ಡಾನ್ಸ್ ಮಾಡುವಾಗ ಜಾರಿದ ಶಿಲ್ಪಾ ಶೆಟ್ಟಿ: ವಿಡಿಯೋ ವೈರಲ್
ಬಾಲಿವುಡ್ ನಟಿ, ಬಳಕುವ ಬಳ್ಳಿ, ಯೋಗ ಪಟು, ಫಿಟ್ ನೆಸ್ ಫ್ರೀಕ್ ಹೀಗೆ ನಾನಾ ಹೆಸರುಗಳಿಂದ ಬಣ್ಣಿಸಲ್ಪಡುವ ಸುಂದರಿ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ. ಒಂದು ಕಾಲದಲ್ಲಿ ಬಣ್ಣದ ಲೋಕದಲ್ಲಿ ಸಕ್ರೀಯರಾಗಿದ್ದ ಶಿಲ್ಪ ಇದೀಗ ಸಿನಿಮಾರಂಗದಿಂದ ದೂರ ಸರಿದ್ದಾರೆ. ನಟನೆಯಿಂದ ದೂರ ಇದ್ರು ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಸಖತ್ ಅಕ್ವೀವ್ ಆಗಿದ್ದಾರೆ.
ಸದಾ ಒಂದಲ್ಲೊಂದು ವಿಭಿನ್ನ ವಿಡಿಯೋ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುತ್ತಾರೆ. ಯೋಗ, ಅಡುಗೆ ವಿಡಿಯೋಗಳನ್ನು ಹಂಚಿಕೊಳ್ಳುವ ಶಿಲ್ಪಾ ಶೆಟ್ಟಿ, ಇತ್ತೀಚಿಗೆ ಡಾನ್ಸ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಹಳದಿ ಬಣ್ಣದ ಡ್ರೆಸ್ ಧರಿಸಿ ನೃತ್ಯ ಮಾಡುತ್ತಿರುವ ಶಿಲ್ಪಾ ವಿಡಿಯೋದಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ.
ಸುಂದರವಾಗಿಯೇ ಡಾನ್ಸ್ ಮಾಡುತ್ತಿದ್ದ ಶಿಲ್ಪಾ ಕೊನೆಯಲ್ಲಿ ಜಾರುತ್ತಾರೆ. ಎಡವಿ ಬೀಳುವವರಾಗಿದ್ದರು. ಆದರೆ ಅದೃಷ್ಟವಶಾತ್ ಬಚಾವ್ ಆಗುತ್ತಾರೆ. ಈ ವಿಡಿಯೋವನ್ನು ಸ್ವತಃ ಶಿಲ್ಪಾ ಶೆಟ್ಟಿ ಅವರೇ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಇಂಥ ವಿಡಿಯೋಗಳನ್ನು ಶೇರ್ ಮಾಡಿ, ತಾವೆ ಟ್ರೋಲ್ ಗೆ ಗುರಿಯಾಗಲು ಯಾರು ಇಷ್ಟಪಡುವುದಿಲ್ಲ. ಆದರೆ ಶಿಲ್ಪಾ ಶೆಟ್ಟಿ ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಈ ವಿಡಿಯೋ ಶೇರ್ ಮಾಡಿ, 'ಅಣ್ಣ ಸ್ವಲ್ಪ ನೋಡಿಕೊಂಡು ಹೋಗಿ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಶಿಲ್ಪಾ ಶೆಟ್ಟಿ ವಿಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಹರಿದುಬರುತ್ತಿದೆ. ಇನ್ನು ಶಿಲ್ಪಾ ಶೆಟ್ಟಿ ಸದ್ಯ ಡಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶೇಷ ಎಂದರೆ ಶಿಲ್ಪಾ ಅನೇಕ ವರ್ಷಗಳ ಬಳಿಕ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಹಂಗಾಮ-2 ಸಿನಿಮಾ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.


Click it and Unblock the Notifications











