For Quick Alerts
  ALLOW NOTIFICATIONS  
  For Daily Alerts

  BREAKING: ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನ

  |

  ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಇಂದು (ಜುಲೈ 19) ರಾತ್ರಿ ಬಂಧಿಸಿದ್ದಾರೆ.

  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada

  ರಾಜ್ ಕುಂದ್ರಾ ಅನ್ನು ಅಶ್ಲೀಲ ವಿಡಿಯೋ ಚಿತ್ರೀಕರಣ ಮತ್ತು ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಆಗಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

  ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನು ಕೆಲವು appಗಳ ಮೂಲಕ ಪಬ್ಲಿಷ್ ಮಾಡುತ್ತಿರುವ ಬಗ್ಗೆ ಕೆಲವು ತಿಂಗಳಿಂದಲೂ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದೇ ರೀತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಸ್ಟಿಂಗ್ ನಿರ್ದೇಶಕನೊಬ್ಬ ಹಾಗೂ ಯುವತಿಯೊಬ್ಬರನ್ನು ಮುಂಬೈ ಪೊಲೀಸರು ಕೆಲ ದಿನಗಳ ಹಿಂದೆ ಬಂಧಿಸಿದ್ದರು.

  ರಾಜ್ ಕುಂದ್ರಾ ಬಂಧನದ ಬಗ್ಗೆ ಮಾತನಾಡಿರುವ ಮುಂಬೈ ಪೊಲೀಸ್ ಕಮಿಷನರ್, ''ರಾಜ್ ಕುಂದ್ರ ವಿರುದ್ಧ ಅಗತ್ಯ ಸಾಕ್ಷ್ಯ ಇದ್ದ ಕಾರಣ ಅವರನ್ನು ಬಂಧಿಸಲಾಗಿದೆ'' ಎಂದಿದ್ದಾರೆ.

  ''ನೀಲಿ ಚಿತ್ರಗಳನ್ನು ಚಿತ್ರೀಕರಿಸಿ ಅವುಗಳನ್ನು ವಿದೇಶಿ ಸರ್ವರ್‌ಗಳನ್ನು ಬಳಸಿ ಮೊಬೈಲ್‌ ಆಪ್‌ಗಳಿಗೆ ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಬಗ್ಗೆ ಇದೇ ಫೆಬ್ರವರಿಯಲ್ಲಿ ಮುಂಬೈ ಸೈಬರ್‌ ಕ್ರೈಂನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕ್ರೈಂ ಬ್ರ್ಯಾಂಚ್‌ ಮಾಡಿದ್ದು, ಪ್ರಕರಣದ ಮುಖ್ಯ ರೂವಾರಿಯಾದ ರಾಜ್ ಕುಂದ್ರಾ ಅನ್ನು ಬಂಧಿಸಲಾಗಿದೆ'' ಎಂದಿದ್ದಾರೆ.

  ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರು ಆಗಿರುವ ರಾಜ್ ಕುಂದ್ರಾ ಹಲವು ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ವಿಚ್ಛೇಧಿತ ಪತ್ನಿಯ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ರಾಜ್ ಇದೀಗ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ. ಈ ಹಿಂದೆ ಸ್ಪಾಟ್ ಫಿಕ್ಸಿಂಗ್‌ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರು ಕೇಳಿಬಂದು ಅವರ ಮೇಲೆ ಬ್ಯಾನ್ ಹೇರಲಾಗಿತ್ತು. ನಂತರ ಅವರು ಸುಪ್ರೀಂಕೋರ್ಟ್‌ಗೆ ಅಪೀಲು ಹೋಗಿ ಪ್ರಕರಣದಲ್ಲಿ ಜಯ ಸಾಧಿಸಿದ್ದರು.

  English summary
  Shilpa Shetty's husband, businessman Raj Kundra arrested by Mumbai police in blue film case. Mumbai police said Raj Kundra is the key conspirator.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X