ರಾಜ್ ಕುಂದ್ರ ಬಂಧನದ ಬಳಿಕ ಮೊದಲ ಪೋಸ್ಟ್ ಶೇರ್ ಮಾಡಿದ ಪುತ್ರ ವಿಯಾನ್

ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜ್ ಕುಂದ್ರ ಬಗ್ಗೆ ಪತ್ನಿ ಶಿಲ್ಪಾ ಶೆಟ್ಟಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಜುಲೈ 19ರಂದು ಬಂಧನಕ್ಕೊಳಗಾಗಿರುವ ಪತಿ ರಾಜ್ ಕುಂದ್ರ ಬಗ್ಗೆ ಶಿಲ್ಪಾ ಶೆಟ್ಟಿ ಯಾವುದೇ ಹೇಳಿಕೆ ಬಿಡುಗಡೆ ಮಾಡಿರಲಿಲ್ಲ. ಇತ್ತೀಚಿಗೆ ಪರೋಕ್ಷವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಪತಿಯ ಬಂಧನದ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ.

ಇದೀಗ ಮೊದಲ ಬಾರಿಗೆ ಹೇಳಿಕೆ ಬಿಡುಗಡೆ ಮಾಡಿರುವ ಶಿಲ್ಪಾ ತನ್ನ ಬಗ್ಗೆ ಸಾಕಷ್ಟು ಸುಳ್ಳುಸುದ್ದಿಗಳು ಹರಿದಾಡುತ್ತಿದೆ. ದಯವಿಟ್ಟು ಮಕ್ಕಳ ಸಲುವಾಗಿ, ತಮ್ಮ ಕುಟುಂಬದ ಖಾಸಗಿತನಕ್ಕೆ ಗೌರವ ನೀಡಿ ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ಶಿಲ್ಪಾ ಶೆಟ್ಟಿ ಪುತ್ರ ವಿಯಾನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಬಂಧನದ ಬಳಿಕ ಯಾವುದೇ ಫೋಸ್ಟ್ ಶೇರ್ ಮಾಡಿದ ವಿಯಾನ್ ಇದೀಗ ಮೊದಲ ಬಾರಿಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಮೊದಲ ಪೋಸ್ಟ್ ಹಂಚಿಕೊಂಡ ವಿಯಾನ್

ಮೊದಲ ಪೋಸ್ಟ್ ಹಂಚಿಕೊಂಡ ವಿಯಾನ್

9 ವರ್ಷದ ವಿಯಾನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿದ್ದಾರೆ. ಸಾಕಷ್ಟು ಫಾಲೋವರ್ಸ್ ಹೊಂದಿರುವ ವಿಯಾನ್ ಆಗಾಗ ಕುಟುಂಬದ ಜೊತೆ ಇರುವ ಫೋಟೋಗಳನ್ನು, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದಾಗ ರಾಜ್ ಕುಂದ್ರ-ಶಿಲ್ಪಾ ಶೆಟ್ಟಿ ಪುತ್ರ ವಿಯಾನ್ ತನ್ನ ತಾಯಿ ಶಿಲ್ಪಾ ಶೆಟ್ಟಿ ಜೊತೆ ಇರುವ ಸಂತಸದ ಫೋಟೋವನ್ನು ಶೇರ್ ಮಾಡಿದ್ದಾರೆ.

