For Quick Alerts
  ALLOW NOTIFICATIONS  
  For Daily Alerts

  ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ

  |

  ಸಾಮಾಜಿಕ ಜಾಲತಾಣದಲ್ಲಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿದ್ದ ಗ್ಲಾಮರಸ್ ನಟಿ ಶೆರ್ಲಿನ್ ಚೋಪ್ರಾ ವಿರುದ್ಧ ಭಾರಿ ಮೊತ್ತದ ಮಾನ ನಷ್ಟ ಮೊಕದ್ದಮೆಯನ್ನು ತಾರಾ ದಂಪತಿ ಹೂಡಿದ್ದಾರೆ.

  ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ನಮ್ಮ ವಿರುದ್ಧ ನೀಚ ಮತ್ತು ಅಶ್ಲೀಲ ಹೇಳಿಕೆ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಹಾಗಾಗಿ ಕ್ಷಮಾಪಣೆ ಜೊತೆಗೆ 50 ಕೋಟಿ ನಷ್ಟ ಪರಿಹಾರ ನೀಡಬೇಕೆಂದು ಮಾನನಷ್ಟ ಮೊಕದ್ದಮೆ ನೋಟಿಸ್ ಅನ್ನು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ, ಶೆರ್ಲಿನ್ ಚೋಪ್ರಾಗೆ ಕಳಿಸಿದ್ದಾರೆ.

  ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ ಮತ್ತು ಶ್ರೀಮತಿ ಶಿಲ್ಪಾ ಶೆಟ್ಟಿ ಕುಂದ್ರಾ ವಿರುದ್ಧ ಮಾಡಿರುವ ಎಲ್ಲ ಆರೋಪಗಳು, ಯಾವುದೇ ಸಾಕ್ಷ್ಯಾಧಾರವಿಲ್ಲದ, ಸುಳ್ಳು, ಆಧಾರ ರಹಿತ ಆರೋಪಗಳಾಗಿವೆ. ಕೇವಲ ಮಾನಹಾನಿಯ ಉದ್ದೇಶಕ್ಕಾಗಿ ಈ ಆರೋಪಗಳನ್ನು ಮಾಡಲಾಗಿದೆ. ಹಾಗೂ ಹಣ ಸುಲಿಗೆ ಮಾಡುವ ತಂತ್ರ ಇದಾಗಿದೆ'' ಎಂದು ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯನ್ನು ಹೇಳಿದ್ದಾರೆ.

  ಜೆಎಲ್‌ ಸ್ಟ್ರೀಮ್ ಅಪ್ಲಿಕೇಶನ್, ಕಿರು ವಿಡಿಯೋ ಅಪ್ಲಿಕೇಶನ್ ಆಗಿದ್ದು, ಇಲ್ಲಿ ಬಳಕೆದಾರರು ತಮ್ಮ ಮೆಚ್ಚಿನ ಸೆಲೆಬ್ರಿಟಿಗಳು ಅಪ್‌ಲೋಡ್ ಮಾಡುವ ಕಂಟೆಂಟ್ ಅನ್ನು ನೋಡಬಹುದಾಗಿದೆ. 300 ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಈ ಅಪ್ಲಿಕೇಶನ್‌ನಲ್ಲಿದ್ದಾರೆ. ಶೆರ್ಲಿನ್ ಚೋಪ್ರಾ ಸಹ ಈ ಫ್ಲ್ಯಾಟ್‌ಫಾರ್ಮ್‌ನ ಕಂಟೆಂಟ್ ಕ್ರಿಯೇಟರ್ ಆಗಿದ್ದರು. ಆದರೆ ಈ ಅಪ್ಲಿಕೇಶನ್‌ಗೂ ಶಿಲ್ಪಾ ಶೆಟ್ಟಿಗೂ ಯಾವುದೇ ಸಂಬಂಧವಿಲ್ಲ. ಆದರೆ ಶೆರ್ಲಿನ್ ಚೋಪ್ರಾ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಶಿಲ್ಪಾ ಶೆಟ್ಟಿಯ ಹೆಸರು ಎಳೆಯುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.

  ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಶೆರ್ಲಿನ್ ಚೋಪ್ರಾ!

  ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಶೆರ್ಲಿನ್ ಚೋಪ್ರಾ!

  ರಾಜ್ ಕುಂದ್ರಾ ವಿರುದ್ಧ ಈ ಹಿಂದೆ ದೂರು ನೀಡಿದ್ದ ಶೆರ್ಲಿನ್ ಚೋಪ್ರಾ, ಆ ನಂತರ ಶಿಲ್ಪಾ ಶೆಟ್ಟಿಗೆ ಕರೆ ಮಾಡಿ ರಾಜ್ ಕುಂದ್ರಾ ವಿರುದ್ಧ ದೂರು ನೀಡಿದ್ದಕ್ಕೆ ನನಗೆ ಬಹಳ ಬೇಸರವಾಗಿದೆ. ನನ್ನ ವಕೀಲರು ಹೇಳಿದರು ಎಂದು ನಾನು ಹಾಗೆ ಮಾಡಿದೆ. ನಾನು ದೂರು ವಾಪಸ್ ಪಡೆಯುತ್ತೇನೆ ಎಂದಿದ್ದರು. ಆ ನಂತರ ಶಿಲ್ಪಾ ಶೆಟ್ಟಿಯಿಂದ 48 ಲಕ್ಷ ರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಹ ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ, ಶೆರ್ಲಿನ್ ಚೋಪ್ರಾಗೆ ಕಳಿಸಿರುವ ನೋಟಿಸ್ ನಲ್ಲಿ ಆರೋಪಿಸಲಾಗಿದೆ.

