For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್: ಪುಟ್ಟ ಮಗಳಿಗೂ ತಗುಲಿದ ಸೋಂಕು

  |

  ಕೊರೊನಾ ಭೀಕರತೆಯಿಂದ ಇಡೀ ದೇಶ ತತ್ತರಿಸಿ ಹೋಗಿದೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಅನೇಕ ಸಿನಿ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇತ್ತೀಚಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕುಟುಂಬ ಕೊರೊನಾ ಸೋಂಕಿಗೆ ತುತ್ತಾದ ಬೆನ್ನಲ್ಲೇ ಈಗ ಬಾಲಿವುಡ್ ಮತ್ತೋರ್ವ ಸ್ಟಾರ್ ನಟಿ ಶಿಲ್ಪ ಶೆಟ್ಟಿ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

  ಶಿಲ್ಪಾ ಶೆಟ್ಟಿ ಹೊರತು ಪಡಿಸಿ ಇಡೀ ಕುಟುಂಬಕ್ಕೆ ತಾಯಿ, ಪತಿ ರಾಜ್ ಕುಂದ್ರ ಮತ್ತು ಇಬ್ಬರು ಮುದ್ದಾದ ಮಕ್ಕಳಾದ ವಿಹಾನ್ ಮತ್ತು ಸಮಿಶಾ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಶಿಲ್ಪಾ ಶೆಟ್ಟಿ ಕೊರೊನಾ ವರದಿ ನೆಗೆಟಿವ್ ಬಂದಿರುವುದಾಗಿ ಹೇಳಿದ್ದಾರೆ. ಕಳೆದ 10 ದಿನಗಳು ತೀರ ಕಷ್ಟಕರವಾದ ದಿನಗಳಾಗಿತ್ತು ಎಂದು ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ನಿಧಿ ಸಂಗ್ರಹ ಅಭಿಯಾನ: 2 ಕೋಟಿ ರೂ. ದೇಣಿಗೆ ನೀಡಿದ ವಿರುಷ್ಕಾ ದಂಪತಿನಿಧಿ ಸಂಗ್ರಹ ಅಭಿಯಾನ: 2 ಕೋಟಿ ರೂ. ದೇಣಿಗೆ ನೀಡಿದ ವಿರುಷ್ಕಾ ದಂಪತಿ

  'ನಮ್ಮ ಕುಟುಂಬಕ್ಕೆ ಕಳೆದ 10 ದಿನಗಳು ತೀರ ಸಂಕಷ್ಟದ ದಿನಗಳಾಗಿತ್ತು. ನನ್ನ ಕುಟುಂಬದಲ್ಲಿ ಮಗಳು ಸಮಿಶಾ, ವಿಹಾನ್, ನನ್ನ ಅಮ್ಮ ಮತ್ತು ರಾಜ್. ಎಲ್ಲರೂ ಪ್ರತ್ಯೇಕವಾಗಿ ಕ್ವಾರಂಟೈನ್ ಆಗಿದ್ದರು. ಕೊರೊನಾ ನಿಯಮಗಳನ್ನು ಪಾಲಿಸಿದ್ದಾರೆ. ವೈದ್ಯರು ಹೇಳಿದ ಸಲಹೆಯನ್ನು ಅನುಸರಿಸುತ್ತಿದ್ದಾರೆ.'

  'ನಮ್ಮ ಮನೆಯ ಇಬ್ಬರು ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ದೇವರ ದಯೇ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ನನ್ನ ವರದಿ ನೆಗೆಟಿವ್ ಬಂದಿದೆ. ನಿಮ್ಮೆಲ್ಲರ ಹಾರೈಕೆ, ಬೆಂಬಲ, ಪ್ರೀತಿಗೆ ಧನ್ಯವಾದಗಳು. ಎಲ್ಲರೂ ಮಾಸ್ಕ್ ಧರಿಸಿ' ಎಂದು ಶಿಲ್ಪಾ ಹೇಳಿದ್ದಾರೆ.

  Nagini 2 ಸೀರಿಯಲ್ ನಿಂದ ಮೋಹನ್ ಶಂಕರ್ ಹೊರಬರಲು ಕಾರಣವೇನು? | Filmibeat Kannada

  ಬಾಲಿವುಡ್ ನ ಅನೇಕ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಎಲ್ಲರೂ ಗುಣಮುಖರಾಗಿದ್ದಾರೆ. ಅಕ್ಷಯ್ ಕುಮಾರ್, ಕತ್ರಿನಾ ಕೈಫ್, ಅಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ ಅನೇಕರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ದೀಪಿಕಾ ಪಡುಕೋಣೆ ಕುಟುಂಬಕ್ಕೂ ಕೊರೊನಾ ಸೋಂಕು ತಗುಲಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ.

  English summary
  Actress Shilpa Shetty confirms her family test positive for corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X