13 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ ಬಂದ ಶಿಲ್ಪಾ ಶೆಟ್ಟಿ

ಪ್ರೀತ್ಸೋದ್ ತಪ್ಪಾ.....ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದ ಶಿಲ್ಪಾ ಶೆಟ್ಟ, 'ಒಂದಾಗೋಣ ಬಾ' ಎಂದು ಕುಣಿದಾಡಿದ್ದರು. ಆ ಬಳಿಕ ಉಪೇಂದ್ರ ಜೊತೆ 'ಆಟೋ ಶಂಕರ್' ಸಿನಿಮಾ ಮಾಡಿದ್ದರು. ಹೀಗೆ, ಕನ್ನಡದಲ್ಲಿ ಮಾಡಿದ ಮೂರು ಚಿತ್ರಗಳಿಂದಲೇ ಅಪಾರ ಅಭಿಮಾನಿಗಳನ್ನ ಹೊಂದಿದ್ದ ಶಿಲ್ಪಾ ಶೆಟ್ಟಿ 2007ರ ನಂತರ ಚಿತ್ರರಂಗದಿಂದ ದೂರ ಸರಿದಿದ್ದರು.

2007ರಲ್ಲಿ ತೆರೆಕಂಡಿದ್ದ 'ಅಪ್ನೆ' ಸಿನಿಮಾದ ಬಳಿಕ ಅಲ್ಲೊಂದು ಇಲ್ಲೊಂದು ಅತಿಥಿ ಪಾತ್ರ ಮಾಡಿದ್ದ ಶಿಲ್ಪಾ ಶೆಟ್ಟಿ 2009ರಲ್ಲಿ ರಾಜ್ ಕುಂದ್ರಾ ಜೊತೆ ವಿವಾಹವಾದರು. ವೈವಾಹಿಕ ಜೀವನಕ್ಕೆ ಪ್ರವೇಶ ಮಾಡಿದ ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದರು.

ಬಾಲಿವುಡ್ ಇಂಡಸ್ಟ್ರಿಯಲ್ಲಿ ಅಂತರ ಕಾಯ್ದುಕೊಂಡಿದ್ದ ಶಿಲ್ಪಾ ಈಗ ಮತ್ತೆ ಕಂಬ್ಯಾಕ್ ಆಗ್ತಿದ್ದಾರೆ. ನಿಕಮ್ಮಾ ಚಿತ್ರದ ಮೂಲಕ ಬಿಟೌನ್ ಗೆ ರೀ-ಎಂಟ್ರಿ ಕೊಡ್ತಿದ್ದಾರೆ.

Shilpa Shetty Come Back to Film Industry

ಮದುವೆ ಆಗಿ, ಒಂದು ಮಗು ಆದ ಬಳಿಕವೂ ಶಿಲ್ಪಾ ಶೆಟ್ಟಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು. ಯೋಗ, ಜಿಮ್ ನಲ್ಲಿ ವರ್ಕೌಟ್ ಮಾಡಿ ಸೌಂದರ್ಯ ಕಾಪಾಡಿಕೊಂಡಿದ್ದಾರೆ. 44 ವರ್ಷದ ಶಿಲ್ಪಾ ಶೆಟ್ಟಿ ಈಗಲೂ ಯುವನಟಿಯರು ನಾಚುವಂತೆ ಗ್ಲಾಮರ್ ಹೊಂದಿದ್ದಾರೆ.

ಸಬೀರ್ ಖಾನ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ಇದು ರೋಮ್ಯಾಂಟಿಕ್ ಸಿನಿಮಾ ಆಗಿದೆ. ಚಿತ್ರದ ಕಥೆ ಕೇಳಿ ಥ್ರಿಲ್ ಆಗಿರುವ ಶಿಲ್ಪಾ, ಚಿತ್ರೀಕರಣದಲ್ಲಿ ಭಾಗಿಯಾಗಲು ಬಹಳ ಉತ್ಸುಕತೆಯಿಂದ ಕಾಯುತ್ತಿದ್ದಾರೆ.

1993ರಲ್ಲಿ 'ಬಾಜಿಗರ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ, ಧಡ್ಕನ್, ಮಿಸ್ಟರ್ ರೋಮಿಯೋ, ಹಿಮ್ಮತ್, ಔಜಾರ್ ಮತ್ತು ತೆಲುಗು, ತಮಿಳು ಸಿನಿಮಾಗಳಲ್ಲು ನಟಿಸಿದ್ದರು.

More from Filmibeat

English summary
Bollywood beauty Shilpa Shetty will Come Back to Film Industry after 13 years. she is last seen on screen in open at 2007. now, she announced nikamma movie with sabbir khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X