ಹೊಸ ಹೇರ್‌ಸ್ಟೈಲ್‌ನಿಂದ ಟ್ರೆಂಡ್‌ ಆದ ನಟಿ ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ತನ್ನ ಯೋಗಾಭ್ಯಾಸ ಮತ್ತು ಡಯೆಟ್‌ನಿಂದಾಗಿ ತುಂಬ ಆರೋಗ್ಯಕರ ದೇಹವನ್ನು ಇರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರೋ ಶಿಲ್ಪಾ ಶೆಟ್ಟಿ ಇದೀಗ ತನ್ನ ಹೇರ್ ಕಟ್ ವಿಚಾರದಲ್ಲಿ ಸುದ್ದಿ ಮಾಡುತ್ತಿದ್ದಾರೆ. ವಿಭಿನ್ನವಾದ ಹೇರ್ ಕಟ್ ಮಾಡಿಸಿ ನೆಟ್ಟಿಗರ ಕಣ್ಣಿಗೆ ಗುರಿಯಾಗಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ. ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾ ಮಾಡಿ ತನ್ನ ಮೈಮಾಟದಿಂದಲೇ ಗಮನ ಸೆಳೆದ ನೀಳಕಾಯದ ಬೆಡಗಿ. ಮಂಗಳೂರಿನಲ್ಲಿ ಹುಟ್ಟಿ ಬಾಲಿವುಡ್ ಅಂಗಳದಲ್ಲಿ ಛಾಪು ಮೂಡಿಸಿರೋ ಶಿಲ್ಪಾ ಶೆಟ್ಟಿ ಸದ್ಯ ಮುಂಬೈನಲ್ಲೆ ಸೆಟಲ್ ಆಗಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸೋ ಶಿಲ್ಪಾ ಶೆಟ್ಟಿ ಯೋಗ, ವರ್ಕ್‌ಔಟ್‌ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೆಲ್ದಿ ಲೈಫ್‌ಸ್ಟೈಲ್ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಸದಾ ಆಕ್ಟಿವ್ ಆಗಿರೋ ನಟಿ ಶಿಲ್ಪಾ ಶೆಟ್ಟಿ ಈಗ ತನ್ನ ವಿಭಿನ್ನ ಹೇರ್ ಕಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಪತಿ ರಾಜ್ ಕುಂದ್ರ ಬಂಧನದ ನಂತ್ರದಲ್ಲಿ ಎಲ್ಲೂ ಕಾಣಿಸಿಕೊಂಡಿರದ ಶಿಲ್ಪಾ ಶೆಟ್ಟಿ, ತನ್ನ ರಿಯಾಲಿಟಿ ಶೋಗೂ ತಿಂಗಳುಗಟ್ಟಲೆ ತೆರಳಿರಲಿಲ್ಲ. ಹೀಗೆ ಕೆಲ ದಿನ ಮರೆಯಾಗಿದ್ದ ನಟಿ ಈಗ ಧಿಡೀರ್ ಅಂತ ಫುಲ್ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಡಿಫರೆಂಟ್ ಗೆಟಪ್‌ನ ಹೇರ್ ಕಟ್ ಮಾಡಿಸಿದ್ದಾರೆ. ಈಗ ಟ್ರೆಂಡ್‌ನಲ್ಲಿ ಇರೋ ಬುಜ್ ಕಟ್ ಅಂದರೆ ಅಂಡರ್ ಕಟ್ ಮಾಡಿಸಿ ಎಲ್ಲರಿಗೂ ಆಶ್ಚರ್ಯ ಮೂಡಿಸುತ್ತಿದ್ದಾರೆ.

