For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಬಂಧನ ನಂತರ ಶಿಲ್ಪಾ ಶೆಟ್ಟಿ ಹಾಕಿದ ಮೊದಲ ಪೋಸ್ಟ್

  |

  ಬಾಲಿವುಡ್ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಜುಲೈ 19 ರಂದು ರಾತ್ರಿ ಮುಂಬೈ ಪೊಲೀಸರು ಕುಂದ್ರಾರನ್ನು ವಶಕ್ಕೆ ಪಡೆದುಕೊಂಡಿದ್ದರು. ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಜುಲೈ 23ರವರೆಗೂ ಪೊಲೀಸ್ ಕಸ್ಟಡಿ ಮುಂದುವರಿಸುವಂತೆ ಕೋರ್ಟ್ ಆದೇಶ ನೀಡಿತ್ತು.

  ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ

  ರಾಜ್ ಕುಂದ್ರಾ ಬಂಧನ ಆದ ಕ್ಷಣದಿಂದ ನಟಿ ಶಿಲ್ಪಾ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರಲಿಲ್ಲ. ಇದೀಗ, ಪತಿ ಅರೆಸ್ಟ್ ಆದ ನಂತರ ಮೊದಲ ಸಲ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಈ ಪೋಸ್ಟ್‌ ಈಗ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ, ಶಿಲ್ಪಾ ಶೆಟ್ಟಿ ಪೋಸ್ಟ್‌ನಲ್ಲಿ ಏನಿದೆ?

  ರಾಜ್ ಕುಂದ್ರಾ ಅರೆಸ್ಟ್: ಶಿಲ್ಪಾ ಶೆಟ್ಟಿ ಚಿತ್ರಕ್ಕೆ ಭರ್ಜರಿ ಪ್ರಚಾರ!ರಾಜ್ ಕುಂದ್ರಾ ಅರೆಸ್ಟ್: ಶಿಲ್ಪಾ ಶೆಟ್ಟಿ ಚಿತ್ರಕ್ಕೆ ಭರ್ಜರಿ ಪ್ರಚಾರ!

  ಭಯದಿಂದ ಮುಂದೆ ಸಾಗಬೇಡ

  ಭಯದಿಂದ ಮುಂದೆ ಸಾಗಬೇಡ

  ಪತಿ ಬಂಧನದ ಬಳಿಕ ಮೊದಲ ಸಲ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವ ಶಿಲ್ಪಾ ಶೆಟ್ಟಿ, ಪುಸ್ತಕವೊಂದರ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. 'ಕೋಪದಿಂದ ಹಿಂದೆ ನೋಡಬೇಡ, ಭಯದಿಂದ ಮುಂದೆ ಸಾಗಬೇಡ. ಆದರೆ ಸುತ್ತಮುತ್ತ ಎಚ್ಚರದಿಂದಿರು' ಎಂದು ಜೇಮ್ಸ್ ಥರ್ಬರ್ ಹೇಳಿರುವುದನ್ನು ಪೋಸ್ಟ್‌ನಲ್ಲಿ ನೋಡಬಹುದು.

  ಕೋಪದಿಂದ ಹಿಂದೆ ನೋಡಬೇಡ

  ಕೋಪದಿಂದ ಹಿಂದೆ ನೋಡಬೇಡ

  "ನಮ್ಮನ್ನು ನೋಯಿಸಿದ ಜನರು, ನಾವು ಅನುಭವಿಸಿದ ಹತಾಶೆಗಳು, ನಾವು ಅನುಭವಿಸಿದ ದುರದೃಷ್ಟದ ಬಗ್ಗೆ ನಾವು ಕೋಪದಿಂದ ಹಿಂತಿರುಗಿ ನೋಡುತ್ತೇವೆ. ಆದ್ದರಿಂದ ನಾವು ನಮ್ಮ ಕೆಲಸವನ್ನು ಕಳೆದುಕೊಳ್ಳಬಹುದು, ಕಾಯಿಲೆಗೆ ತುತ್ತಾಗಬಹುದು, ಅಥವಾ ಪ್ರೀತಿಪಾತ್ರರನ್ನು ಕಳೆದುಕೊಳ್ಳಬಹುದು'' ಎನ್ನುವ ಅಂಶ ಈ ಪುಸ್ತಕದಲ್ಲಿದೆ.

  ರಾಜ್ ಕುಂದ್ರ ಸೆಕ್ಸ್ ರಾಕೆಟ್ ನ 'ಮಾಸ್ಟರ್ ಮೈಂಡ್'; ಪೂನಂ ಪಾಂಡೆರಾಜ್ ಕುಂದ್ರ ಸೆಕ್ಸ್ ರಾಕೆಟ್ ನ 'ಮಾಸ್ಟರ್ ಮೈಂಡ್'; ಪೂನಂ ಪಾಂಡೆ

  ಹಿಂದೆಯೂ ಸವಾಲು, ಮುಂದೆಯೂ ಸವಾಲು

  ಹಿಂದೆಯೂ ಸವಾಲು, ಮುಂದೆಯೂ ಸವಾಲು

  ''ನಾವು ಈ ಹಿಂದೆಯೂ ಸವಾಲುಗಳನ್ನು ಎದುರಿಸಿ ಉಳಿದುಕೊಂಡಿದ್ದೇನೆ ಮತ್ತು ಮುಂದೆಯೂ ಸವಾಲುಗಳನ್ನು ಎದುರಿಸಿ ಉಳಿದುಕೊಳ್ಳುತ್ತೇನೆ. ನಮ್ಮ ಜೀವನವನ್ನು ಬೇರೆಡೆಗೆ ಸೆಳೆಯುವ ಯಾವುದು ನಮಗೆ ಅಗತ್ಯವಿಲ್ಲ'' ಎಂದು ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ನಲ್ಲಿ ಉಲ್ಲೇಖವಾಗಿದೆ.

  ಶಿಲ್ಪಾ ಶೆಟ್ಟಿ ಕುರಿತು ಪೂನಂ ಪಾಂಡೆ

  ಶಿಲ್ಪಾ ಶೆಟ್ಟಿ ಕುರಿತು ಪೂನಂ ಪಾಂಡೆ

  ರಾಜ್ ಕುಂದ್ರಾ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಟ್ರೋಲ್‌ಗೆ ಗುರಿಯಾದರು. ಈ ವೇಳೆ ಶಿಲ್ಪಾರನ್ನು ಬೆಂಬಲಿಸಿದ ನೆಟ್ಟಿಗರು ಇದ್ದಾರೆ. ಇನ್ನು ಪೂನಂ ಪಾಂಡೆ ಸಹ ಶಿಲ್ಪಾ ಶೆಟ್ಟಿ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ''ಈ ಕ್ಷಣ ನನ್ನ ಹೃದಯ ಶಿಲ್ಪಾ ಶೆಟ್ಟಿ ಮತ್ತು ಅವರ ಮಕ್ಕಳ ಕಡೆ ಹೋಗುತ್ತೆ. ಅವರಿಗೆ ಏನಾಗಿರಬಹುದು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಈ ಅವಕಾಶವನ್ನು ನಾನು ಬಳಸಿಕೊಳ್ಳಲು ನಿರಾಕರಿಸುತ್ತೇನೆ" ಎಂದು ಹೇಳಿದ್ದರು.

  English summary
  Shilpa Shetty reaction after her husband Raj Kundra arrested in pornography case

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X