For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಂಕಷ್ಟ; ಶಿಲ್ಪಾ ಶೆಟ್ಟಿ ಮತ್ತು ತಾಯಿ ವಿರುದ್ಧ ವಂಚನೆ ದೂರು ದಾಖಲು

  |

  ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಪತಿ ರಾಜ್ ಕುಂದ್ರ ಜೈಲು ಸೇರಿದ್ದು, ಪತಿಯ ಬಿಡುಗಡೆಗೆ ಕಾಯುತ್ತಿರುವ ಶಿಲ್ಪಾ ಶೆಟ್ಟಿಗೂ ಈಗ ಬಂಧನ ಭೀತಿ ಎದುರಾಗಿದೆ. ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

  ವೆಲ್ ಫೇರ್ ಸೆಂಟರ್ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣದಡಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ಲಕ್ನೋದ ಹಜರತ್ ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಈ ಬಗ್ಗೆ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿಯನ್ನು ವಿಚಾರಣೆ ನಡೆಸಲು ಲಕ್ನೋ ಪೊಲೀಸರು ಮುಂಬೈಗೆ ತೆರಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ಶಿಲ್ಪಾ ಶೆಟ್ಟಿ ತಾಯಿಯಿಂದ ದೂರು: 1.6 ಕೋಟಿ ವಂಚನೆ ಆರೋಪಶಿಲ್ಪಾ ಶೆಟ್ಟಿ ತಾಯಿಯಿಂದ ದೂರು: 1.6 ಕೋಟಿ ವಂಚನೆ ಆರೋಪ

  ಪೊಲೀಸ್ ಅಧಿಕಾರಿಗಳ ಪ್ರಕಾರ, "ಶಿಲ್ಪಾ ಶೆಟ್ಟಿ ಲೋಸಿಸ್ ವೆಲ್ನೆಸ್ ಸೆಂಟರ್ ಹೆಸರಿನಲ್ಲಿ ಫಿಟ್ನೆಸ್ ಚೈನ್ ನಡೆಸುತ್ತಿದ್ದಾರೆ. ಈ ಕಂಪನಿಯ ಅಧ್ಯಕ್ಷೆ ಶಿಲ್ಪಾ ಶೆಟ್ಟಿ ಆಗಿದ್ದಾರೆ. ತಾಯಿ ಸುನಂದಾ ಶೆಟ್ಟಿ ಈ ಕಂಪನೆಯ ನಿರ್ದೇಶಕರಾಗಿದ್ದಾರೆ. ಈ ಕಂಪನಿಯನ್ನು ತೆರೆಯುವ ಹೆಸರಿನಲ್ಲಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಅವರು ಕೋಟ್ಯಾಂತರ ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಓಮ್ಯಾಕ್ಸ್ ಹೈಟ್ ನಿವಾಸಿ ಜ್ಯೋತ್ಸ್ನಾ ಚೌಹಾಣ್ ಮತ್ತು ರೋಹಿತ್ ವೀರ್ ಸಿಂಗ್ ದೂರು ದಾಖಲಿಸಿದ್ದಾರೆ. ಮುಂದೆ ಓದಿ..

  ಶಿಲ್ಪಾ ಶೆಟ್ಟಿ ಮತ್ತು ತಾಯಿಯ ವಿಚಾರಣೆ

  ಶಿಲ್ಪಾ ಶೆಟ್ಟಿ ಮತ್ತು ತಾಯಿಯ ವಿಚಾರಣೆ

  ಇಂದು (ಆಗಸ್ಟ್ 09) ಶಿಲ್ಪಾ ಶೆಟ್ಟಿ ಮತ್ತು ಆಕೆಯ ತಾಯಿ ಸುನಂದಾ ಅವರನ್ನು ವಿಚಾರಣೆಗೆ ಒಳಪಡಿಸಲು ತನಿಖಾಧಿಕಾರಿ ಮುಂಬೈಗೆ ತೆರಳಲಿದ್ದಾರೆ ಎಂದು ಡಿಸಿಪಿ ಸಂಜೀವ್ ಸುಮನ್ ತಿಳಿಸಿದ್ದಾರೆ. ಈ ವಿಷಯ ಉನ್ನತ ಮಟ್ಟದ್ದಾಗಿದೆ ಮತ್ತು ಆದ್ದರಿಂದ ಪೊಲೀಸರು ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

  ಇತ್ತೀಚಿಗಷ್ಟೆ ವಂಚನೆ ದೂರು ದಾಖಲಿಸಿದ್ದ ತಾಯಿ ಸುನಂದಾ

  ಇತ್ತೀಚಿಗಷ್ಟೆ ವಂಚನೆ ದೂರು ದಾಖಲಿಸಿದ್ದ ತಾಯಿ ಸುನಂದಾ

  ಇತ್ತೀಚಿಗಷ್ಟೆ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ 1.6 ಕೋಟಿ ಮೌಲ್ಯದ ಜಮೀನು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಸುಧಾಕರ್ ಘರೆ ಎಂಬ ವ್ಯಕ್ತಿ ನಕಲಿ ಪತ್ರಗಳನ್ನು ಸೃಷ್ಟಿಸಿ ತನಗೆ ಜಮೀನು ಮಾರಾಟ ಮಾಡಿ 1.6 ಕೋಟಿ ವಂಚಿಸಿದ್ದಾನೆ ಎಂದು ಸುನಂದಾ ಶೆಟ್ಟಿ ಆರೋಪಿಸಿ ದೂರು ನೀಡಿದ್ದರು. ಇದೀಗ ಸುನಂದಾ ಶೆಟ್ಟಿ ಮತ್ತು ಮಗಳು ಶಿಲ್ಪಾ ಶೆಟ್ಟಿ ವಿರುದ್ಧವೇ ದೂರು ದಾಖಲಿಸಿದ್ದಾರೆ.

