ಸೀರೆಯಲಿ ಶಿಲ್ಪಾ ಶೆಟ್ಟಿ ಸೌಂದರ್ಯ ಅನಾವರಣ
ಸೀರೆಗೂ ನೀರೆಗೂ ಬಿಡಿಸಲಾಗದ ನಂಟು. ಅದರಲ್ಲೂ ಬಳುಕುವ ಬಳ್ಳಿಯಂತಹ ನೀರೆಯರಿಗೆ ಸೀರೆ ದುಪ್ಪಟ್ಟು ಸೌಂದರ್ಯವನ್ನು ಪ್ರಸಾದಿಸುತ್ತದೆ. ಸಾಮಾನ್ಯವಾಗಿ ಮದುವೆ ಮಕ್ಕಳಾದ ಮೇಲೆ ಸಿನಿಮಾ ತಾರೆಗಳು ನಾಪತ್ತೆಯಾಗಿಬಿಡುತ್ತಾರೆ.
ಆದರೆ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ವಿಚಾರದಲ್ಲಿ ಈ ಮಾತು ಅಕ್ಷರಶಃ ಒಪ್ಪಲ್ಲ. ಮದುವೆಯಾದ ಬಳಿಕ ಅವರು ಇನ್ನಷ್ಟು ಬಿರಿದು ಹೂವಾಗಿ ಅರಳಿದ್ದಾರೆ. ವಯಸ್ಸು ನಲವತ್ತಕ್ಕೆ ಸಮೀಪಿಸುತ್ತಿದ್ದರೂ ನೋಡಲು ಇನ್ನೂ ಕಾಲೇಜು ಕನ್ಯೆಯಂತೆ ಕಂಗೊಳಿಸುತ್ತಿದ್ದಾರೆ.
ಇತ್ತೀಚೆಗೆ ಡಾನ್ಸ್ ರಿಯಾಲಿಟಿ ಶೋಗೆ ಸೀರೆಯಲ್ಲಿ ಆಗಮಿಸಿ ಎಲ್ಲರ ಗಮನ ತನ್ನತ್ತ ಸೆಳೆದರು. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ ಪ್ರೀತ್ಸೋದ್ ತಪ್ಪಾ ಚಿತ್ರದಲ್ಲಿ ತಮ್ಮ ಸೌಂದರ್ಯವನ್ನು ತೆರೆದಿಟ್ಟಿದ್ದ ಶಿಲ್ಪಾ ಶೆಟ್ಟಿ ಈಗ ಇನ್ನಷ್ಟು ಕಲರ್ ಫುಲ್ ಆಗಿ ಅನಾವರಣಗೊಳಿಸಿದ್ದಾರೆ. ಚಿತ್ರಗಳಲ್ಲಿ ನೋಡಿ ಸೌಂದರ್ಯದ ಅನಾವರಣ.

ಇನ್ನೂ ಎಳ್ಳಷ್ಟೂ ಕಡಿಮೆಯಾಗದ ಸೌಂದರ್ಯ
ಈಗ ಹೀರೋಯಿನ್ ಪಾತ್ರಗಳಿಂದ ದೂರ ಸರಿದಿರುವ ಶಿಲ್ಪಾ ಶೆಟ್ಟಿ ಅತಿಥಿ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೂ ತನ್ನ ಗ್ಲಾಮರ್, ಸೌಂದರ್ಯದ ಮೇಲಿನ ಬಿಗಿಹಿಡಿತ ಇನ್ನೂ ಎಳ್ಳಷ್ಟೂ ಕಡಿಮೆಯಾಗಿಲ್ಲ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಅದ್ಭುತ ವಾಲಿಬಾಲ್ ಪಡು
ಶಾಲಾ ದಿನಗಳಿಂದಲೇ ಭರತನಾಟ್ಯ ಕಲಿತ ಶಿಲ್ಪಾ ಶೆಟ್ಟಿ ವಾಲಿಬಾಲ್ ಪಟು ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ತಮ್ಮ ಹದಿನಾರನೇ ಹರೆಯಕ್ಕೇ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟ ಶಿಲ್ಪಾ ಬಳಿಕ 'ಬಾಜಿಗರ್' (1993) ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು.

ಸುಖೀ ದಾಂಪತ್ಯದ ಫಲವಾಗಿ ಒಂದು ಗಂಡುಮಗು
ಉದ್ಯಮಿ ರಾಜ್ ಕುಂದ್ರಾ ಅವರು ಶಿಲ್ಪಾರ ಸೌಂದರ್ಯಕ್ಕೆ ಮನಸೋತರು. ಬಳಿಕ ಅವರಿಬ್ಬರೂ 2009ರಲ್ಲಿ ಮದುವೆಯಾಗಿ ಸುಖಿ ದಾಂಪತ್ಯಜೀವನ ನಡೆಸುತ್ತಿದ್ದಾರೆ. ಇವರಿಬ್ಬರ ದಾಂಪತ್ಯದ ಫಲವಾಗಿ ಒಂದು ಗಂಡುಮಗು ಇದೆ.

ಸದ್ಯಕ್ಕೆ ಕಿರುತೆರೆಯಲ್ಲಿ ಶಿಲ್ಪಾ ಶೆಟ್ಟಿ ಬಿಜಿ
ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದಿರುವ ಶಿಲ್ಪಾ ಶೆಟ್ಟಿ ಅವರು ಕಿರುತೆರೆ ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದಾರೆ. ಆಗಾಗ ಈ ರೀತಿ ಕಿರುತೆರೆ ಕಾರ್ಯಕ್ರಮಗಳಲ್ಲಿ ಮಿಂಚುತ್ತಿದ್ದಾರೆ.

ರಾಜಕೀಯಕ್ಕೆ ಅಡಿಯಿಡಲ್ಲ ಎಂದ ಶಿಲ್ಪಾ
ಇತ್ತೀಚೆಗೆ ಮಾತನಾಡುತ್ತಾ ತಾವು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಅಡಿಯಿಡಲ್ಲ ಎಂದಿದ್ದಾರೆ. ಈ ಬಗ್ಗೆ ಯೋಚಿಸಿಯೂ ಇಲ್ಲ. ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಅಡಿಯಿಡಲ್ಲ ಎಂದಿದ್ದಾರೆ. ಮುಂಬೈನಲ್ಲಿ ಸ್ಪಾ ಒಂದನ್ನು ಉದ್ಘಾಟಿಸಿದ ಬಳಿಕ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮೌನ ಮುರಿದರು.


Click it and Unblock the Notifications











