For Quick Alerts
  ALLOW NOTIFICATIONS  
  For Daily Alerts

  ಅಯ್ಯೋ ಶಿಲ್ಪಾ ಶೆಟ್ಟಿಗೆ ಏನಾಗಿದೆ.? ಹೋಗಿ ಹೋಗಿ ಶೂ ತಿಂತಿದ್ದಾರಲ್ಲ.!

  |
  Shilpa Shetty eating Shoe Shaped Chocolate has been talk of the town | Shoe Chocolate

  ಮಂಗಳೂರಿನಲ್ಲಿ ಹುಟ್ಟಿ, ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿದ ನಟಿ ಶಿಲ್ಪಾ ಶೆಟ್ಟಿ ಶೂ ತಿಂದಿದ್ದಾರೆ.! ಅರೇ ಇವರಿಗೆ ಏನಾಯ್ತಪ್ಪಾ...ಅಂತ ಗಾಬರಿ ಆಗುವ ಮುನ್ನ ಪೂರಾ ಮ್ಯಾಟರ್ ಓದಿಬಿಡಿ..

  ನಟಿ ಶಿಲ್ಪಾ ಶೆಟ್ಟಿ ಶೂ ತಿಂದಿರುವುದು ನಿಜ. ಆದ್ರೆ, ಅದು ಕಾಲಿಗೆ ಧರಿಸುವ ಶೂ ಅಲ್ಲ. ಶೂ ಆಕಾರದಲ್ಲಿ ತಯಾರಾದ ಡಾರ್ಕ್ ಚಾಕಲೇಟ್ ಅಷ್ಟೇ.! ಹೇಳಿ ಕೇಳಿ ನಟಿ ಶಿಲ್ಪಾ ಶೆಟ್ಟಿ ತಿಂಡಿಪೋತಿ. ರುಚಿ ರುಚಿಯಾದ ಆಹಾರಗಳನ್ನು ತಿನ್ನುವುದರಲ್ಲಿ ನಟಿ ಶಿಲ್ಪಾ ಶೆಟ್ಟಿ ಹಿಂದು ಮುಂದು ನೋಡಲ್ಲ.

  ಹೀಗಾಗಿ, ನಿನ್ನೆ ಭಾನುವಾರ ಚಿತ್ರ-ವಿಚಿತ್ರ ಆಕಾರಗಳಲ್ಲಿ ಸಿದ್ಧವಾಗಿದ್ದ ಚಾಕಲೇಟ್, ಕೇಕ್ ಮತ್ತು ಐಸ್ ಕ್ರೀಮ್ ಗಳನ್ನು ನಟಿ ಶಿಲ್ಪಾ ಶೆಟ್ಟಿ ಸವಿದಿದ್ದಾರೆ. ಆ ವಿಡಿಯೋನ ಸ್ವತಃ ಶಿಲ್ಪಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  ಶಿಲ್ಪಾ ಶೆಟ್ಟಿಗೆ ಪತಿ 'ಬಿಬಿಸಿ' ಅಂತ ಕರೆದು, ರೇಗಿಸುವುದು ಯಾಕೆ.?ಶಿಲ್ಪಾ ಶೆಟ್ಟಿಗೆ ಪತಿ 'ಬಿಬಿಸಿ' ಅಂತ ಕರೆದು, ರೇಗಿಸುವುದು ಯಾಕೆ.?

  ಶೂ ಆಕಾರದ ಚಾಕಲೇಟ್ ತಿಂದಿರುವ ನಟಿ ಶಿಲ್ಪಾ ಶೆಟ್ಟಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.

  ನಟಿ ಶಿಲ್ಪಾ ಶೆಟ್ಟಿಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ಆಗಾಗ ಹೊಸ ರೆಸಿಪಿಗಳನ್ನ ತಮ್ಮ ಅಭಿಮಾನಿಗಳ ಜೊತೆಗೆ ಶಿಲ್ಪಾ ಶೆಟ್ಟಿ ಹಂಚಿಕೊಳ್ಳುತ್ತಿರುತ್ತಾರೆ.

  10 ಕೋಟಿ ಆಫರ್ ಬೇಡ ಎಂದು ತಿರಸ್ಕರಿಸಿದ್ರಂತೆ ಶಿಲ್ಪಾ ಶೆಟ್ಟಿ10 ಕೋಟಿ ಆಫರ್ ಬೇಡ ಎಂದು ತಿರಸ್ಕರಿಸಿದ್ರಂತೆ ಶಿಲ್ಪಾ ಶೆಟ್ಟಿ

  ಮನಸ್ಸಿಗೆ ಇಷ್ಟವಾದ ಆಹಾರವನ್ನು ಸೇವಿಸುವ ಶಿಲ್ಪಾ ಶೆಟ್ಟಿ, ಅಷ್ಟೇ ಶಿಸ್ತಾಗಿ ವರ್ಕೌಟ್ ಕೂಡ ಮಾಡುತ್ತಾರೆ. ಪ್ರತಿ ದಿನ ತಪ್ಪದೇ ನಟಿ ಶಿಲ್ಪಾ ಶೆಟ್ಟಿ ಯೋಗ ಮಾಡುತ್ತಾರೆ. ಅದಕ್ಕೆ ವಯಸ್ಸು 44 ಆದರೂ, ಶಿಲ್ಪಾ ಶೆಟ್ಟಿ ಈಗಲೂ ಟೀನೇಜ್ ಹುಡುಗಿಯಂತಿದ್ದಾರೆ.

  ಅಂದ್ಹಾಗೆ, ಬಹು ದಿನಗಳ ನಂತರ ಬಣ್ಣದ ಬದುಕಿಗೆ ನಟಿ ಶಿಲ್ಪಾ ಶೆಟ್ಟಿ ಮರಳುತ್ತಿದ್ದಾರೆ. 'ನಿಕಮ್ಮಾ' ಮತ್ತು 'ಹಂಗಾಮಾ-2' ಚಿತ್ರಗಳಲ್ಲಿ ನಟಿ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.

  English summary
  Video of Bollywood Actress Shilpa Shetty eating Chocolate shoe goes viral in Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X