For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ಅವಕಾಶ ಬಂದರೂ ಹೋಗಲಿಲ್ಲ ಶಿಲ್ಪಾ ಶೆಟ್ಟಿ: ಕಾರಣವೇನು?

  |

  ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್‌ನ ಪ್ರಮುಖ ನಟಿಯರಲ್ಲೊಬ್ಬರು. ಇತ್ತೀಚೆಗೆ ಸಿನಿಮಾಗಳಿಗಿಂತಲೂ ಟಿವಿಗಳಲ್ಲಿಯೇ ಹೆಚ್ಚಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.

  ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಹೊತ್ತಿಗೆ ಶಿಲ್ಪಾ ಶೆಟ್ಟಿಗೆ ಹಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆಯ ಪ್ರಮುಖ ಸಿನಿಮಾದಲ್ಲಿ ನಟಿಸುವ ಅವಕಾಶ ಅರಸಿ ಬಂದಿತ್ತಂತೆ ಆದರೆ ಶಿಲ್ಪಾ ಶೆಟ್ಟಿ ಹಾಲಿವುಡ್ ಅವಕಾಶವನ್ನು ನಿರಾಕರಿಸಿದ್ದಾರೆ.

  2007ರ ಸಮಯದಲ್ಲಿ ನಟಿ ಶಿಲ್ಪಾ ಶೆಟ್ಟಿ 'ಬಿಗ್ ಬ್ರದರ್ ಸೀಸನ್ 5' ರಿಯಾಲಿಟಿ ಶೋನಲ್ಲಿ ಗೆದ್ದು ವಿಶ್ವ ಮಟ್ಟದಲ್ಲಿ ಪರಿಚಿತರಾಗಿದ್ದರು. ಅದೇ ಸಮಯದಲ್ಲಿ ಶಿಲ್ಪಾ ಶೆಟ್ಟಿಗೆ ಹಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆಯಿಂದ ಅವಕಾಶ ಬಂದಿತ್ತು. ಆದರೆ ಸಿನಿಮಾದಲ್ಲಿ ನಟಿಸಲು ಶಿಲ್ಪಾ ಶೆಟ್ಟಿ ಲಾಸ್ ಎಂಜಲ್ಸ್‌ನಲ್ಲಿ ವಾಸ್ತವ್ಯ ಹೂಡಬೇಕಿತ್ತು. ಇದು ಶಿಲ್ಪಾ ಶೆಟ್ಟಿಗೆ ಇಷ್ಟವಿರಲಿಲ್ಲ.

  ಆ ನಂತರವೂ ಹಾಲಿವುಡ್‌ ಅವಕಾಶವೊಂದು ಶಿಲ್ಪಾ ಶೆಟ್ಟಿಯನ್ನು ಅರಸಿ ಬಂತು ಆದರೆ ಈ ಬಾರಿ ಶಿಲ್ಪಾ ಶೆಟ್ಟಿ ಮಗನಿಗೆ ಅಮ್ಮ ಹಾಲಿವುಡ್‌ಗೆ ಹೋಗುವುದು ಅಲ್ಲಿ ನೆಲೆಸುವುದು ಇಷ್ಟವಿರಲಿಲ್ಲ ಹಾಗಾಗಿ ಶಿಲ್ಪಾ ಶೆಟ್ಟಿ ಅವಕಾಶವನ್ನು ಕೈಚೆಲ್ಲಿದರು.

  2007ರ ಬಳಿಕ ಪೂರ್ಣ ಪ್ರಮಾಣದ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸಿಲ್ಲ. ಕೆಲವು ಸಿನಿಮಾಗಳಲ್ಲಿ ವಿಶೇಷ ಹಾಡಗಳಲ್ಲಿ, ಅತಿಥಿ ಪಾತ್ರಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಪ್ರಿಯದರ್ಶನ್ ನಿರ್ದೇಶನದ 'ಹಂಗಾಮಾ 2' ಸಿನಿಮಾ ಮೂಲಕ ಮತ್ತೆ ಬಾಲಿವುಡ್‌ಗೆ ರೀ ಎಂಟ್ರಿ ಕೊಡುತ್ತಿದ್ದಾರೆ.

  Sandesh Prince ಸಾಕ್ಷ್ಯ ಬೇಕು ಅಂದ್ರೆ CCTV ಫೂಟೇಜ್ ಚೆಕ್ ಮಾಡಿ! | Filmibeat Kannada

  1993ರ 'ಬಾಜಿಗರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಪ್ರೀತ್ಸೋದ್ ತಪ್ಪಾ', 'ಒಂದಾಗೋಣ ಬಾ', 'ಆಟೊ ಶಂಕರ್' ಸಿನಿಮಾಗಳಲ್ಲಿಯೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ತೆಲುಗಿನ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿಲ್ಪಾ ಶೆಟ್ಟಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಹ ಒಡತಿ ಸಹ ಹೌದು.

  English summary
  Actress Shilpa Shetty said she turned down a big Hollywood project offered to her. She was offered Hollywood movie in 2007.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X