ರಿಯಾಲಿಟಿ ಶೋ ಬಿಗ್‌ಬಾಸ್ ಮನೆಗೆ ಹೋಗಿದ್ದೇಕೆ, ಗುಟ್ಟು ಬಿಚ್ಚಿಟ್ಟ ಶಮಿತಾ ಶೆಟ್ಟಿ!

ಹಿಂದಿ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್'. ಬಾಲಿವುಡ್‌ನ ಬಾಕ್ಸ್‌ ಆಫೀಸ್ ಟೈಗರ್ ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್' ಕಾರ್ಯಕ್ರಮದ 15ನೇ ಆವೃತ್ತಿ ಮೊನ್ನೆಮೊನ್ನೆಯಷ್ಟೇ ಮುಕ್ತಾಯಗೊಂಡಿತು. 'ಬಿಗ್ ಬಾಸ್ 15' ಕಾರ್ಯಕ್ರಮಕ್ಕೆ ಅದ್ಧೂರಿ ತೆರೆಬಿತ್ತು. 'ಬಿಗ್ ಬಾಸ್ 15' ಕಾರ್ಯಕ್ರಮದಲ್ಲಿ ತೇಜಸ್ವಿ ಪ್ರಕಾಶ್ ವಿನ್ನರ್ ಆಗಿ ಹೊರಹೊಮ್ಮಿದರು.'ಬಿಗ್ ಬಾಸ್ 15' ಕಾರ್ಯಕ್ರಮದಲ್ಲಿ ತೇಜಸ್ವಿ ಪ್ರಕಾಶ್ ವಿನ್ನರ್ ಆಗಿರುವುದು ಕೆಲವರಿಗೆ ಖುಷಿ ತಂದಿದ್ದರೆ, ಕೆಲವರಿಗೆ ಬೇಸರ ತರಿಸಿದೆ. ಹಾಗ್ನೋಡಿದ್ರೆ, ಪ್ರತೀಕ್ ಸೆಹಜ್‌ಪಾಲ್, ಕರಣ್ ಕುಂದ್ರಾ ಮತ್ತು ಶಮಿತಾ ಶೆಟ್ಟಿ 'ಬಿಗ್ ಬಾಸ್ 15' ಗೆಲ್ಲುವ ವೀಕ್ಷಕರ ನೆಚ್ಚಿನ ಸ್ಪರ್ಧಿಗಳಾಗಿದ್ದರು. ಆದರೆ, ಈ ಮೂವರಿಗಿಂತ ಹೆಚ್ಚಿನ ಮತಗಳನ್ನು ಪಡೆದ ತೇಜಸ್ವಿ ಪ್ರಕಾಶ್ 'ಬಿಗ್ ಬಾಸ್ 15' ವಿನ್ನರ್ ಟ್ರೋಫಿಯನ್ನು ಎತ್ತಿ ಹಿಡಿದರು. ಇದರಿಂದ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ನಿರಾಶರಾಗಿದ್ದರು. ಸದ್ಯ ಶೋ ಮುಗಿಸಿ ಹೊರ ಬಂದಿರುವ ಶಮಿತಾ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಅಲ್ಲಿ ತಾನು ಯಾಕೆ ಬಿಗ್‌ ಬಾಸ್ ಶೋಗೆ ಹೋಗಿದ್ದೆ ಎಂಬ ಬಗ್ಗೆ ತಿಳಿಸಿದ್ದಾರೆ.

Recommended Video

ಶಮಿತಾ ಶೆಟ್ಟಿ ಇದು ಸ್ನೇಹಾನಾ ಪ್ರೇಮಾನಾ ಅಂತ ಕೇಳ್ತಿದ್ದಾರೆ ಅಭಿಮಾನಿಗಳು.

ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿ, ತನ್ನದೇ ಆದ ಸ್ಥಾನವನ್ನು ಪಡೆದು ದೊಡ್ಡ ಹೆಸರನ್ನು ಮಾಡಿರುವ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂತಹ ಸ್ಟಾರ್ ಡಂ ಇದ್ದ ನಟಿ ಹಾಗೂ ಅವರ ಕುಟುಂಬದ ಬಗ್ಗೆ ಕಳೆದ ವರ್ಷ ಮಾಧ್ಯಮಗಳಲ್ಲಿ ಬಹಳ ದೊಡ್ಡ ಸುದ್ದಿಯಾಯಿತು, ಸಾರ್ವಜನಿಕವಾಗಿ ಅವರ ಕುಟುಂಬದ ಬಗ್ಗೆ ಚರ್ಚೆಗಳು ನಡೆದವು, ಟೀಕೆ ಟಿಪ್ಪಣಿಗಳು ಕೇಳಿ ಬಂದವು. ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದ್ದು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ. ಏಕೆಂದರೆ ಅವರ ಮೇಲೆ ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆಯ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣ ದೊಡ್ಡ ಸುದ್ದಿಯಾಗಿ ರಾಜ್ ಕುಂದ್ರಾ ಸ್ವಲ್ಪ ದಿನಗಳ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಆ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಮಾದ್ಯಮಗಳು, ಸಿನಿಮಾ ಹಾಗೂ ಟಿವಿ ಶೋ ಗಳಿಂದ ಸಹಾ ದೂರವಾದರು. ಎಲ್ಲೂ ಯಾವುದೇ ಸಂದರ್ಶನ ನೀಡಲಿಲ್ಲ. ಅದು ಅವರಿಗೆ ಒಂದು ರೀತಿಯಲ್ಲಿ ಪರೀಕ್ಷೆಯ ದಿನಗಳು, ಕಠಿಣವಾದ ದಿನಗಳು ಅಥವಾ ಒಂದರ್ಥದಲ್ಲಿ ಸವಾಲಿನ ದಿನಗಳಾಗಿ ಪರಿಣಮಿಸಿತ್ತು. ಶಿಲ್ಪಾ ಹೀಗೆ ಸಂಕಷ್ಟದಲ್ಲಿ ಇರುವಾಗಲೇ ಅವರ ತಂಗಿ ಶಮಿತಾ ಬಿಗ್ ಬಾಸ್ ಓಟಿಟಿ ಸರಣಿಯ ಮೊದಲ ಆವೃತ್ತಿಗೆ ಒಪ್ಪಿಗೆ ನೀಡಿದರು.

