ದಾಳಿ ವೇಳೆ ರಾಜ್ ಕುಂದ್ರ ಜೊತೆ ಸಕತ್ ಜಗಳವಾಡಿದ್ರಂತೆ ಶಿಲ್ಪಾ ಶೆಟ್ಟಿ
ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಪತಿಯ ಬ್ಲೂ ಫಿಲ್ಮ್ ದಂಧೆ ಪ್ರಕರಣದಿಂದ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುವಂತಾಗಿದೆ. ಈ ಪ್ರಕರಣದಲ್ಲಿ ಮುಂಬೈ ಅಪರಾಧ ವಿಭಾಗದ ಪೊಲೀಸ್ ತಂಡ ನಟಿ ಶಿಲ್ಪಾ ಶೆಟ್ಟಿಯನ್ನು ಪ್ರಶ್ನೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದಾರಾ? ಪತಿಯ ವ್ಯವಹಾರದ ಬಗ್ಗೆ ಶಿಲ್ಪಾಗೂ ಮಾಹಿತಿ ಇತ್ತಾ ಎಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇತ್ತೀಚಿಗೆ ಮುಂಬೈ ಪೊಲೀಸರ ತಂಡ ರಾಜ್ ಕುಂದ್ರ ಜೊತೆ ನಿವಾಸದ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಮನೆಗೆ ಬಂದಿದ್ದ ರಾಜ್ ಕುಂದ್ರ ನೋಡುತ್ತಿದ್ದಂತೆ ಶಿಲ್ಪಾ ಶೆಟ್ಟಿ ಜಗಳವಾಡಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧನದ ಬಳಿಕ ರಾಜ್ ಕುಂದ್ರ ಮತ್ತು ಶಿಲ್ಪಾ ಶೆಟ್ಟಿ ಮುಖಾಮುಖಿಯಾಗಿದ್ದರು. ಈ ಸಮಯದಲ್ಲಿ ಪತಿಯನ್ನು ನೋಡುತ್ತಿದ್ದಂತೆ ಶಿಲ್ಪಾ ಶೆಟ್ಟಿ ಆಕ್ರೋಶಗೊಂಡಿದ್ದು, ಶಿಲ್ಪಾ ಶೆಟ್ಟಿಯನ್ನು ಶಾಂತಗೊಳಿಸಲು ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತಿಯ ಜೊತೆ ಜಗಳವಾಡುತ್ತಾ ಶಿಲ್ಪಾ ಶೆಟ್ಟಿ ಜೋರಾಗಿ ಅತ್ತಿದ್ದಾರಂತೆ. ಅಲ್ಲದೆ ಪತಿಯ ವ್ಯವಹಾರಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಪೊಲೀಸರು ಶಿಲ್ಪಾ ಶೆಟ್ಟಿಯನ್ನು ಪ್ರಶ್ನೆ ಮಾಡಿದ ಬಳಿಕ ಅಸಮಾಧಾನಗೊಂಡಿದ್ದರಂತೆ. ಬಳಿಕ ರಾಜ್ ಕುಂದ್ರ ಬಳಿ ವಾದಮಾಡಿ, ಕೂಗಾಡಿದರು ಎನ್ನುವ ಮಾಹಿತಿ ತಿಳಿದುಬಂದಿದೆ. "ಇಂಥ ಕೆಲಸವನ್ನು ಮಾಡುವ ಅವಶ್ಯಕತೆ ಏನಿತ್ತು, ಇದನ್ನೆಲ್ಲ ಯಾಕೆ ಮಾಡಿದ್ದು" ಎಂದು ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಣ್ಣೀರು ಹಾಕುತ್ತಲೇ ಶಿಲ್ಪಾ ಪತಿಯ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರಂತೆ. ರಾಜ್ ಕುಂದ್ರ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ, ಹಾಟ್ ಶಾಟ್ ಅಪ್ಲಿಕೇಶನ್ ಮೂಲಕ ಅಪ್ ಲೋಡ್ ಮಾಡುತ್ತಿದ್ದ ಆರೋಪದ ಮೇರೆಗೆ ಮುಂಬೈ ಪೊಲೀಸರು ಜುಲೈ 19ರಂದು ಬಂಧಿಸಿದ್ದರು. ಜುಲೈ 27ರ ವರೆಗೂ ಪೊಲೀಸ್ ಕಸ್ಟಡಿ ಅವಧಿ ಮುಂದಿವರೆದಿದ್ದು, ಇಂದು ರಾಜ್ ಕುಂದ್ರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತೆ.


Click it and Unblock the Notifications











