ದೊಡ್ಡ ದೊಡ್ಡ ಶ್ರೀಮಂತರೆಲ್ಲ ನನಗೋಸ್ಕರ 'ಕ್ಯೂ' ನಿಂತಿದ್ದರು ; 'ಹಣ'ಕ್ಕಾಗಿ ರಾಜ್ ಕುಂದ್ರಾನ ಮದುವೆಯಾದ್ರಾ ಶಿಲ್ಪಾ ಶೆಟ್ಟಿ..?
ಸಾಮಾನ್ಯಕ್ಕೆ ಚಿತ್ರರಂಗದಲ್ಲಿ ಹಣ, ಹೆಸರು, ಅಂತಸ್ತು ಗಳಿಸಿದರೂ ಕೂಡ ನಾಯಕಿಯರು ದೊಡ್ಡ ದೊಡ್ಡ ಶ್ರೀಮಂತ ಕುಳಗಳನ್ನೇ ಹುಡುಕಿ ಮದುವೆಯಾಗ್ತಾರೆ ಅನ್ನುವ ಮಾತು ಇದೆ. ಇದು ನಿಜಾನಾ.. ಸುಳ್ಳಾ.. ಗೊತ್ತಿಲ್ಲ. ಆದರೆ ಮಂಗ್ಳೂರ್ ಮೀನು ಶಿಲ್ಪಾ ಶೆಟ್ಟಿ, ನಾನು ಆ ಕೆಟಗರಿಗೆ ಸೇರುವ ಹೆಣ್ಣು ಅಲ್ಲವೇ ಅಲ್ಲ ಎಂದು ಎದೆ ತಟ್ಟಿ ಹೇಳಿದ್ದಾರೆ. ರಾಜ್ ಕುಂದ್ರಾ ಕೈಯನ್ನ ಹಿಡಿದಿದ್ದು ದುಡ್ಡಿಗಾಗಿ ಅಲ್ಲ ಅಂದಿದ್ದಾರೆ
ಹೌದು, ಸಂದರ್ಶನವೊಂದರಲ್ಲಿ ಶಿಲ್ಪಾ ಶೆಟ್ಟಿ ನಿಂದನೆ, ತೆಗಳಿಕೆ, ಟೀಕೆ, ಟಿಪ್ಪಣಿಯ ಬಗ್ಗೆ ಮಾತನಾಡಿದ್ದಾರೆ. ನಿಂದನೆಯನ್ನ ಸಹಿಸಿಕೊಂಡು ಬದುಕನ್ನು ಕಟ್ಟಿಕೊಂಡ ಕಥೆ ಹೇಳಿದ್ದಾರೆ. ರಾಜ್ ಕುಂದ್ರಾ ಅವರನ್ನ ಮದುವೆಯಾದಾಗ, ಗೂಗಲ್‌ನಲ್ಲಿ ಕುಂದ್ರಾ 108 ನೇ ಶ್ರೀಮಂತ ಬ್ರಿಟಿಷ್ ಭಾರತೀಯ ಎಂಬ ಪಟ್ಟಿಯಲ್ಲಿ ಇದ್ದಿದ್ದು ನಿಜಾ ಎಂದಿರುವ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ ಹೆಸರನ್ನ ಹುಡುಕಾಡಿದಂತೆ ತನ್ನ ಹೆಸರನ್ನೂ ಕೂಡ ಗೂಗಲ್ ಮಾಡಿ ನೋಡಿ ಎಂಬ ಮನವಿಯನ್ನೂ ಮಾಡಿದ್ದಾರೆ.

