10 ಕೋಟಿ ರೂ. ಜಾಹೀರಾತು ಆಫರ್ ತಿರಸ್ಕರಿಸಿದ್ದ ಶಿಲ್ಪಾ ಶೆಟ್ಟಿ: ಕಾರಣವೇನು?

ಬಾಲಿವುಡ್ ನಟಿ, ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ತನ್ನ ಫಿಟ್‌ನೆಸ್‌ಗೆ ಎಷ್ಟು ಮಹತ್ವ ನೀಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. 46ನೇ ವಯಸ್ಸಿನಲ್ಲೂ ಸುಂದರವಾಗಿ ಬಳಕುವ ಬಳ್ಳಿಯಂತೆ ಇರುವ ಶಿಲ್ಪಾ ಶೆಟ್ಟಿಯ ಸೌಂದರ್ಯದ ರಹಸ್ಯವೇ ಯೋಗ. ಅನೇಕ ವರ್ಷಗಳಿಂದ ಯೋಗ ಮಾಡುತ್ತಿರುವ ಶಿಲ್ಪ ಆಗಾಗ ಯೋಗದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Recommended Video

10 ಕೋಟಿ ಕೊಟ್ರು ಈ ಕೆಲಸ ಮಾಡಲ್ಲ ಎಂದ ಶಿಲ್ಪಾ ಶೆಟ್ಟಿ | Filmibeat Kannada

ಶಿಲ್ಪ ಫಿಟ್ ಅಂಡ್ ಫೈನ್ ಕಾಣಿಸಿಕೊಳ್ಳಲು ಯಾವುದೇ ಮಾತ್ರೆಗಳನ್ನು ಅವಲಂಬಿಸಿಲ್ಲ. ಯೋಗ, ದೈಹಿಕ ಅಭ್ಯಾಸ, ಸೂಕ್ತ ಆಹಾರ ಸೇವಿಸಿದರೆ ಫಿಟ್ ಆಗಿ ಇರಬಹುದು ಎಂದು ಶಿಲ್ಪಾ ಶೆಟ್ಟಿ ಹೇಳುತ್ತಾರೆ. ಫಿಟ್ನೆಸ್ ಬಗ್ಗೆ ಶಿಲ್ಪಾ ಶೆಟ್ಟಿ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸ್ಲಿಮ್ ಮಾತ್ರಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಜಾಹೀರಾತು ಕಂಪನಿಯೊಂದು 10 ಕೋಟಿ ರೂ. ಆಫರ್ ಮಾಡಿದ್ರೆ ನಟಿ ಶಿಲ್ಪಾ ಶೆಟ್ಟಿ ಒಂದು ಕ್ಷಣವೂ ಯೋಚಿಸದೆ ತಿರಸ್ಕರಿಸಿದ್ದರು.

ಕಳೆದ ಮೂರು ವರ್ಷಗಳ ಹಿಂದೆ ಜಾಹೀರಾತು ಕಂಪನಿಯೊಂದು ಸ್ಲಿಮ್ ಮಾತ್ರೆಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಶಿಲ್ಪ ಶೆಟ್ಟಿಗೆ ಆಫರ್ ಮಾಡಿತ್ತು. ಆದರೆ ಯೋಗ ಮತ್ತು ವರ್ಕೌಟ್‌ನಲ್ಲಿ ನಂಬಿಕೆ ಇಟ್ಟಿರುವ ಶಿಲ್ಪಾ, ನಂಬಿಕೆಯಿಲ್ಲದ ವಿಷಯಗಳನ್ನು ಜನರಿಗೆ ಹೇಳಲು ತನ್ನಿಂದ ಸಾಧ್ಯವಿಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದರು.

Shilpa Shetty rejected Rs 10 crore worth slimming pills advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಿಲ್ಪ ಶೆಟ್ಟಿ, "ಸ್ಲಿಮ್ಮಿಂಗ್ ಮಾತ್ರೆಗಳು ತ್ವರಿತ ಫಲಿತಾಂಶಗಳಿಗಾಗಿ ಮಾತ್ರ. ಆದರೆ ಶಿಸ್ತಿನ ದಿನಚರಿಯ ವ್ಯಾಯಾಮವನ್ನು ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದರು. "ನಾನು ನಂಬದ ಯಾವುದೇ ವಿಚಾರವನ್ನು ಮಾರಾಟ ಮಾಡಲು ನನಗೆ ಸಾಧ್ಯವಿಲ್ಲ" ಎಂದಿದ್ದರು.

ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಿನಿಮಾರಂಗದಿಂದ ದೂರ ಇದ್ದರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಫಿಟ್ನೆಸ್ ಮತ್ತು ಆಹಾರ ವಿಚಾರವಾಗಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಶಿಲ್ಪಾ ಶೆಟ್ಟಿ ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದು, ಹಂಗಾಮ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

More from Filmibeat

English summary
Bollywood Actress Shilpa Shetty rejected Rs 10 crore worth slimming pills advertisement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X