For Quick Alerts
  ALLOW NOTIFICATIONS  
  For Daily Alerts

  ತಾಯಿಯಾಗುತ್ತಿರುವ ಆಲಿಯಾ ಭಟ್‌ ಬಯಕೆ ತೀರಿಸಿದ ಶಿಲ್ಪಾ ಶೆಟ್ಟಿ!

  |

  ಆಲಿಯಾ ಭಟ್ ತಾಯಿಯಾಗುತ್ತಿದ್ದಾರೆ. ಸಿನಿಮಾ, ಡಯಟ್ ಎಲ್ಲರಿಂದಲೂ ಬಿಡುವು ಪಡೆದು ದೇಹಾರೋಗ್ಯ, ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಿದ್ದಾರೆ.

  ಆಲಿಯಾಗೆ ಬಾಲಿವುಡ್‌ನಲ್ಲಿ ಹಲವು ಗೆಳೆಯರು. ಆಲಿಯಾ ತಾಯಿಯಾಗುತ್ತಿರುವ ವಿಷಯ ಪ್ರಕಟಿಸಿದಾಗ ಹಲವರು ಅಭಿನಂದನೆ ಸಲ್ಲಿಸಿದ್ದರು. ತಾಯಿಯಾಗುತ್ತಿರುವ ಆಲಿಯಾಗೆ ಬಾಲಿವುಡ್‌ ಗೆಳೆಯರಿಂದ ಹಲವು ಉಡುಗೊರೆಗಳೂ ಸಹ ಬಂದಿವೆ. ಈ ನಡುವೆ ಆಲಿಯಾಗಾಗಿ ಹಿರಿಯ ನಟಿ ಶಿಲ್ಪಾ ಶೆಟ್ಟಿ ತಿನಿಸೊಂದನ್ನು ಕಳಿಸಿದ್ದಾರೆ.

  ಡಯೆಟ್ ಬಿಟ್ಟು ತಮಗೆ ಅನ್ನಿಸಿದ್ದು ತಿನ್ನುತ್ತಿರುವ ಆಲಿಯಾ ಭಟ್‌ಗೆ ಶಿಲ್ಪಾ ಶೆಟ್ಟಿ ಪಿಡ್ಜಾ ಕಳಿಸಿದ್ದಾರೆ. ಚೀಸ್, ಸಾಸ್, ಮಶ್ರೂಮ್, ಹಲಪೀನಿಯೋ ಸೇರಿ ವಿವಿಧ ರೀತಿಯ ತರಕಾರಿಗಳನ್ನು ಬಳಸಿ ಮಾಡಿರುವ ಪಿಡ್ಜಾ ಅನ್ನು ಆಲಿಯಾಗಾಗಿ ಶಿಲ್ಪಾ ಶೆಟ್ಟಿ ಕಳಿಸಿದ್ದಾರೆ.

  ಕೆಲವು ದಿನಗಳ ಹಿಂದೆ ಆಲಿಯಾ ಭಟ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೆಯೊಂದನ್ನು ಕೇಳಿದ್ದರು. ''ಮುಂಬೈನಲ್ಲಿ ಒಳ್ಳೆಯ ಪಿಡ್ಜಾ ಎಲ್ಲಿ ಸಿಗುತ್ತದೆ ತಿಳಿಸಿ. ತಿನ್ನುವ ಬಯಕೆ ಆಗುತ್ತಿದೆ'' ಎಂದಿದ್ದರು. ಆಲಿಯಾ ಅಭಿಮಾನಿಗಳು ಹಲವು ಜಾಗಗಳ ಹೆಸರು ಹೇಳಿದ್ದರು. ಕೆಲವು ಪಿಡ್ಜಾ ಪ್ಲೇಸ್‌ಗಳು ಆಲಿಯಾ ಮನೆಗೆ ಪಿಡ್ಜಾ ಕಳಿಸಿದ್ದವು ಸಹ.

  ಆದರೆ ಶಿಲ್ಪಾ ಶೆಟ್ಟಿ ತಾವೇ ಖುದ್ದಾಗಿ ಆಲಿಯಾಗಾಗಿ ಪಿಡ್ಜಾ ಮಾಡಿ ಅವರಿಗೆ ಕಳಿಸಿದ್ದಾರೆ. ಶಿಲ್ಪಾ ಶೆಟ್ಟಿ ಕಳಿಸಿರುವ ಪಿಡ್ಜಾದ ಚಿತ್ರ ಹಂಚಿಕೊಂಡಿರುವ ನಟಿ ಆಲಿಯಾ ಭಟ್. ''ರುಚಿಕರವಾದ ಪಿಡ್ಜಾ ಕಳಿಸಿದ್ದಕ್ಕೆ ಧನ್ಯವಾದ ಶಿಲ್ಪಾ ಶೆಟ್ಟಿ. ಇಷ್ಟು ರುಚಿಯಾದ ಪಿಡ್ಜಾ ಅನ್ನು ಈವರೆಗೆ ನಾನು ತಿಂದಿರಲಿಲ್ಲ'' ಎಂದಿದ್ದಾರೆ.

