10 ಕೋಟಿ ಆಫರ್ ಬೇಡ ಎಂದು ತಿರಸ್ಕರಿಸಿದ್ರಂತೆ ಶಿಲ್ಪಾ ಶೆಟ್ಟಿ
ಮಂಗಳೂರು ಹುಡುಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಹಳ ವರ್ಷದ ನಂತರ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದು, ಹೊಸ ಚಿತ್ರ ಆರಂಭಿಸಿದ್ದಾರೆ. 'ನಿಕಮ್ಮಾ' ಎಂಬ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡುತ್ತಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.
44ರ ಹರೆಯದ ಶಿಲ್ಪಾ ಶೆಟ್ಟಿ ತಮ್ಮ ಆರೋಗ್ಯ, ಫಿಟ್ನೆಸ್ ಕುರಿತು ಬಹಳ ಗಮನ ಹರಿಸುತ್ತಾರೆ. ಯೋಗ, ಜಿಮ್, ವರ್ಕೌಟ್ ಮಾಡಿ ಈಗಲೂ 20ರ ಹುಡುಗಿಯಂತೆ ಕಾಣಿಸಿಕೊಳ್ಳುತ್ತಾರೆ. ಇಂದಿನ ಯುವನಟಿಯರು ನಾಚುವಂತಹ ಸೌಂದರ್ಯ ಕಾಪಾಡಿಕೊಂಡಿದ್ದಾರೆ ರಾಜ್ ಕುಂದ್ರಾ ಪತ್ನಿ.
ಇಂತಹ ಶಿಲ್ಪಾ ಶೆಟ್ಟಿಗೆ ಆಯುರ್ವೇದಿಕ್ ಕಂಪನಿಯೊಂದು 10 ಕೋಟಿ ಆಫರ್ ನೀಡಿತ್ತಂತೆ. ಆದ್ರೆ, ಆ ಅವಕಾಶವನ್ನ ಶಿಲ್ಪಾ ಶೆಟ್ಟಿ ತಿರಸ್ಕರಿಸಿದ್ದಾರೆ ಎಂಬ ವಿಷ್ಯ ಬಹಿರಂಗವಾಗಿದೆ. ಸ್ವತಃ ಶಿಲ್ಪಾ ಶೆಟ್ಟಿ ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಆಯುರ್ವೇದ ಕಂಪನಿಯೊಂದು ಹೊಸದಾದ ಆಪ್ ಬಗ್ಗೆ ಜಾಹೀರಾತು ಲಾಂಚ್ ಮಾಡಲು ಸಜ್ಜಾಗಿತ್ತು. ಅದರ ಭಾಗವೆಂಬಂತೆ ಸ್ಲಿಮ್ಮಿಂಗ್ ಮಾತ್ರೆ (ಸ್ಲಿಮ್ ಆಗಲು ಮಾತ್ರೆ) ಬಗ್ಗೆ ಜಾಹೀರಾತು ನೀಡಲು ನನ್ನನ್ನು ಸಂಪರ್ಕಿಸಿದ್ದರು. ಆದ್ರೆ, ನನಗೆ ಭರವಸೆ ಇಲ್ಲದ ವಿಷ್ಯದ ಬಗ್ಗೆ ನಾನು ಪ್ರಕಟಣೆ ನೀಡುವುದು ಸರಿಹೋಗುವುದಿಲ್ಲ ಎಂಬ ಕಾರಣಕ್ಕೆ ಅದನ್ನ ರಿಜೆಕ್ಟ್ ಮಾಡಿದೆ ಎಂದು ತಿಳಿಸಿದ್ದಾರೆ.
ನೈಸರ್ಗಿಕ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ನಾನು ವೈಜ್ಞಾನಿಕವಾಗಿ ಕೆಲವನ್ನ ಪ್ರೋತ್ಸಾಹಿಸುವುದಿಲ್ಲ. ಆರೋಗ್ಯಕರ ಆಹಾರ ಮತ್ತು ವ್ಯಾಯಮದಿಂದ ಇದು ಸಾಧ್ಯ ಎಂದು ಶಿಲ್ಪಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











