ಶಿಲ್ಪಾ ಶೆಟ್ಟಿ ತಾಯಿಯಿಂದ ದೂರು: 1.6 ಕೋಟಿ ವಂಚನೆ ಆರೋಪ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕಳೆದ ಹತ್ತು ದಿನಗಳಿಂದ ರಾಜ್ ಕುಂದ್ರಾ ಕೇಸ್ ಹಲವು ಆಯಾಮ ಪಡೆದುಕೊಂಡಿದ್ದು, ಗಂಭೀರವಾಗಿದೆ. ಇದೀಗ, ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ 1.6 ಕೋಟಿ ಮೌಲ್ಯದ ಜಮೀನು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ, ಸುಧಾಕರ್ ಘರೆ ಎಂಬ ವ್ಯಕ್ತಿ ನಕಲಿ ಪತ್ರಗಳನ್ನು ಸೃಷ್ಟಿಸಿ ತನಗೆ ಜಮೀನು ಮಾರಾಟ ಮಾಡಿ 1.6 ಕೋಟಿ ವಂಚಿಸಿದ್ದಾನೆ ಎಂದು ಸುನಂದಾ ಶೆಟ್ಟಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಸುನಂದಾ ಶೆಟ್ಟಿಯ ದೂರಿನ ಹಿನ್ನಲೆ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ಎಎನ್‌ಐಗೆ ತಿಳಿಸಿರುವುದಾಗಿ ವರದಿಯಾಗಿದೆ. ಈ ಕೇಸ್ ಕುರಿತಂತೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

 Shilpa Shettys Mother files Cheating Complaint in 1.6 crore Land deal case

14 ದಿನ ನ್ಯಾಯಾಂಗ ಬಂಧನಕ್ಕೆ ರಾಜ್ ಕುಂದ್ರಾ

ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಜುಲೈ 19 ರಂದು ಅರೆಸ್ಟ್ ಮಾಡಲಾಗಿದೆ. ಜುಲೈ 27ರವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜ್ ಕುಂದ್ರಾರನ್ನು 14 ದಿನಗಳವರೆಗೂ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

ಈ ಕೇಸ್‌ಗೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಚೋಪ್ರಾ, ಗೆಹನಾ ವಸಿಸ್ತ್ ಸೇರಿದಂತೆ ಮತ್ತೆ ಕೆಲವು ನಟಿಯರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಬಂಧನದ ಭೀತಿ ಹಿನ್ನೆಲೆ ನಟಿ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಇಬ್ಬರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ಈ ಕೇಸ್ ಸಂಬಂಧ ಸೆಪ್ಟೆಂಬರ್ 20ರವರೆಗೂ ಈ ನಟಿಯರ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

More from Filmibeat

English summary
Actress Shilpa Shetty mother Sunanda Shetty files cheating complaint against a person named Sudhakar Ghare in land deal case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X