ತಾಯಿ ಜೊತೆ ಇರುವ ಫೋಟೋ ಹಂಚಿಕೊಂಡ ವಿಯಾನ್

ತಾಯಿ ಜೊತೆ ಇರುವ ಫೋಟೋ ಹಂಚಿಕೊಂಡ ವಿಯಾನ್

ವಿಯಾನ್‌ನನ್ನು ತಬ್ಬಿಕೊಂಡು ಮುತ್ತು ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿರುವ ವಿಯಾನ್ ಯಾವುದೇ ಕ್ಯಾಪ್ಷನ್ ನೀಡಿಲ್ಲ. ತಾಯಿ ಜೊತೆ ಇರುವ ವಿಯಾನ್ ಫೋಟೋಗಳಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಟೈಗರ್ ಶ್ರಾಫ್ ಕೂಡ ಲೈಕ್ ಮಾಡಿದ್ದಾರೆ. ಇನ್ನು ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಯಾನ್, ತಾಯಿ ಶಿಲ್ಪಾ ಶೆಟ್ಟಿ ಹೇಳಿಕೆಯನ್ನು ಶೇರ್ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಹೇಳಿಕೆ

ಶಿಲ್ಪಾ ಶೆಟ್ಟಿ ಹೇಳಿಕೆ

ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ದೀರ್ಘವಾದ ಪತ್ರ ಹಂಚಿಕೊಂಡಿದ್ದರು. ದಯವಿಟ್ಟು ತಮ್ಮ ಕುಟುಂಬದ ಖಾಸಗಿತನಕ್ಕೆ ಗೌರವಕೊಡಿ ಎಂದು ಮನವಿ ಮಾಡಿದ್ದರು. "ಕಳೆದ ಕೆಲವು ದಿನಗಳು ನನಗೆ ತುಂಬಾ ಸವಾಲಿನ ದಿನಗಳಾಗಿವೆ. ಪ್ರತಿಯೊಂದು ವಿಚಾರದಲ್ಲೂ. ಸಾಕಷ್ಟು ವದಂತಿಗಳು ಮತ್ತು ಆರೋಪಗಳು ಬಂದಿವೆ. ಮಾಧ್ಯಮಗಳು ನನ್ನ ಮಾನಹಾನಿ ಮಾಡುತ್ತಿವೆ. ಬಹಳಷ್ಟು ಟ್ರೋಲ್ ಮತ್ತು ಪ್ರಶ್ನೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ನನಗೆ ಮಾತ್ರವಲ್ಲ ನನ್ನ ಕುಟುಂಬಕ್ಕೂ ಸಹ" ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು.

ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದ ಶಿಲ್ಪಾ

ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದ ಶಿಲ್ಪಾ

ಈ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದಿರುವ ಶಿಲ್ಪಾ "ನನ್ನ ಸ್ಟ್ಯಾಂಡ್. ನಾನು ಯಾವುದೇ ಕಾಮೆಂಟ್ ಮಾಡಲ್ಲ. ಈ ಪ್ರಕರಣ ತನಿಖೆ ಹಂತದಲ್ಲಿದೆ. ಅದ್ದರಿಂದ ದಯವಿಟ್ಟು ನಾನು ಹೇಳಿದ್ದೇನೆ ಅಂತ ಸುಳ್ಳು ಹೇಳಿಕೆಯನ್ನು ಪ್ರಕಟಿಸಬೇಡಿ" ಎಂದು ಶಿಲ್ಪಾ ಮನವಿ ಮಾಡಿಕೊಂಡಿದ್ದರು.

ಖಾಸಗಿತನಕ್ಕೆ ಗೌರವಕೊಡಿ ಎಂದ ನಟಿ

ಖಾಸಗಿತನಕ್ಕೆ ಗೌರವಕೊಡಿ ಎಂದ ನಟಿ

"ನಾನು ವಿನಮ್ರವಾಗಿ ಮನವಿ ಮಾಡುತ್ತೇನೆ. ವಿಶೇಷವಾಗಿ ಒಬ್ಬ ತಾಯಿಯಾಗಿ, ನನ್ನ ಮಕ್ಕಳ ಸಲುವಾಗಿ ನಮ್ಮ ಖಾಸಗಿತನವನ್ನು ಗೌರವಿಸಿ. ಸತ್ಯಾಸತ್ಯತೆ ಪರಿಶೀಲಿಸದೆ ಅರೆಬೆಂದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಬೇಡಿ ಎಂದು ಕೇಳಿ ಕೊಳ್ಳುತ್ತೇನೆ" ಎಂದು ಶಿಲ್ಪಾ ಹೇಳಿದ್ದರು.

