ಡೈರೆಕ್ಟರ್ ಮಾತು ಕೇಳಿ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ: ಫೈಟ್ ಶೂಟಿಂಗ್ ವಿಡಿಯೋ ವೈರಲ್

ಬಾಲಿವುಡ್ ಚೆಲುವೆ ಶಿಲ್ಪಾ ಶೆಟ್ಟಿ ಶೂಟಿಂಗ್‌ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್‌ ಸೀರಿಸ್‌ನಲ್ಲಿ ಕರಾವಳಿ ಚೆಲುವೆ ನಟಿಸುತ್ತಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ವೇಳೆ ಕಾಲು ಮುರಿದುಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಫೋಟೊದಲ್ಲಿ ಶಿಲ್ಪಾ ಶೆಟ್ಟಿ ಎಡಗಾಲಿಗೆ ದೊಡ್ಡ ಕಟ್ಟು ಹಾಕಿರುವುದನ್ನು ನೋಡಬಹುದು. ಸಿನಿಮಾ ಚಿತ್ರೀಕರಣದ ವೇಳೆ ಎಷ್ಟೇ ಮುಂಜಾಗ್ರತೆ ಕ್ರಮ ಕೈಗೊಂಡರು ಅವಘಡಗಳು ಸಂಭವಿಸುತ್ತದೆ. ಇಂತಹ ಅವಘಡಗಳಲ್ಲಿ ಕಲಾವಿದರಿಗೆ ಗಂಭೀರವಾಗಿ ಪೆಟ್ಟು ಆಗಿರುವುದು, ಪ್ರಾಣ ಹಾನಿ ಆಗಿರುವುದನ್ನು ನೋಡಿದ್ದೇವೆ. ರೋಹಿತ್ ಶೆಟ್ಟಿ ಪ್ರಾಜೆಕ್ಟ್ ಅಂದ್ಮೇಲೆ ಭರ್ಜರಿ ಆಕ್ಷನ್ ಇರಲೇಬೇಕು.

ರೋಹಿತ್ ಶೆಟ್ಟಿ ನಿರ್ಮಿಸಿ, ನಿರ್ದೇಶನ ಮಾಡುತ್ತಿರುವ ವೆಬ್‌ ಸೀರಿಸ್ 'ಇಂಡಿಯನ್ ಪೊಲೀಸ್ ಫೋರ್ಸ್'. ಈ ಆಕ್ಷನ್ ಥ್ರಿಲ್ಲರ್ ಪ್ರಾಜೆಕ್ಟ್‌ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ವಿವೇಕ್ ಓಬಿರಾಬ್ ಜೊತೆ ಶಿಲ್ಪಾ ಶೆಟ್ಟಿ ಖಡಕ್ ರೋಲ್‌ನಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ಅಮೆಜಾನ್ ಪ್ರೈಮ್‌ನಲ್ಲಿ ಈ ಸೀರಿಸ್‌ ಸ್ಟ್ರೀಮಿಂಗ್ ಆಗಲಿದೆ. ಏಪ್ರಿಲ್‌ನಿಂದ ಮುಂಬೈ ಮತ್ತು ಗೋವಾದಲ್ಲಿ ಚಿತ್ರೀಕರಣ ನಡೀತಿದೆ.

ಇನ್‌ಸ್ಟಾಗ್ರಾಂನಲ್ಲಿ ಶಿಲ್ಪಾ ಶೆಟ್ಟಿ ಪೋಸ್ಟ್

ಕಾಲಿಗೆ ಪೆಟ್ಟಾದ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೊ ಸಮೇತ ನಟಿ ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ. 'ನಿರ್ದೇಶಕರು ರೋಲ್​, ಕ್ಯಾಮೆರಾ, ಆ್ಯಕ್ಷನ್ ಎಂದರು. ನನ್ನ ಕಾಲು ಮುರಿಯಿತು. ಅವರು ಹೇಳಿದ್ದನ್ನು ಅಕ್ಷರಶಃ ಪಾಲಿಸಿದೆ(ನಗು). ಇನ್ನು ಆರು ವಾರ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಆದಷ್ಟು ಬೇಗ ಮತ್ತಷ್ಟು ಬಲಶಾಲಿಯಾಗಿ ಶೂಟಿಂಗ್‌ಗೆ ಮರಳುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದ ಶಿಲ್ಪಾ

