For Quick Alerts
  ALLOW NOTIFICATIONS  
  For Daily Alerts

  ಜೈಲಿಂದ ಬಿಡುಗಡೆ ಆಗಿ ಒಂದು ವರ್ಷ: ಬಾಯ್ಮುಚ್ಚಿ ಎಂದ ರಾಜ್ ಕುಂದ್ರಾ!

  |

  ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಕಳೆದ ವರ್ಷಾಂತ್ಯದ ವೇಳೆಗೆ ಬಹಳ ಸುದ್ದಿಯಲ್ಲಿದ್ದು. ಅಶ್ಲೀಲ ವಿಡಿಯೋ ಚಿತ್ರೀಕರಣ, ಮಾರಾಟ, ವಿತರಣೆ ಪ್ರಕರಣದಲ್ಲಿ ಮುಂಬೈ ಪೊಲೀಸರು ರಾಜ್ ಕುಂದ್ರಾ ಅನ್ನು ಬಂಧಿಸಿ ಜೈಲಿಗಟ್ಟಿದ್ದರು.

  ಜೈಲಿನಿಂದ ಬಿಡುಗಡೆ ಆಗಿ ಬಂದ ಬಳಿಕ ಬಹುತೇಕ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದಾರೆ ರಾಜ್ ಕುಂದ್ರಾ, ಹೊರಗೆ ಬಂದರೂ ಸಹ ಇಡೀ ಮುಖ ಮುಚ್ಚುವಂತೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಾರೆ. ಆದರೆ ಇದೀಗ ರಾಜ್ ಕುಂದ್ರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

  ''ಆರ್ಥರ್ ರೋಡ್‌ನಿಂದ (ಆರ್ಥ್ರರ್ ರೋಡ್ ಜೈಲು) ಬಿಡುಗಡೆಯಾಗಿ ಒಂದು ವರ್ಷವಾಗಿದೆ. ನ್ಯಾಯ ಹಂಚಿಕೆಗೆ ಇನ್ನು ಹೆಚ್ಚು ಸಮಯ ಹಿಡಿಯುವುದಿಲ್ಲ. ಸತ್ಯ ಶೀಘ್ರದಲ್ಲೇ ಹೊರಬೀಳಲಿದೆ! ಈ ಕ್ಲಿಷ್ಟಕರ ಸಮಯದಲ್ಲಿ ನನ್ನನ್ನು ಬಲಪಡಿಸಿದ ಹಿತೈಷಿಗಳಿಗೆ ಧನ್ಯವಾದಗಳು ಟ್ರೋಲರ್‌ಗಳಿಗೆ ಇನ್ನೂ ಹೆಚ್ಚು ಧನ್ಯವಾದಗಳು'' ಎಂದು ನಿನ್ನೆ (ಸೆಪ್ಟೆಂಬರ್ 21) ಟ್ವೀಟ್ ಮಾಡಿದ್ದಾರೆ ಕುಂದ್ರಾ.

  ಜೊತೆಗೆ ತಮ್ಮ ಮುಖ ಕಾಣದ ಚಿತ್ರ ಹಂಚಿಕೊಂಡು, ''ನಿಮಗೆ ಪೂರ್ತಿ ಸತ್ಯ ಗೊತ್ತಿಲ್ಲವೆಂದರೆ ಬಾಯಿಮುಚ್ಚಿಕೊಂಡಿರಿ'' ಎಂದು ಚಿತ್ರದ ಮೇಲೆ ಬರೆದುಕೊಂಡಿದ್ದಾರೆ. ರಾಜ್ ಕುಂದ್ರಾರ ಈ ಪೋಸ್ಟ್‌ಗೆ ಥರಹೇವಾರಿ ಪ್ರತಿಕ್ರಿಯೆಗಳು ಬಂದಿವೆ.

  ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಮಾರಾಟ ಪ್ರಕರಣದಲ್ಲಿ ಮುಂಬೈ ಪೊಲೀಸರು ಕಳೆದ ವರ್ಷ ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಬಂಧಿಸಿದ್ದರು. ಎರಡು ತಿಂಗಳಿಗೂ ಹೆಚ್ಚು ಸಮಯ ಆರ್ಥರ್ ಜೈಲಿನಲ್ಲಿದ್ದ ರಾಜ್ ಕುಂದ್ರಾ ಸೆಪ್ಟೆಂಬರ್ 21, 2021 ರಂದು ಜಾಮೀನಿನ ಮೇಲೆ ಬಿಡುಗಡೆ ಆದರು.

  ರಾಜ್ ಕುಂದ್ರಾ ಹಾಟ್‌ಶಾಟ್ಸ್ ಹೆಸರಿನ ಅಪ್ಲಿಕೇಶನ್ ಹೊಂದಿದ್ದು ಆ ಶುಲ್ಕಾಧರಿತ ಅಪ್ಲಿಕೇಶನ್‌ಗಾಗಿ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಲಂಡನ್‌ನಲ್ಲಿನ ತಮ್ಮ ಸಹೋದರ ಸಂಬಂಧಿಯ ಸಂಸ್ಥೆಯ ಮೂಲಕ ಅಪ್ಲಿಕೇಶನ್‌ಗಳನ್ನು ಅಪ್‌ಲೋಡ್ ಮಾಡಿ ದಿನವೊಂದಕ್ಕೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದರು. ರಾಜ್ ಕುಂದ್ರಾ ಬಂಧನಕ್ಕೆ ಮುನ್ನಾ ಮುಂಬೈನ ಒಂದು ಮನೆಯ ಮೇಲೆ ದಾಳಿ ಮಾಡಿ ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದ ಆರೋಪದಲ್ಲಿ ಮಾಡೆಲ್ ಗೆಹನಾ ವಸಿಷ್ಠ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.

  ರಾಜ್ ಕುಂದ್ರಾ ಬಂಧನದ ಬಳಿಕ ಗ್ಲಾಮರಸ್ ವಿಡಿಯೋ, ಚಿತ್ರಗಳಿಗೆ ಖ್ಯಾತರಾದ ನಟಿ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ರಾಜ್ ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಕೆಲವು ನಟಿಯರು ಅತ್ಯಾಚಾರ ಯತ್ನದ ಆರೋಪಗಳನ್ನೂ ಮಾಡಿದರು. ಆದರೆ ನಟಿ ಗೆಹನಾ ವಸಿಷ್ಠ ಮಾತ್ರ ರಾಜ್ ಕುಂದ್ರಾ ಪರವಾಗಿ ಹೇಳಿಕೆಗಳನ್ನು ನೀಡಿದರು. ರಾಜ್ ಕುಂದ್ರಾ ಹೊರಗೆ ಬಂದ ಬಳಿಕ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ಪೂನಂ ಪಾಂಡೆ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ.

  English summary
  Shilpa Shetty's husband Raj Kundra reacts about his arrest in indecent video case for the first time. He thanked trolls.
  Thursday, September 22, 2022, 14:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X