For Quick Alerts
  ALLOW NOTIFICATIONS  
  For Daily Alerts

  ಫೈವ್ ಸ್ಟಾರ್ ಹೋಟೆಲ್ ರೂಮ್‌ ಇದ್ದಂಗಿದೆ ಶಿಲ್ಪ ಶೆಟ್ಟಿಯ ವ್ಯಾನಿಟಿ ವ್ಯಾನ್: ಒಳಗಡೆ ಏನೇನಿದೆ?

  |

  ಸೆಲೆಬ್ರೆಟಿಗಳು ಅಂದ್ಮೇಲೆ ಐಶಾರಾಮಿ ಜೀವನ ನಡೆಸೋದು ಕಾಮನ್. ದುಬಾರಿ ಕಾರು, ಬಂಗಲೆ ಎಲ್ಲವೂ ಬೇಕೇ ಬೇಕು. ತಮ್ಮ ಸ್ಟೆಟಸ್‌ಗೆ ತಕ್ಕಂತ ದುಬಾರಿ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ. ಅದರಲ್ಲೂ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದ ದಿನದಂತಹ ವಿಶೇಷ ದಿನದಂದು ಮನೆಗೆ ಹೊಸ ಅತಿಥಿ ಬರೋದು ಕಾಮನ್

  ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕೂಡ ತಮ್ಮ ಹುಟ್ಟುಹಬ್ಬದಂದು ವಿಶೇಷ ಅತಿಥಿಯನ್ನು ಮನೆಗೆ ತೆಗೆದುಕೊಂಡು ಬಂದಿದ್ದರು. ಅದುವೇ ವ್ಯಾನಿಟಿ ವ್ಯಾನ್. ಸಹಜವಾಗಿ ಬಾಲಿವುಡ್‌ ಸೂಪರ್‌ಸ್ಟಾರ್‌ ಬಳಿ ಸ್ವಂತ ವ್ಯಾನಿಟಿ ವ್ಯಾನ್ ಇದೆ. ಆ ಸಾಲಿಗೆ ಶಿಲ್ಪ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ.

  ಆಸ್ಕರ್ ವಿಜೇತ ನಟ ಕೆವಿನ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಆಸ್ಕರ್ ವಿಜೇತ ನಟ ಕೆವಿನ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

  ಈಗ ಶಿಲ್ಪ ಶೆಟ್ಟಿ ವ್ಯಾನಿಟಿ ವ್ಯಾನ್‌ನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದೆ. ಯಾಕಂದರೆ, ಈ ಐಶಾರಾಮಿ ವ್ಯಾನಿಟಿ ವ್ಯಾನ್ ಯಾವುದೇ ಫೈವ್ ಸ್ಟಾರ್ ಹೋಟೆಲ್‌ ರೂಮ್‌ಗೂ ಕಮ್ಮಿಯಿಲ್ಲ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಈ ವ್ಯಾನಿ ವ್ಯಾನ್‌ನಲ್ಲಿ ಏನಿದೆ?

  ರೆಡ್ ಕಾರ್ಪೆಟ್ ಮೇಲೆ ಈ ಹಿಂದೆ ಸೀರೆ ಧರಿಸಿ ಹೆಜ್ಜೆ ಹಾಕಿದ್ದ ಬಾಲಿವುಡ್ ನಟಿಯರು ಇವರೇ ನೋಡಿರೆಡ್ ಕಾರ್ಪೆಟ್ ಮೇಲೆ ಈ ಹಿಂದೆ ಸೀರೆ ಧರಿಸಿ ಹೆಜ್ಜೆ ಹಾಕಿದ್ದ ಬಾಲಿವುಡ್ ನಟಿಯರು ಇವರೇ ನೋಡಿ

  ಶಿಲ್ಪ ಶೆಟ್ಟಿ ಬರ್ತ್‌ಡೇಗೆ ದುಬಾರಿ ವ್ಯಾನ್

  ಶಿಲ್ಪ ಶೆಟ್ಟಿ ಬರ್ತ್‌ಡೇಗೆ ದುಬಾರಿ ವ್ಯಾನ್

  ಕಳೆದ ತಿಂಗಳು ( ಜೂನ್ 8) ಶಿಲ್ಪ ಶೆಟ್ಟಿ ತನ್ನ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವಿಶೇಷ ದಿನದಂದು ಕಪ್ಪು ಬಣ್ಣದ ಐಶಾರಾಮಿ ವ್ಯಾನಿಟಿ ವ್ಯಾನ್ ಅನ್ನು ಖರೀದಿ ಮಾಡಿದ್ದರು. ಇದೇ ವ್ಯಾನಿಟಿ ವ್ಯಾನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವ್ಯಾನ್‌ನಲ್ಲಿ ಶಿಲ್ಪ ಶೆಟ್ಟಿ 'SSK' ಅಂತ ಬರೆದುಕೊಂಡಿದ್ದಾರೆ. ಈ ವ್ಯಾನಿನ ಒಳಗೆ ಇರುವ ಸವಲತ್ತುಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಯಾವ ಫೈವ್‌ ಸ್ಟಾರ್‌ ರೂಮ್‌ಗೂ ಕಮ್ಮಿಯಿಲ್ಲ ಎಂದಿದ್ದಾರೆ.

