For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾಗೆ ಜಾಮೀನು: ಶಿಲ್ಪಾ ಶೆಟ್ಟಿ ಹಂಚಿಕೊಂಡ ಸುಂದರ ಸಂದೇಶ

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ನಿನ್ನೆ ಜಾಮೀನು ದೊರೆತಿದೆ.

  ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು, ಸತತ 64 ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ಇತ್ತೀಚೆಗಷ್ಟೆ ಮುಂಬೈ ಪೊಲೀಸರು ರಾಜ್ ಕುಂದ್ರಾ ಹಾಗೂ ಪ್ರಕರಣದ ಇನ್ನಿತರ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು, ಅದರ ಬೆನ್ನಲ್ಲೆ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು ಕುಂದ್ರಾ, ಅಂತೆಯೇ ನ್ಯಾಯಾಲಯವು ಕುಂದ್ರಾಗೆ ಜಾಮೀನು ಮಂಜೂರು ಮಾಡಿದೆ.

  ರಾಜ್ ಕುಂದ್ರಾಗೆ ಜಾಮೀನು ದೊರೆತಿರುವುದು ಪತ್ನಿ ಶಿಲ್ಪಾ ಶೆಟ್ಟಿಗೆ ಸಹಜವಾಗಿಯೇ ಸಂತಸವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸದ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ, ಪೋಸ್ಟ್‌ ಮೂಲಕ ಮುಂದಿನ ದಿನಗಳ ಬಗ್ಗೆ ಆಶಾ ಭಾವನೆಯನ್ನು ಶಿಲ್ಪಾ ವ್ಯಕ್ತಪಡಿಸಿದ್ದಾರೆ.

  ''ಕೆಟ್ಟ ಚಂಡಮಾರುತದ ಬಳಿಕ ಸುಂದರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಕಾಮನಬಿಲ್ಲುಗಳೇ ಸಾಕ್ಷಿ'' ಎಂಬ ಸುಂದರ ಸಾಲುಗಳನ್ನು ಒಳಗೊಂಡ ಚಿತ್ರವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಾಗಿ ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಹಾಗೂ ರಾಜ್ ಕುಂದ್ರಾ ಜೀವನದಲ್ಲಾದ ಕೆಟ್ಟ ಘಟನೆ ಬಳಿಕ ಸುಂದರ ದಿನಗಳು ಮುಂದೆ ಇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

  ವಿಚ್ಛೇದನದ ವದಂತಿಗಳು ಸುಳ್ಳು?

  ವಿಚ್ಛೇದನದ ವದಂತಿಗಳು ಸುಳ್ಳು?

  ರಾಜ್ ಕುಂದ್ರಾ ಬಂಧನವಾದ ಬಳಿಕ ಶಿಲ್ಪಾ ಹಾಗೂ ರಾಜ್ ಕುಂದ್ರಾ ದೂರವಾಗುತ್ತಾರೆ. ಶಿಲ್ಪಾ ಶೆಟ್ಟಿ, ಕುಂದ್ರಾಗೆ ವಿಚ್ಛೇದನ ನೀಡಲು ಚಿಂತನೆ ನಡೆಸಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಶಿಲ್ಪಾ ಶೆಟ್ಟಿ ಹಾಕಿರುವ ಪೋಸ್ಟ್‌ನ ಒಳಾರ್ಥ ಗಮನಿಸುವುದಾದರೆ ವಿಚ್ಛೇದನದ ನಿರ್ಧಾರ ಸುಳ್ಳೆಂದು ಎನಿಸುತ್ತದೆ. ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಜೊತೆಯಾಗಿಯೇ ಮುಂದಿನ ದಿನಗಳನ್ನು ಎದುರಿಸಲಿದ್ದಾರೆ, ಕಾನೂನು ಹೋರಾಟದಲ್ಲಿ ರಾಜ್ ಕುಂದ್ರಾಗೆ ಶಿಲ್ಪಾರ ನೈತಿಕ ಬೆಂಬಲ ದೊರಕಲಿದೆ ಎಂದು ಊಹಿಸಬಹುದಾಗಿದೆ.