  ಜುಲೈ 19ರಂದು ರಾಜ್ ಕುಂದ್ರ ಬಂಧನ

  ಜುಲೈ 19ರಂದು ರಾಜ್ ಕುಂದ್ರ ಬಂಧನ

  ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಜುಲೈ 19 ರಂದು ಅರೆಸ್ಟ್ ಮಾಡಲಾಗಿದೆ. ಜುಲೈ 27ರವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜ್ ಕುಂದ್ರಾರನ್ನು ಬಳಿಕ 14 ದಿನಗಳವರೆಗೂ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಚೋಪ್ರಾ, ಗೆಹನಾ ವಸಿಷ್ಠ್ ಸೇರಿದಂತೆ ಮತ್ತೆ ಕೆಲವು ನಟಿಯ ಹೆಸರು ಕೇಳಿಬರುತ್ತಿದೆ.

  ಶೆರ್ಲಿನ್ ಚೋಪ್ರಾ ವಿಚಾರಣೆ

  ಶೆರ್ಲಿನ್ ಚೋಪ್ರಾ ವಿಚಾರಣೆ

  ಇತ್ತೀಚಿಗಷ್ಟೆ ಮುಂಬೈ ಅಪರಾಧ ವಿಭಾಗದ ಪೊಲೀಸರು ನಟಿ ಶೆರ್ಲಿನ್ ಚೋಪ್ರಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಶೆರ್ಲಿನ್ ಗೆ ಪೊಲೀಸರಿಂದ ಅನೇಕ ಪ್ರಶ್ನೆಗಳು ಎದುರಾಗಿವೆ. ವಿಚಾರಣೆ ವೇಳೆ ರಾಜ್ ಕುಂದ್ರ ಜೊತೆಗಿನ ಸಂಬಂಧ, ವಿಡಿಯೋಗಳ ನಿರ್ಮಾಣ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಮುಂಬೈ ಪೊಲೀಸರು ಕೇಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ರಾಜ್ ಕುಂದ್ರಗೆ ಜಾಮೀನು ನಿರಾಕರಣೆ

  ರಾಜ್ ಕುಂದ್ರಗೆ ಜಾಮೀನು ನಿರಾಕರಣೆ

  ಇನ್ನು ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ ರಾಜ್ ಕುಂದ್ರ ಮತ್ತು ಸಹಚರ ರಿಯಾನ್ ಥೋರ್ಪೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ರಾಜ್ ಕುಂದ್ರ ಮತ್ತು ರಿಯಾನ್ ಥೋರ್ಪೆ ತಕ್ಷಣ ಬಿಡುಗಡೆ ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಜಾಮೀನನ್ನು ನಿರಾಕರಿಸಿದೆ.

  ಕುಂದ್ರ ಕಚೇರಿಯಲ್ಲಿ 68ಕ್ಕೂ ಅಧಿಕ ಅಶ್ಲೀಲ ವಿಡಿಯೋ ಪತ್ತೆ

  ಕುಂದ್ರ ಕಚೇರಿಯಲ್ಲಿ 68ಕ್ಕೂ ಅಧಿಕ ಅಶ್ಲೀಲ ವಿಡಿಯೋ ಪತ್ತೆ

  ರಾಜ್ ಕುಂದ್ರ ಬಂಧನದ ಬಳಿಕ ಕಚೇರಿ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ 68ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಸಿಕ್ಕಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. "ರಾಜ್ ಕುಂದ್ರಾ ಹಾಟ್ ಶಾಟ್ಸ್ ಆಪ್‌ನ ನಿರ್ವಾಹಕರಾಗಿದ್ದಾರೆ. ಶೋಧದ ಸಮಯದಲ್ಲಿ ಕುಂದ್ರಾ ಕಚೇರಿಯಿಂದ ಲ್ಯಾಪ್‌ಟ್ಯಾಪ್ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 68 ಅಶ್ಲೀಲ ವೀಡಿಯೊಗಳು, ಲೈಂಗಿಕ ವಿಷಯದ ಸ್ಕ್ರಿಪ್ಟ್‌ಗಳು, ಹಾಟ್‌ಶಾಟ್ಸ್ ನ ಹಣಕಾಸು ಪ್ರೊಜೆಕ್ಷನ್, ಮಾರ್ಕೆಟಿಂಗ್ ಕೆಲಸಗಳ ಕಾಪಿ ಸಿಕ್ಕಿವೆ'' ಎಂದು ಪೊಲೀಸರು ತಿಳಿಸಿದ್ದಾರೆ.

  English summary
  Actress Shilpa Shetty mother Sunanda Shetty named in an alleged case of fraud in Lucknow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X