Shilpa Shetty Sister Shamita Shetty Explains Why She Entered Bigg Boss

ಅಕ್ಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವಾಗ ಅಕ್ಕನ ಜೊತೆಗೆ ನಿಲ್ಲದೇ, ಆಕೆಯ ಕಷ್ಟದಲ್ಲಿ ಭಾಗಿಯಾಗದೇ ಶಮಿತಾ ಶೆಟ್ಟಿ ಬಿಗ್ ಬಾಸ್ ಒಪ್ಪಿಕೊಂಡು ಶೋ ಗೆ ಎಂಟ್ರಿ ನೀಡಿದ್ದು, ಓಟಿಟಿ ಮುಗಿದ ಕೂಡಲೇ ಮತ್ತೆ ಟಿವಿಯ ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಈ ವಿಚಾರವಾಗಿ ಶಮಿತಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಬಿಗ್ ಬಾಸ್ 15 ಮುಗಿದ ಮೇಲೆ ಸಂದರ್ಶನಗಳನ್ನು ನೀಡುತ್ತಿರುವ ಶಮಿತಾ ತಾನು ಅಕ್ಕನ ಜೊತೆಗಿರದೇ ಬಿಗ್ ಬಾಸ್‌ಗೆ ಒಪ್ಪಿದ್ದು ಏಕೆ ಎನ್ನುವುದನ್ನು ವಿವರಿಸಿದ್ದಾರೆ.‌

Shilpa Shetty Sister Shamita Shetty Explains Why She Entered Bigg Boss

ಶಮಿತಾ ಮಾತನಾಡುತ್ತಾ, "ಆ ಸಂದರ್ಭದಲ್ಲಿ ನಾನು ಅಕ್ಕನ ಜೊತೆಗೆ ಇರಲಿಲ್ಲ ಎನ್ನುವ ಬೇಸರ ಖಂಡಿತ ಇದೆ. ಬಿಗ್ ಬಾಸ್ ಓಟಿಟಿಯಲ್ಲಿ ಇರುವಾಗ ನನಗೆ ಬಹಳ ಚಿಂತೆ ಕಾಡಿತ್ತು. ನಾನು ಆಕೆಯ ಜೊತೆಗೆ ಇರ ಬೇಕಿತ್ತು. ನನ್ನ ಮತ್ತು ಶಿಲ್ಪಾ ನಡುವೆ ಉತ್ತಮ ಬಾಂಧವ್ಯ ಇದೆ. ನಮಗೆ ಕಷ್ಟಗಳು ಎದುರಾದಾಗಲೆಲ್ಲಾ ನಾವು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇವೆ. ಅಕ್ಕನ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ" ಎಂದು ಶಮಿತಾ ಹೇಳಿದ್ದು, ಅನಂತರ ತನ್ನ ನಿರ್ಣಯದ ಹಿಂದಿನ ಕಾರಣವನ್ನು ಸಹಾ ವಿವರಿಸಿದ್ದಾರೆ.

ಶಮಿತಾ ಶೆಟ್ಟಿ ಅವರು, "ಟ್ರೋಲ್ ಮಾಡಿದ್ದು ಬಹಳ ಅನ್ಯಾಯ, ಬಾವನ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಹಾಗಾಗಿ ಬಿಗ್ ಬಾಸ್‌ಗೆ ಹೋಗುವುದು ಸರಿ ಎನಿಸಿತ್ತು. ಕೋವಿಡ್ ಸಮಯದಲ್ಲಿ ಅನೇಕರು ಕೆಲಸವಿಲ್ಲದೇ ಕುಳಿತಿದ್ದರು. ಆಗ ನನಗೆ ಸಿಕ್ಕ ಕೆಲಸವನ್ನು ತಿರಸ್ಕಾರ ಮಾಡಲು ನನಗೆ ಇಷ್ಟ ಇರಲಿಲ್ಲ. ಅಲ್ಲದೇ ನಾನು ಹಣವನ್ನು ಸಂಪಾದನೆ ಮಾಡಲೇಬೇಕಿತ್ತು" ಎಂದು ಶಮಿತಾ ಶೆಟ್ಟಿ ತಾವು ಬಿಗ್ ಬಾಸ್‌ಗೆ ಹೋಗುವ ನಿರ್ಧಾರ ಮಾಡಿದ್ದರ ಕಾರಣವನ್ನು ವಿವರಿಸಿದ್ದಾರೆ.

More from Filmibeat

English summary
Shilpa Shetty sister Shamita Shetty explains why she entered Bigg Boss during covid time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X