ನಿನ್ನೆ(ಆಗಸ್ಟ್ 9)ಯಷ್ಟೇ ನಟಿ ಶಿಲ್ಪಾ ಶೆಟ್ಟಿ 'ಇಂಡಿಯನ್ ಪೊಲೀಸ್ ಫೋರ್ಸ್' ಆಕ್ಷನ್ ಸೀನ್ ಮೇಕಿಂಗ್ ವಿಡಿಯೋ ಶೇರ್ ಮಾಡಿದ್ದರು. ಸಿದ್ದಾರ್ಥ್ ಮಲ್ಹೋತ್ರಾ ಜೊತೆಗೆ ಜಬರ್ದಸ್ತ್ ಫೈಟ್‌ ಸೀನ್‌ನಲ್ಲಿ ಅಬ್ಬರಿಸಿದ್ದರು. ಸ್ವತಃ ರೋಹಿತ್ ಶೆಟ್ಟಿ ಕ್ಯಾಮರಾ ಹಿಡಿದು ಅದನ್ನು ಸೆರೆ ಹಿಡಿದಿದ್ದರು. ಅದೇ ದೃಶ್ಯದ ಮುಂದುವರೆದ ಭಾಗ ಚಿತ್ರೀಕರಣದ ವೇಳೆ ಮಂಗಳೂರು ಚೆಲುವೆ ಕಾಲು ಮುರಿದುಕೊಂಡಿದ್ದಾರೆ.

 ಕನ್ನಡದಲ್ಲೂ ಶಿಲ್ಪಾ ಅಭಿನಯ

ಕನ್ನಡದಲ್ಲೂ ಶಿಲ್ಪಾ ಅಭಿನಯ

ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಜೋಡಿಯಾಗಿ 'ಪ್ರೀತ್ಸೋದ್ ತಪ್ಪಾ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಚೆಲುವೆ ಮುಂದೆ 'ಒಂದಾಗೋಣ ಬಾ', 'ಆಟೋ ಶಂಕರ್' ಸಿನಿಮಾಗಳಲ್ಲಿ ನಟಿಸಿದರು. ತಮಿಳು, ತೆಲುಗು ಸಿನಿಮಾಗಳಲ್ಲೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು.

 ಸೋಶಿಯಲ್ ಮೀಡಿಯಾದಲ್ಲಿ ಮಿಂಚಿಂಗ್

ಸೋಶಿಯಲ್ ಮೀಡಿಯಾದಲ್ಲಿ ಮಿಂಚಿಂಗ್

ನಟಿ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಫಿಟ್‌ನೆಸ್ ಫ್ರೀಕ್ ಆಗಿರುವ ಶಿಲ್ಪಾ ವರ್ಕೌಟ್‌, ಯೋಗ ಮಾಡುವ ವಿಡಿಯೋಗಳನ್ನು ಇನ್‌ಸ್ಟ್ರಾಗ್ರಾಂನಲ್ಲಿ ಶೇರ್‌ ಮಾಡುತ್ತಿರುತ್ತಾರೆ. ಇನ್ನು ವಕೇಶನ್, ಶೂಟಿಂಗ್ ಎಲ್ಲವನ್ನು ಅಪ್‌ಡೇಟ್ ಮಾಡುತ್ತಿರುತ್ತಾರೆ. ಸದ್ಯ ಯಾವುದೇ ಸಿನಿಮಾ ಕರಾವಳಿ ಚೆಲುವೆ ಕೈಯಲ್ಲಿಲ್ಲ. ಆದಷ್ಟು ಬೇಗ ನೆಚ್ಚಿನ ನಟಿ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

More from Filmibeat

English summary
Shilpa Shetty Injured Her Leg While Shooting For Indian Police Force Web Series. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X