ಚಿಂತೆ ಬಿಟ್ಟು ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಶಿಲ್ಪಾ ಶೆಟ್ಟಿ
ನಟಿ ಶಿಲ್ಪಾ ಶೆಟ್ಟಿ ಈಗ ಮತ್ತೆ ತನ್ನ ಕೆಲಸ ಕಾರ್ಯಗಳಿಗೆ ಹಿಂತಿರುಗಿದ್ದಾರೆ. ಪತಿ ರಾಜ್ ಕುಂದ್ರಾ ನೀಲಿ ಚಿತ್ರಗಳ ನಿರ್ಮಾಣ ಕೇಸ್‌ನಲ್ಲಿ ಸಿಲುಕಿಕೊಂಡ ನಂತರದಲ್ಲಿ ಎಲ್ಲೂ ಕಾಣಿಸಿಕೊಂಡಿರದ ಶಿಲ್ಪಾ ಶೆಟ್ಟಿ ಈಗ ಪತಿ ಜಾಮೀನು ಪಡೆದು ಹೊರ ಬಂದ ನಂತರ ತನ್ನ ಸಹಜ ಜೀವನ ನಡೆಸುತ್ತಿದ್ದಾರೆ. ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಅವರು ಇತ್ತೀಚೆಗೆ ವಿಭಿನ್ನ ಗೆಟಪ್‌ನ ಹೇರ್ ಕಟ್ ಮಾಡಿಸಿಕೊಂಡು ಗಮನ ಸೆಳೆದಿದ್ರು .ಇದೀಗ ಮತ್ತೆ ತನ್ನ ಹಾಟ್ ಹಾಟ್ ಫೋಟೊಸ್ ಮೂಲಕ ಸುದ್ದಿಯಲ್ಲಿದ್ದಾರೆ.
ಶಿಲ್ಪಾ ಶೆಟ್ಟಿ ಹೆಸರಿಡದ ಬಾಲಿವುಡ್ ಪ್ರಾಜೆಕ್ಟ್ ಒಂದರಲ್ಲಿ ಅಭಿನಯಿಸ್ತಿದ್ದು, ಇದರ ಶೂಟಿಂಗ್‌ಗಾಗಿ ಗೋವಾಗೆ ತೆರಳಿದ್ದಾರೆ. ಗೋವಾದಲ್ಲಿ ಒಂದುವಾರಗಳ ಕಾಲ ಇರಲಿದ್ದು, ಅಲ್ಲಿ ತೆಗೆದ ಒಂದಷ್ಟು ಫೊಟೋಗಳನ್ನ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಂಪು ಬಣ್ಣದ ಈ ಡ್ರೆಸ್‌ನಲ್ಲಿ ಶಿಲ್ಪಾ ಶೆಟ್ಟಿ ಗ್ಲಾಮರ್ ಗೊಂಬೆಯಂತೆ ಕಂಗೊಳಿಸುತ್ತಿದ್ದು, ಅಭಿಮಾನಿಗಳು ಈ ಚಿತ್ರಗಳಿಗೆ ಫಿದಾ ಆಗಿದ್ದಾರೆ, ನಟಿಯನ್ನ ಹಾಡಿ ಹೊಗಳುತ್ತಿದ್ದಾರೆ. ಹಾಗೇ ಮುಂದಿನ ಸಿನಿಮಾ ಯಾವುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಎಲ್ಲೂ ಪ್ರತಿಕ್ರೀಯೆ ನೀಡದ ಅವರು ಶೂಟಿಂಗ್ ಬಿಡುವಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಇನ್ನು ಶೂಟಿಂಗ್ ಮುಗಿದ ನಂತರ ಗೋವಾದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುತ್ತಿರೊ ಶಿಲ್ಪಾ ಶೆಟ್ಟಿ, ಗೋವಾದ ಖ್ಯಾತ ಸೇಂಟ್ ಆಂಥೋನಿ ಚರ್ಚ್ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಡೀಯೋ ಮಾಡಿ ನಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಎಂತಹ ಅದ್ಭುತ ತಾಣಗಳಿವು ಎಂದು ಬರೆದುಕೊಂಡಿದ್ದಾರೆ.

ಇದಿಷ್ಟೇ ಅಲ್ಲದೆ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಸಾಕಷ್ಟು ಪಾಪ್ಯುಲರ್ ಆಗಿರೋ ಹಾಡಿಗೆ ರೀಲ್ಸ್ ಕೂಡ ಮಾಡಿದ್ದಾರೆ. ಇದೇ ಕೆಂಪುಡುಗೆ ತೊಟ್ಟು ನ್ಯಾನ್ಸಿ ನ್ಯಾನ್ಸಿ ಗೆಟೋ ಹಾಡಿಗೆ ಫನ್ನಿ ಯಾಗಿ ಕುಣಿದಿರೋ ಶಿಲ್ಪಾ ಶೆಟ್ಟಿ "ಇನ್ ದ ಗೆಟೋ" ಎಂದು ಬರೆದುಕೊಂಡಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಶಿಲ್ಪಾ ವರ್ಷನ್ ಆಫ್ ಗೆಟೋ ಎಂದು ಫುಲ್ ವೈರಲ್ ಮಾಡುತ್ತಿದ್ದಾರೆ. ಅಲ್ಲದೇ ತಮ್ಮ ತಮ್ಮ ವಾಲ್‌ನಲ್ಲಿ ಶೇರ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.
ಇನ್ನು ಪತಿ ರಾಜ್ ಕುಂದ್ರಾ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ಮೇಲೆ, ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ಮಾನಹಾನಿ ಮೊಕದ್ದಮೆ ಹೂಡಿದ್ದು, ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರ ವಕೀಲರು ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.


Click it and Unblock the Notifications











