Shilpa Shetty-Raj kundra: "ನಾವಿಬ್ಬರೂ ದೂರಾಗುತ್ತಿದ್ದೇವೆ": ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ ಡಿವೋರ್ಸ್?

ಪೋರ್ನೋಗ್ರಫಿ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ ಇದೀಗ ಶಾಕ್ ಕೊಟ್ಟಿದ್ದಾರೆ. 'ಎಕ್ಸ್'(ಟ್ವಿಟ್ಟರ್) ಪ್ಲಾಟ್‌ಫಾರ್ಮ್‌ನಲ್ಲಿ ನಾನು, ಶಿಲ್ಪಾಶೆಟ್ಟಿ ದೂರಾಗಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ. ರಾಜಕುಂದ್ರಾ ಅಭಿನಯದ 'UT 69' ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಪೋಸ್ಟ್ ಸಂಚಲನ ಸೃಷ್ಟಿಸಿದೆ. ಈ ಪೋಸ್ಟ್‌ಗೆ ನೆಟ್ಟಿಗರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

2021, ಜುಲೈನಲ್ಲಿ ಪೋರ್ನೋಗ್ರಫಿ ಪ್ರಕರಣದಲ್ಲಿ ರಾಜ್‌ಕುಂದ್ರಾ ಬಂಧನದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅಂದಿನಿಂದ ಮಾಸ್ಕ್ ಹಾಕಿಕೊಂಡು ಮಾಧ್ಯಮಗಳ ಮುಂದೆ ಬರಲಾರಂಭಿಸಿದ್ದಾರೆ. ಆದರೆ, ರಾಜ್ ಕುಂದ್ರಾ ತಮ್ಮ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಬುಧವಾರ ಈ ಟ್ರೆಂಡ್‌ಗೆ ಅಂತ್ಯ ಹಾಡಿದ್ದಾರೆ. ಮಾಸ್ಕ್ ಧರಿಸದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

Shilpa Shetty husband Raj kundras cryptic twitter post sparks divorce rumours

ಇದೆಲ್ಲದರ ನಡುವೆ ರಾಜ್ ಕುಂದ್ರಾ ಜೀವನದ ವಿವಾದಾತ್ಮಕ ವಿಚಾರಗಳನ್ನು ಆಧರಿಸಿದ ಸಿನಿಮಾ'ಯುಟಿ 69' ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ರಾಜ್ ಜೈಲಿಗೆ ಹೋದಾಗಲೇ ಶಿಲ್ಪಾ ಡಿವೋರ್ಸ್ ಕೊಡುತ್ತಾರೆ ಎಂದು ಗುಸುಗುಸು ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಪತಿ ಮಾಡಿದ ತಪ್ಪನ್ನು ಮನ್ನಿಸಿ ಶಿಲ್ಪಾ ಮುನ್ನಡೆದಿದ್ದರು. ಆದರೆ ಈಗ ರಾಜ್ ಕುಂದ್ರಾ ಪೋಸ್ಟ್ ಭಾರೀ ಸದ್ದು ಮಾಡ್ತಿದೆ.

ಮಧ್ಯರಾತ್ರಿ 12. 57ರ ಸುಮಾರಿಗೆ ರಾಜ್ ಕುಂದ್ರಾ ಟ್ವೀಟ್ ಮಾಡಿದ್ದಾರೆ. "ನಾವಿಬ್ಬರು ದೂರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ದಯವಿಟ್ಟು ಕೊಂಚ ಸಮಯ ಕೊಡಿ" ಎಂದು ಬರೆದುಕೊಂಡಿದ್ದಾರೆ. ಕೆಲವರು ಕುಡಿದ ಮತ್ತಿನಲ್ಲಿ ಶಿಲ್ಪಾ ಶೆಟ್ಟಿ ಪತಿ ಈ ರೀತಿ ಟ್ವೀಟ್ ಮಾಡಿದ್ರಾ? ಎಂದು ಕೇಳುತ್ತಿದ್ದಾರೆ. ರಾಜ್ ಟ್ವೀಟ್ ಮಾಡಿದ್ರು ಶಿಲ್ಪಾ ಶೆಟ್ಟಿ ಮಾತ್ರ ಈ ಬಗ್ಗೆ ಮೌನ ವಹಿಸಿದ್ದಾರೆ.