  ಮಾನಸಿಕ, ದೈಹಿಕ ಹಿಂಸೆ ಹಾಗೂ ವ್ಯವಹಾರ ನಷ್ಟಕ್ಕೆ ಪರಿಹಾರ

  ಮಾನಸಿಕ, ದೈಹಿಕ ಹಿಂಸೆ ಹಾಗೂ ವ್ಯವಹಾರ ನಷ್ಟಕ್ಕೆ ಪರಿಹಾರ

  ಈ ನೋಟಿಸ್ ತಲುಪಿದ ಒಂದು ವಾರದ ಒಳಗೆ 50 ಕೋಟಿ ರುಪಾಯಿ ಪರಿಹಾರ ದನವನ್ನು ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ನೀಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಶೆರ್ಲಿನ್ ಚೋಪ್ರಾ ತಮ್ಮ ಸುಳ್ಳು ಆರೋಪಗಳಿಂದ ಮಾಡಿರುವ ಮಾನ ಹಾನಿ, ಅದರಿಂದ ಆಗಿರುವ ಮಾನಸಿಕ, ದೈಹಿಕ ಹಿಂಸೆ, ವ್ಯವಹಾರ ನಷ್ಟಕ್ಕೆ ಪರಿಹಾರವಾಗಿ 50 ಕೋಟಿ ರು ಹಣ ಬೇಡಿಕೆ ಇಟ್ಟಿರುವುದಾಗಿ ನೋಟಿಸ್ ನಲ್ಲಿ ಹೇಳಲಾಗಿದೆ.

  ಲೈಂಗಿಕ ದೌರ್ಜನ್ಯದ ದೂರು ನೀಡಿದ್ದ ಶೆರ್ಲಿನ್ ಚೋಪ್ರಾ

  ಲೈಂಗಿಕ ದೌರ್ಜನ್ಯದ ದೂರು ನೀಡಿದ್ದ ಶೆರ್ಲಿನ್ ಚೋಪ್ರಾ

  ರಾಜ್ ಕುಂದ್ರಾ ಕಳೆದ ವರ್ಷ ಮಾರ್ಚ್ 27 ಕ್ಕೆ ನನ್ನ ಮನೆಗೆ ಬಂದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ನನ್ನನ್ನು ಬಲವಂತವಾಗಿ ಫೊಟೊಶೂಟ್ ಮಾಡುವಂತೆ ಬೆದರಿಸಿದ್ದ ಆ ನಂತರ ಆತನದ್ದೇ ಕಂಪೆನಿಯೊಂದಕ್ಕೆ ಫಿಟ್‌ನೆಸ್ ವಿಡಿಯೋಗಳನ್ನು ಮಾಡಿಕೊಡುವಂತೆ ಹೇಳಿದ್ದ, ಅಂತೆಯೇ ನಾನು ಫಿಟ್‌ನೆಸ್ ವಿಡಿಯೋಗಳನ್ನು ಮಾಡಿಕೊಟ್ಟಿದ್ದೇನೆ' ಎಂದಿದ್ದ ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ವಂಚನೆ ದೂರು ದಾಖಲಿಸಿದ್ದರು. ತಾವು ರಾಜ್ ಕುಂದ್ರಾಗೆ ವಿಡಿಯೋಗಳನ್ನು ಮಾಡಿಕೊಟ್ಟಿದ್ದು ಈ ವಿಷಯ ನಟಿ ಶಿಲ್ಪಾ ಶೆಟ್ಟಿಗೂ ಗೊತ್ತಿತ್ತು ಎಂದು ಅವರು ಈ ಹಿಂದೆ ಹೇಳಿದ್ದರು.

  ಜುಲೈ 19ರಂದು ಬಂಧನಕ್ಕೆ ಒಳಗಾಗಿದ್ದ ರಾಜ್ ಕುಂದ್ರಾ

  ಜುಲೈ 19ರಂದು ಬಂಧನಕ್ಕೆ ಒಳಗಾಗಿದ್ದ ರಾಜ್ ಕುಂದ್ರಾ

  ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಅವನ್ನು ವಿದೇಶದಲ್ಲಿರುವ ತನ್ನ ಸಹೋದರ ಸಂಬಂಧಿಯ ಕಂಪೆನಿಯ ಸಹಾಯದ ಮೂಲಕ ಅವನ್ನು ಹಾಟ್‌ಶಾಟ್ಸ್‌ ಹೆಸರಿನ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡುತ್ತಿದ್ದರು. ಆ ಮೂಲಕ ದಿನವೊಂದಕ್ಕೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ಜುಲೈ 19 ರಂದು ಬಂಧನಕ್ಕೆ ಒಳಗಾಗಿದ್ದ ರಾಜ್ ಕುಂದ್ರಾ ಸೆಪ್ಟಂಬರ್ 21ಕ್ಕೆ ಜಾಮೀನಿನ ಮೇಲೆ ಹೊರಗೆ ಬಂದರು.

  English summary
  Actress Shilpa Shetty and Raj Kundra slaps 50 crore rs defamation case against Sherlyn Chopra. They said Sherlyn Chopra tried to extort money from them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X