  ಆಲಿಯಾರ ಇನ್‌ಸ್ಟಾಗ್ರಾಂ ಸ್ಟೋರಿಗೆ ಪ್ರತಿಕ್ರಿಯೆ ನೀಡಿರುವ ಶಿಲ್ಪಾ ಶೆಟ್ಟಿ, ''ನಿಮಗೆ ಪಿಡ್ಜಾ ಇಷ್ಟವಾಗಿದ್ದು ಖುಷಿ ಕೊಟ್ಟಿದೆ. ಇನ್ನಷ್ಟು ಪಿಡ್ಜಾಗಳನ್ನು ನಾನು ಕಳಿಸಲಿದ್ದೇನೆ. ತಿಂದು ಎಂಜಾಯ್ ಮಾಡು'' ಎಂದಿದ್ದಾರೆ. ಶಿಲ್ಪಾ ಶೆಟ್ಟಿ ಹಾಗೂ ಆಲಿಯಾ ಭಟ್ ಒಟ್ಟಿಗೆ ನಟಿಸಿಲ್ಲ ಆದರೆ ಇಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ.

  ಆಲಿಯಾ ಭಟ್, ನಟ ರಣ್ಬೀರ್ ಕಪೂರ್ ಅನ್ನು ಇದೇ ವರ್ಷದ ಏಪ್ರಿಲ್ ನಲ್ಲಿ ವಿವಾಹವಾಗಿದ್ದಾರೆ. ಆ ಬಳಿಕ ಆಲಿಯಾ, ತಾವು ತಾಯಿಯಾಗುತ್ತಿರುವ ವಿಷಯ ಘೋಷಿಸಿದರು. ಇಬ್ಬರೂ ಒಟ್ಟಿಗೆ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ವಿಶ್ವದಾದ್ಯಂತ ಸುಮಾರು 450 ಕೋಟಿ ರು ಹಣ ಗಳಿಸಿ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿದೆ.

  ಆಲಿಯಾ ಇತ್ತೀಚೆಗಷ್ಟೆ ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಹಾಲಿವುಡ್‌ ಸಿನಿಮಾ ಒಂದರಲ್ಲಿಯೂ ಆಲಿಯಾ ಇತ್ತೀಚೆಗೆ ನಟಿಸಿದ್ದಾರೆ. ತಾಯಿಯಾಗುತ್ತಿರುವ ಆಲಿಯಾ ನಟನೆಯಿಂದ ಬಿಡುವು ಪಡೆದಿದ್ದಾರೆ. ಆದರೂ ಅವರ ಕೈಯಲ್ಲಿ ಜೋಯಾ ಅಖ್ತರ್ ನಿರ್ದೇಶಿಸಲಿರುವ 'ಜೀ ಲೇ ಜರಾ', ಸಲ್ಮಾನ್ ಖಾನ್ ಜೊತೆಗೆ 'ಇನ್‌ಶಾ ಅಲ್ಲ', 'ತಕ್ತ್' ಸಿನಿಮಾಗಳಿವೆ.

  ಇನ್ನು ಶಿಲ್ಪಾ ಶೆಟ್ಟಿ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ ಜೊತೆಗೆ ರೋಹಿತ್ ಶೆಟ್ಟಿ ನಿರ್ದೇಶನದ ಪೋಲಿಸ್ ಇಲಾಖೆಯ ಕತೆಯುಳ್ಳ ವೆಬ್ ಸರಣಿಯಲ್ಲಿ ಸಹ ನಟಿಸುತ್ತಿದ್ದಾರೆ. ಇದೇ ವೆಬ್ ಸರಣಿಯ ಚಿತ್ರೀಕರಣದ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಸಹ. ಇದರ ಜೊತೆಗೆ 'ಸುಖಿ' ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದ ಸಿನಿಮಾ ಒಂದರಲ್ಲಿ ಐಟಂ ಹಾಡೊಂದರಲ್ಲಿ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  English summary
  Actress Shilpa Shetty send Pizza to Mom to be Alia Bhatt. Said more will come eat and enjoy.
  Monday, September 26, 2022, 13:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X