twitter
    For Quick Alerts
    ALLOW NOTIFICATIONS  
    For Daily Alerts

    ಮಾಧ್ಯಮಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಟಿ ಶಿಲ್ಪಾ ಶೆಟ್ಟಿ

    |

    ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜ್ ಕುಂದ್ರ ಪ್ರಕರಣದ ಸಂಬಂಧ ತನ್ನ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ತಡೆಕೋರಿ ಮಾಧ್ಯಮ ಸಂಸ್ಥೆ, ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಸೈಟ್ ಗಳ ವಿರುದ್ಧ ಶಿಲ್ಪಾ ಶೆಟ್ಟಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಮಾನಹನಿಕರ ಸುದ್ದಿ ಪ್ರಕಟ ಮಾಡಿರುವ ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು ಬೇಷರತ್ ಕ್ಷಮೆ ಕೇಳಬೇಕು, ಎಲ್ಲಾ ಮಾನಹಾನಿಕರ ವಿಷಯಗಳನ್ನು ಡಿಲೀಟ್ ಮಾಡಬೇಕು ಮತ್ತು 25 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

    ಇದರಲ್ಲಿ ಫೇಸ್ ಬುಕ್, ಯೂಟ್ಯೂಬ್ ಗಳಿಗೂ ಸೇರಿದ್ದು, ಇಂಥ ವಿಷಯ ಪ್ರಕಟಿಸಿದ ಫೇಸ್ ಬುಕ್ ಯೂಟ್ಯೂಬ್ ಗಳು ವಿಷಯವನ್ನು ಡಿಲೀಟ್ ಮಾಡಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    Shilpa Shetty movies to High Court against Defamatory content published in media

    ತನ್ನ ಜೀವನ ಮತ್ತು ಪತಿ ರಾಜ್ ಕುಂದ್ರ ಸಂಬಂಧದ ಬಗ್ಗೆ ತಪ್ಪಾದ, ಅವಹೇಳನಕಾರಿ ವಿಷಯ ಪ್ರಕಟ ಮಾಡಲಾಗಿದೆ. ಮಾಧ್ಯಮಗಳು ತನ್ನ ಗೌಪ್ಯತೆ ಮೇಲೆ ದಾಳಿ ಮಾಡುತ್ತಿವೆ ಮತ್ತು ವೈಯಕ್ತಿಕ ಜೀವನದ ಮೇಲೆ ಹಸ್ತಕ್ಷೇಪ ಮಾಡುತ್ತಿವೆ ಎಂದು ಶಿಲ್ಪಾ ಶೆಟ್ಟಿ ಆರೋಪಿಸಿದ್ದಾರೆ. ಶಿಲ್ಪಾ ಶೆಟ್ಟಿ ಅರ್ಜಿ ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

    ಅಶ್ಲೀಲ ವಿಡಿಯೋಗಳನ್ನು ಚಿತ್ರಿಸಿ ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಪ್ರಕಟ ಮಾಡುತ್ತಿದ್ದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಜುಲೈ 19ರಂದು ಬಂಧಿಸಿದರು. ಜುಲೈ 27ರ ವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ಕುಂದ್ರ ಇದೀಗ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.

    English summary
    Bollywood Actress Shilpa Shetty movies to high court against Defamatory content published in media.
    Friday, July 30, 2021, 7:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X