ದೂರಾಗಿದ್ದೇವೆ ಅಂದರೆ ಏನು ಅರ್ಥ? ಇಬ್ಬರು ಡಿವೋರ್ಸ್ ಪಡೆದಿದ್ದೀರಾ? ಎಂದು ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ಕೇಳುತ್ತಿದ್ದಾರೆ. ಕೆಲವರು ಇದೆಲ್ಲಾ 'ಯುಟಿ 69' ಸಿನಿಮಾ ಪ್ರಚಾರದ ಗಿಮಿಕ್ ಇರಬಹುದು ಎನ್ನುತ್ತಿದ್ದಾರೆ. ಅಂದಹಾಗೆ ನಟಿ ಶಿಲ್ಪಾ ಶೆಟ್ಟಿ 2009ರಲ್ಲಿ ಉದ್ಯಮಿ ರಾಜ್ ಕುಂದ್ರಾ ಕೈ ಹಿಡಿದಿದ್ದರು. ವಿಯಾನ್ ಹಾಗೂ ಸಮಿಶಾ ಹೆಸರಿನ ಇಬ್ಬರು ಮಕ್ಕಳು ದಂಪತಿಗೆ ಇದ್ದಾರೆ.

'UT 69' ಚಿತ್ರದಲ್ಲಿ ತಮ್ಮದೇ ವಿವಾದಾತ್ಮಕ ಜೀವನ ಕಥೆ ಯಲ್ಲಿ ತಾವೇ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಇಷ್ಟು ದಿನ ಮಾಸ್ಕ್ ಧರಿಸಿ ಸುತ್ತಾಡುತ್ತಿದ್ದದ್ದು ಯಾಕೆ ಎಂದು ಹೇಲಿದ್ದರು. "ನಾನು ಯಾವುದೇ ತಪ್ಪು ಮಾಡಿಲ್ಲ. ಸಾರ್ವಜನಿಕರು, ಸ್ನೇಹಿತರು ನನ್ನನ್ನು ನೋಡುತ್ತಾರೆ ಎಂಬ ಕಾರಣಕ್ಕೆ ಮಾಸ್ಕ್‌ ಧರಿಸುತ್ತಿಲ್ಲ. ಬದಲಿಗೆ ಮೀಡಿಯಾದವರಿಂದ ನನಗೆ ಬಹಳ ನೋವಾಗಿದೆ. ಹಾಗಾಗಿ ನನ್ನ ಫೋಟೋ ಕ್ಲಿಕ್‌ ಮಾಡಬಾರದು, ನನ್ನ ವಿಡಿಯೋ ರೆಕಾರ್ಡ್‌ ಮಾಡಬಾರದು ಎನ್ನುವ ಕಾರಣಕ್ಕೆ ಮಾಸ್ಕ್‌ ಧರಿಸುತ್ತಿದ್ದೇನೆ" ಎಂದಿದ್ದರು.

ಶಿಲ್ಪಾ ಶೆಟ್ಟಿಗೂ ಮುನ್ನ ರಾಜ್‌ ಕುಂದ್ರಾ 2003ರಲ್ಲಿ ಕವಿತಾ ಎಂಬುವವರ ಕೈ ಹಿಡಿದಿದ್ದರು. ಬಳಿಕ ಆಕೆಗೆ 2006ರಲ್ಲಿ ಡಿವೋರ್ಸ್ ನೀಡಿದ್ದರು. ಇನ್ನು 2009ರಲ್ಲಿ ರಾಜ್- ಶಿಲ್ಪಾ ದಂಪತಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಜಸ್ಥಾನ್ ರಾಯಲ್ಸ್‌ ಕ್ರಿಕೆಟ್ ತಂಡವನ್ನು ಕೊಂಡು ಕೊಂಡಿದ್ದರು. ಆದರೆ, ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಜುಲೈ 2015ರಲ್ಲಿ ಕ್ರಿಕೆಟ್ ಸಂಬಂಧಿತ ಚಟುವಟಿಕೆಯಿಂದ ರಾಜ್‌ ಕುಂದ್ರಾಗೆ ಜೀವಾವಧಿ ನಿಷೇಧ ವಿಧಿಸಿತು. ಸದ್ಯ ವೈರಲ್ ಟ್ವೀಟ್ ಬಗ್ಗೆ ದಂಪತಿ ಪ್ರತಿಕ್ರಿಯಿಸಬೇಕಿದೆ.

More from Filmibeat

English summary
Shilpa Shetty heading for divorce? Raj Kundra cryptic post goes Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X