  ವ್ಯಾನ್‌ನಲ್ಲಿ ಫೈವ್‌ಸ್ಟಾರ್ ಫೆಸಿಲಿಟಿ

  ವ್ಯಾನ್‌ನಲ್ಲಿ ಫೈವ್‌ಸ್ಟಾರ್ ಫೆಸಿಲಿಟಿ

  ಶಿಲ್ಲ ಶೆಟ್ಟಿ ಖರೀದಿ ಮಾಡಿರುವ ವ್ಯಾನಿಟಿ ವ್ಯಾನ್ ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣ ಒಂದು ವಿಡಿಯೋ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಈ ವಿಡಿಯೋ ಶಿಲ್ಪ ಶೆಟ್ಟಿ ವ್ಯಾನಿಟಿ ವ್ಯಾನ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ತೋರಿಸಿದೆ. ಅಡುಗು ಮನೆ, ಹೇರ್ ವಾಶ್ ಸ್ಟೇಷನ್, ಮೀಟಿಂಗ್ ರೂಮ್, ಬೆಡ್ ರೂಮ್, ಪ್ರೈವೇಟ್ ಚೇಂಬರ್, ಮಿನಿವಾಶ್ ರೂಮ್ ಸೇರಿದಂತೆ ಹಲವು ಸವಲತ್ತುಗಳು ಇದರಲ್ಲಿವೆ.

  ವ್ಯಾನ್‌ ಟಾಪ್‌ ಮೇಲೆ ಯೋಗ

  ವ್ಯಾನ್‌ ಟಾಪ್‌ ಮೇಲೆ ಯೋಗ

  ಶಿಲ್ಲ ಶೆಟ್ಟಿ ಅಂದರೆ, ಮೊದಲ ನೆನೆಪಾಗುವುದು ಫಿಟ್ನೆಸ್ ಹಾಗೂ ಯೋಗ. ಇವೆರಡೂ ಶಿಲ್ಪ ಶೆಟ್ಟಿ ಹೆಸರಿನ ಜೊತೆ ಸೇರಿಕೊಂಡಿರುತ್ತೆ. ಅದಕ್ಕಾಗಿ ಈ ವ್ಯಾನಿಟಿ ವ್ಯಾನ್ ಮೇಲೆ ಯೋಗಗಾಗಿ ಪ್ರತ್ಯೇಕವಾಗಿ ಡಿಸೈನ್ ಮಾಡಲಾಗಿದೆ. " ಶಿಲ್ಪ ಶೆಟ್ಟಿಗೆ ಫಿಟ್ನೆಸ್ ಅನ್ನುವುದು ತುಂಬಾನೇ ಮುಖ್ಯ. ಈ ಕಾರಣಕ್ಕೆ ಅವರು ಹೋದಲ್ಲೆಲ್ಲಾ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಯೋಗವನ್ನು ಮಾಡಬಹುದು" ಎಂದು ಶಿಲ್ಪ ಶೆಟ್ಟಿ ಟೀಮ್ ಮಾಧ್ಯಮಗಳಿಗೆ ತಿಳಿಸಿದೆ.

  ಒಟಿಟಿ, ಸಿನಿಮಾದಲ್ಲಿ ಬ್ಯುಸಿ

  ಶಿಲ್ಪ ಶೆಟ್ಟಿ ಸದ್ಯ ಸಿನಿಮಾ ಹಾಗೂ ಒಟಿಟಿಯಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮನ್ಯು ಹಾಗೂ ಶೆರ್ಲಿ ಸೆಟಿಯಾ ಜೊತೆ 'ನಿಕಮ್ಮಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಇತ್ತೀಚೆಗೆ ರೋಹಿತ್ ಶೆಟ್ಟಿಯ ಇಂಡಿಯನ್ ಪೊಲೀಸ್ ಫೋರ್ಟ್ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Shilpa Shetty New Luxurious Vanity Van Is Like Five-Star Hotel Room With Yoga Space, Know More.
  Sunday, July 17, 2022, 16:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X