ಕೆಲವರು ನನ್ನ ಬಗ್ಗೆ ಗೂಗಲ್ ಮಾಡುವುದನ್ನೇ ಮರೆತು ಬಿಡುತ್ತಾರೆ ಎಂದಿರುವ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರನ್ನ ಮದುವೆಯಾಗುವ ಮುಂಚೆಯೇ ನಾನು ಶ್ರೀಮಂತಳಾಗಿದ್ದೆ, ಈಗಲೂ ಶ್ರೀಮಂತಳಾಗಿದ್ದೇನೆ, ಮುಂದೆಯೂ ಶ್ರೀಮಂತಳಾಗಿಯೇ ಇರುತ್ತೇನೆ ಎಂದಿದ್ದಾರೆ.
ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ ಎಂದಿರುವ ಶಿಲ್ಪಾ ಶೆಟ್ಟಿ ನನಗೆ ಸಂಬಂಧಿಸಿದ ಎಲ್ಲಾ ಆದಾಯ ತೆರಿಗೆ ಬಿಲ್‌ಗಳನ್ನ, ಜಿಎಸ್‌ಟಿ ಎಲ್ಲವನ್ನೂ ನಾನೇ ಖುದ್ದು ಪಾವತಿಸುತ್ತೇನೆ ಎಂದಿದ್ದಾರೆ.
ಇನ್ನೂ ಯಶಸ್ವೀ ಮಹಿಳೆಯರು ತಮ್ಮ ಪತಿಯಿಂದ ಹಣವನ್ನು ನಿರೀಕ್ಷೆ ಮಾಡುವುದಿಲ್ಲ. ರಾಜ್ ಆಗ ಶ್ರೀಮಂತ ವ್ಯಕ್ತಿಯಾಗಿದ್ದರೂ ಕೂಡ ಅವರನ್ನ ನಾನು ಒಪ್ಪಿಕೊಳ್ಳಲು ದುಡ್ಡು ಯಾವತ್ತೂ ಕಾರಣವಾಗಿರಲಿಲ್ಲ, ಹಾಗೊಂದು ವೇಳೆ ದುಡ್ಡು ನನಗೆ ಮುಖ್ಯವಾಗಿದ್ದೇ ಆದಲ್ಲಿ ನಾನು ಬೇರೆಯವರನ್ನೂ ಮದುವೆಯಾಗಬಹುದಿತ್ತು ಅಂದಿದ್ದಾರೆ. ಯಾಕೆಂದರೆ ರಾಜ್ ಕುಂದ್ರಾ ಅವರಿಗಿಂತ ಶ್ರೀಮಂತರಾದವರು ಮದುವೆಯಾಗುವಂತೆ ನನ್ನ ದುಂಬಾಲು ಬಿದ್ದಿದ್ದರು ಎಂದಿದ್ದಾರೆ.

ಹೀಗಾಗಿಯೇ ನನಗೆ ಅವತ್ತು, ಇವತ್ತು, ಯಾವತ್ತು ಹಣ ಮುಖ್ಯವಾಗಿಯೇ ಇರಲಿಲ್ಲ ಎಂದು ಪುನರುಚ್ಚಿಸಿದ್ದಾರೆ ಶಿಲ್ಪಾ ಶೆಟ್ಟಿ. ಅಂದ್ಹಾಗೇ ರಾಜ್ ಕುಂದ್ರಾ ಅವರನ್ನ ಮದುವೆಯಾಗಲು ಅಸಲಿ ಕಾರಣ ಏನು ಅನ್ನುವುದನ್ನ ಶಿಲ್ಪಾ ಶೆಟ್ಟಿ ಹೇಳಲಿಲ್ಲಅನ್ನುವುದು ನಿಮ್ಮ ಗಮನಕ್ಕಿರಲಿ.
ಒಟ್ಟಿನಲ್ಲಿ ಸಶಕ್ತ ಹೆಣ್ಣು ಮಕ್ಕಳೇ ಸಮ ಸಮಾಜಕ್ಕೆ ಬುನಾದಿ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ಮಹಿಳೆಯರನ್ನ ನೋಡುವ ದೃಷ್ಟಿಕೋನ ಬದಲಾಗಲಿ ಎಂದಿದ್ದಾರೆ. ಸದ್ಯಕ್ಕೆ ರಾಜ್ ಕುಂದ್ರಾ ಬಗ್ಗೆ ಹಾಗೂ ದುಡ್ಡಿನ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿರುವ ಈ ಮಾತುಗಳು ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಗೀಡಾಗ್ತಿವೆ.


Click it and Unblock the Notifications