ಸಹೋದರಿಯ ಬೆಂಬಲ

ಸಹೋದರಿಯ ಬೆಂಬಲ

''ನಿನ್ನ ಸದಾ ಪ್ರೀತಿಸುವೆ (ಶಿಲ್ಪಾ ಶೆಟ್ಟಿ), ಯಾವುದೇ ಕಷ್ಟದ ಸಂದರ್ಭದಲ್ಲೂ ನಾನು ನಿನ್ನ ಜೊತೆಗೆ ಇದ್ದೇ ಇರುತ್ತೇನೆ'' ಎಂದು ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ. ಶಮಿತಾ ಶೆಟ್ಟಿ ಪೋಸ್ಟ್‌ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ಸ್ವಂತ ಅಕ್ಕನ ಬೆಂಬಲಕ್ಕೆ ಬರಲು ಇಷ್ಟು ತಡವೇಕೆ' ಎಂದು ಪ್ರಶ್ನೆ ಸಹ ಮಾಡಿದ್ದಾರೆ.

ಕೋರ್ಟ್ ಮೆಟ್ಟಿಲೇರಿದ್ದ ಶಿಲ್ಪಾ ಶೆಟ್ಟಿ

ಕೋರ್ಟ್ ಮೆಟ್ಟಿಲೇರಿದ್ದ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ತನ್ನ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ತಡೆಕೋರಿ ಮಾಧ್ಯಮ ಸಂಸ್ಥೆ, ಸಾಮಾಜಿಕ ಜಾಲತಾಣಗಳು ಮತ್ತು ವೆಬ್ ಸೈಟ್ ಗಳ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಾನಹಾನಿಕರ ಸುದ್ದಿ ಪ್ರಕಟ ಮಾಡಿರುವ ಮಾಧ್ಯಮ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು ಬೇಷರತ್ ಕ್ಷಮೆ ಕೇಳಬೇಕು, ಎಲ್ಲಾ ಮಾನಹಾನಿಕರ ವಿಷಯಗಳನ್ನು ಡಿಲೀಟ್ ಮಾಡಬೇಕು ಮತ್ತು 25 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದರು.

ಕೋರ್ಟ್ ಪ್ರಶ್ನೆ

ಕೋರ್ಟ್ ಪ್ರಶ್ನೆ

ಜುಲೈ 30ರಂದು ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ, ''ಪೊಲೀಸ್ ಮೂಲಗಳ ಆಧರಿಸಿದ ವರದಿಗಳನ್ನು ಮಾನಹಾನಿಕರ ಎಂದು ಹೇಳಲಾಗುವುದಿಲ್ಲ'' ಎಂದು ಹೇಳಿದೆ. ''ನೀವು ಸಾರ್ವಜನಿಕ ಜೀವನದಲ್ಲಿದ್ದೀರಾ ಅಂದ್ಮೇಲೆ ಇಂತಹ ಘಟನೆಗಳು ಸಹಜ. ಜನರು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಆಕೆ ಅತ್ತಳು, ಗಂಡನ ಜೊತೆ ಜಗಳವಾಡಿದಳು ಎಂದು ಯಾರಾದರೂ ಬರೆದರೆ ಅದು ಹೇಗೆ ಮಾನಹಾನಿಕರ ಎಂದು ಪರಿಗಣಿಸಲಾಗುತ್ತದೆ'' ಎಂದು ನ್ಯಾಯಾಲಯ ಶಿಲ್ಪಾ ಶೆಟ್ಟಿಗೆ ಪ್ರಶ್ನೆ ಮಾಡಿದೆ.

More from Filmibeat

English summary
Actress Shilpa Shetty’s son Viaan shares first Instagram post since dad Raj Kundra's arrest in porn case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X