿಯರನ್ನು ಒತ್ತಾಯ ಮಾಡಿ ಈ ಚಿತ್ರಗಳಲ್ಲಿ ನಟಿಸುವಂತೆ ಮಾಡುತ್ತಿದ್ದರು ಎಂಬ ಆರೋಪ ಇದೆ. ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಸೇರಿದಂತೆ ಇನ್ನು ಕೆಲವು ಮಾಡೆಲ್ ಹಾಗೂ ನಟಿಯರು ಕುಂದ್ರಾ ವಿರುದ್ಧ ದೂರು ನೀಡಿದ್ದಾರೆ.

  English summary
  Bollywood Actress Shilpa Shetty celebrate Ganesh Chaturthi at her house. her husband raj kundra is in jail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X