 Shilpa Shettys new haircut has split the internet

ಯಾಕಂದ್ರೆ ಈ ಹೇರ್‌ಕಟ್‌ನಲ್ಲಿ ತಲೆಯ ಹಿಂಬದಿಯಲ್ಲಿರೋ ಕೂದಲನ್ನು ಸಮನಾಗಿ ತುಂಡರಿಸಲಾಗುತ್ತೆ, ಯುವಕರು ಹೆಚ್ಚು ಇಷ್ಟ ಪಡುವ ಹೇರ್ ಕಟ್‌ ಇದಾಗಿದ್ದು, ಶಿಲ್ಪಾ ಶೆಟ್ಟಿ ಕೂಡ ಇದಕ್ಕೆ ಮಾರುಹೋಗಿ ಅಂಡರ್ ಕಟ್ ಮಾಡಿಸಿದ್ದಾರೆ. ಇನ್ನು ಹೇರ್‌ಕಟ್‌ ಮಾಡಿಸಿರೋದನ್ನ ತನ್ನ ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಶಿಲ್ಪಾ ಶೆಟ್ಟಿ ಶೇರ್ ಮಾಡಿದ್ದಾರೆ. ಫಿಟ್‌ನೆಸ್ ವೀಡಿಯೋ ಜೊತೆಗೆ ಈ ಹೇರ್‌ಕಟ್‌ ಬಗ್ಗೆ ಕೂಡ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋದ ಜೊತೆಗೆ ಶಿಲ್ಪಾ ಶೆಟ್ಟಿ "ರಿಸ್ಕ್​ ತೆಗೆದುಕೊಳ್ಳದೆ ಮತ್ತು ಕಂಫರ್ಟ್ ಜೋನ್​ನಿಂದ ಹೊರಬರದೆ ಇರಲು ಸಾಧ್ಯವಿಲ್ಲ. ಇದಕ್ಕೆ ದಿಟ್ಟತನ ಬೇಕೆ ಬೇಕು. ನಾನು ಹೊಸ ಏರೋಬಿಕ್ ಮಾಡುತ್ತಿದ್ದೇನೆ. ಇದಕ್ಕೆ ಬುಡಕಟ್ಟು ಸ್ಕ್ವಾಟ್ಸ್ ಎನ್ನುತ್ತೇವೆ. ಇದು ದೇಹದ ಎಲ್ಲಾ ಸ್ನಾಯುಗಳು, ಭುಜಗಳು, ತೋಳು ಮತ್ತು ಕಾಲುಗಳ ಸ್ನಾಯುಗಳ ಬೆಳವಣಿಗೆಗೆ ಸಹಕಾರಿ. ಪ್ರತಿನಿತ್ಯ ಒಂದು ನಿಮಿಷದಂತೆ 4 ಸೆಟ್‌ಗಳನ್ನು ಮಾಡಬೇಕು. ಪ್ರತಿ ಸೆಟ್​ನ ನಡುವೆ ಕೇವಲ 30 ಸೆಕೆಂಡುಗಳ ವಿರಾಮವನ್ನು ಪಡೆಯಬೇಕು. ವ್ಯತ್ಯಾಸವನ್ನು ನೋಡಲು ಸತತವಾಗಿ ಪ್ರಯತ್ನ ಮಾಡಿ. ಧೈರ್ಯವಿಲ್ಲದೆ ಏನೂ ಬರುವುದಿಲ್ಲ,'' ಎಂದು ಬರೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿಯ ಈ ವೀಡಿಯೋ ವೈರಲ್ ಆಗುತ್ತಿದ್ದು, ಹಲವರು ಈ ಹೇರ್ ಕಟ್ ತುಂಬಾ ಕೆಟ್ಟದಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಾಗೇ ಇನ್ನು ಕೆಲವರು ಈ ಸ್ಟೈಲ್ ನಿಮಗೆ ತುಂಬಾ ಚೆನ್ನಾಗಿ ಕಾಣಿಸುತ್ತಿದೆ ಎಂದು ಕಾಂಪ್ಲಿಮೆಂಟ್ ನೀಡುತ್ತಿದ್ದಾರೆ. ಅದೇನೇ ಇದ್ರು ತನಗೆ ಹಿಡಿಸಿದ ಕೇಶ ವಿನ್ಯಾಸ ಮಾಡಿಸಿರೊ ಶಿಲ್ಪಾ ಶೆಟ್ಟಿ ನೆಟ್ಟಿಗರ ನೆಗೆಟಿವ್ ಕಮೆಂಟ್‌ಗಳಿಗೆ ತಲೆಕೆಡಿಸಿಕೊಂಡಿಲ್ಲ. ರಾಜ್ ಕುಂದ್ರಾ ಬಂಧನದ ನಂತ್ರ ಈಗ ಸ್ವಲ್ಪ ಆಕ್ಟಿವ್ ಆಗುತ್ತಿರೋದರಲ್ಲಿ ಅಭಿಮಾನಿಗಳು ಖುಷಿ ಯಾಗಿದ್ದಾರೆ.

More from Filmibeat

English summary
Shilpa shetty surprises fans with a bold undercut hairstyle. says "it took a lot of Gumption".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X