  ಶಮಿತಾ ಶೆಟ್ಟಿ ಮನೆಗೆ ಬಂದಿದ್ದಾರೆ

  ಶಮಿತಾ ಶೆಟ್ಟಿ ಮನೆಗೆ ಬಂದಿದ್ದಾರೆ

  ಇಷ್ಟು ದಿನ ದುಃಖದಲ್ಲಿದ್ದ ಶಿಲ್ಪಾ ಶೆಟ್ಟಿಗೆ ಕಳೆದ ಮೂರು ದಿನದಲ್ಲಿ ಸತತ ಸಂತಸದ ಸುದ್ದಿಗಳು ಎದುರಾಗುತ್ತಿವೆ. ಬಿಗ್‌ಬಾಸ್‌ ಒಟಿಟಿಗೆ ಹೋಗಿದ್ದ ಶಿಲ್ಪಾರ ಮುದ್ದಿನ ಸಹೋದರಿ ಶಮಿತಾ ಶೆಟ್ಟಿ ಮನೆಗೆ ವಾಪಸ್ ಮರಳಿದ್ದಾರೆ. ಶಮಿತಾ ಬಿಗ್‌ಬಾಸ್‌ ಒಟಿಟಿಯಲ್ಲಿ ಗೆಲ್ಲಲಿಲ್ಲವಾದರೂ ಒಳ್ಳೆಯ ಸ್ಪರ್ಧೆಯನ್ನೇ ಇತರ ಸ್ಪರ್ಧಿಗಳಿಗೆ ಒಡ್ಡಿದರು. ಶಮಿತಾ ಶೆಟ್ಟಿ ಮನೆಗೆ ವಾಪಸ್ಸಾದ ಖುಷಿಯ ಸುದ್ದಿಯನ್ನು ಚಿತ್ರದೊಂದಿಗೆ ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದರು. ''ಈ ಅಪ್ಪುಗೆಯನ್ನು ನೀನು ಸುಲಭಕ್ಕೆ ತಪ್ಪಿಸಿಕೊಳ್ಳಲಾರೆ'' ಎಂದು ಕ್ಯಾಪ್ಷನ್ ಬರೆದು ತಂಗಿಯನ್ನು ತಬ್ಬಿಕೊಂಡಿರುವ ಚಿತ್ರವನ್ನು ಶಿಲ್ಪಾ ಹಂಚಿಕೊಂಡಿದ್ದರು.

  ನನ್ನ ವಿರುದ್ಧ ಸಾಕ್ಷ್ಯಗಳಿಲ್ಲ ಎಂದಿದ್ದ ಕುಂದ್ರಾ

  ನನ್ನ ವಿರುದ್ಧ ಸಾಕ್ಷ್ಯಗಳಿಲ್ಲ ಎಂದಿದ್ದ ಕುಂದ್ರಾ

  ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಇತರ ಕೆಲವು ಆರೋಪಿಗಳ ವಿರುದ್ಧ 1400 ಪುಟಗಳಿಗೂ ಹೆಚ್ಚಿನ ದೋಷಾರೋಪ ಪಟ್ಟಿಯನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಚಾರ್ಜ್‌ ಶೀಟ್ ದಾಖಲಾಗುತ್ತಿದ್ದಂತೆ ಜಾಮೀನಿಗೆ ಮನವಿ ಸಲ್ಲಿಸಿದ ರಾಜ್ ಕುಂದ್ರಾ, ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲದೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದರು. ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಹೇಳಿಕೆಗಳೇ ಪ್ರಧಾನವಾಗಿದ್ದವು ಹಾಗಾಗಿ ರಾಜ್ ಕುಂದ್ರಾಗೆ ಕೂಡಲೇ ಜಾಮೀನು ಮಂಜೂರು ಮಾಡಲಾಗಿದೆ.

  ಹೇಳಿಕೆ ನೀಡಿರುವ ಶಿಲ್ಪಾ ಶೆಟ್ಟಿ

  ಹೇಳಿಕೆ ನೀಡಿರುವ ಶಿಲ್ಪಾ ಶೆಟ್ಟಿ

  ತಮ್ಮ ಪತಿ ರಾಜ್ ಕುಂದ್ರಾರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಪೊಲೀಸರ ಎದುರು ಹೇಳಿಕೆ ನೀಡಿದ್ದ ಶಿಲ್ಪಾ ಶೆಟ್ಟಿ, ''ನಾನು ವಿಯಾನ್ ಕಂಪೆನಿಯಿಂದ 2020 ರಲ್ಲಿಯೇ ರಾಜೀನಾಮೆ ನೀಡಿ ಹೊರಬಂದಿದ್ದೆ. ವೈಯಕ್ತಿಕ ಕಾರಣಗಳಿಂದಾಗಿ ನಾನು ರಾಜೀನಾಮೆ ನೀಡಿದ್ದೆ. ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿ ಇದ್ದಿದ್ದರಿಂದ ರಾಜ್ ಕುಂದ್ರಾರ ವ್ಯವಹಾರಗಳ ಬಗ್ಗೆ ನನಗೇನೂ ತಿಳಿದಿರಲಿಲ್ಲ. ಗೆಹನಾ ವಸಿಷ್ಠ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದಾಗ ನಾನು ಆ ಬಗ್ಗೆ ವಿಚಾರಿಸಿದ್ದೆ. ಆಕೆ ಮತ್ತು ಕೆಲವರು ಅಶ್ಲೀಲ ವಿಡಿಯೋ ನಿರ್ಮಾಣ ಮಾಡಿದ ಕಾರಣ ಬಂಧನಕ್ಕೆ ಒಳಗಾಗಿದ್ದಾರೆ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದಿದ್ದರು'' ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

  English summary
  After Raj Kundra gets bail Shilpa Shetty shares a social media post that saying beautiful things happen after a bad storm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X