For Quick Alerts
  ALLOW NOTIFICATIONS  
  For Daily Alerts

  ಈ ಕಂಡೀಶನ್ ಗೆ ಒಪ್ಪಿದರೆ ಭಾವಿ ಸೊಸೆಗೆ ವಜ್ರ ಗಿಫ್ಟ್ ಕೊಡ್ತಾರಂತೆ ಶಿಲ್ಪಾ ಶೆಟ್ಟಿ

  |

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಆಭರಣ ಎಂದರೆ ತುಂಬಾ ಇಷ್ಟ. ಶಿಲ್ಪಾ ಶೆಟ್ಟಿ ಬಳಿ ಸಾಕಷ್ಟು ಜ್ಯುವೆಲ್ಲರಿ ಕಲೆಕ್ಷನ್ ಗಳಿವೆಯಂತೆ. ಆಭರಣ ಪ್ರಿಯೆ ಶಿಲ್ಪಾ, ತನ್ನ ಸೊಸೆಗೂ ಈಗಲೇ ಆಭರಣ ಖರೀದಿಗೆ ಮುಂದಾಗಿದ್ದಾರೆ. ಹೌದು, ಶಿಲ್ಪಾ ಶೆಟ್ಟಿ ಪುತ್ರ ವಿಯಾನ್ ಭಾವಿ ಪತ್ನಿಗೆ ಉಡುಗೊರೆ ನೀಡಲು 20 ಕ್ಯಾರೆಟ್ ವಜ್ರವನ್ನು ಖರೀದಿಸಿಟ್ಟಿದ್ದಾರೆ.

  ಶಿಲ್ಪಾ ಶೆಟ್ಟಿ ಬಳಿ ಇರುವ ವಜ್ರವನ್ನು ಸೊಸೆ ಉಡುಗೊರೆಯಾಗಿ ಪಡೆಯಬೇಕೆಂದರೆ ಒಂದು ಕಂಡೀಷನ್ ಹಾಕಿದ್ದಾರೆ. 20 ಕ್ಯಾರೆಟ್ ವಜ್ರವನ್ನು ಪಡೆಯಬೇಕೆಂದರೆ, ಪುತ್ರ ವಿಯಾನ್ ಪತ್ನಿ ಶಿಲ್ಪಾ ಶೆಟ್ಟಿ ಜೊತೆ ಚೆನ್ನಾಗಿರಬೇಕಂತೆ. ಈ ಬಗ್ಗೆ ಶಿಲ್ಪಾ ಶೆಟ್ಟಿ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

  ಸೋನು ಸೂದ್‌ ಗೆ ಶಿಲ್ಪಾ ಶೆಟ್ಟಿ ಮಗ ಸಲ್ಲಿಸಿದ ಗೌರವ ಅಭಿನಂದನಾರ್ಹಸೋನು ಸೂದ್‌ ಗೆ ಶಿಲ್ಪಾ ಶೆಟ್ಟಿ ಮಗ ಸಲ್ಲಿಸಿದ ಗೌರವ ಅಭಿನಂದನಾರ್ಹ

  'ನಿನ್ನ ಹೆಂಡತಿ ನನಗೆ ಒಳ್ಳೆಯವಳಾಗಿದ್ದರೆ ಮಾತ್ರ ಅವಳು ನನ್ನ 20 ಕ್ಯಾರೆಟ್ ವಜ್ರವನ್ನು ಉಡುಗೊರೆಯಾಗಿ ಪಡೆಯಬಹುದು ಎಂದು ನಾನು ಯಾವಾಗಲು ನನ್ನ ಮಗನಿಗೆ ಹೇಳುತ್ತಿರುತ್ತೇನೆ. ಇಲ್ಲವಾದರೆ ಅವಳು ಕೆಲವು ಸಣ್ಣ ಆಭರಣಗಳನ್ನು ಪಡೆಯಬಹುದು' ಎಂದು ಹೇಳಿದ್ದಾರೆ.

  ಇನ್ನು 'ನೀವು ತನ್ನ ಇನ್ಸ್ಟಾಗ್ರಾಮ್ ನೋಡಿದರೆ ನಾನು ಮೊದಲು ನನ್ನನ್ನು ತಾಯಿ ಎಂದು ವ್ಯಾಖ್ಯಾನಿಸುತ್ತೇನೆ. ಏಕೆಂದರೆ ಅದು ಯಾವಾಗಲು ಆದ್ಯತೆಯಾಗಿರುತ್ತೆ' ಎಂದು ಶಿಲ್ಪಾ ಹೇಳಿದ್ದಾರೆ.

  ಶಿಲ್ಪಾ ಶೆಟ್ಟಿ 2009ರಲ್ಲಿ ಉದ್ಯಮಿ ರಾಜ್ ಕುಂದ್ರ ಜೊತೆ ವಿವಾಬಂಧನಕ್ಕೆ ಒಳಗಾಗಿದ್ದಾರೆ. ಈ ಸುಂದರ ದಂಪತಿಗೆ ವಿಯಾನ್ ಮತ್ತು ಸಮಿಷಾ ಎನ್ನುವ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ಎರಡನೇ ಮಗುವನ್ನು ನಟಿ ಶಿಲ್ಪಾ ಶೆಟ್ಟಿ ದಂಪತಿ ಈ ವರ್ಷದ ಆರಂಭದಲ್ಲಿ ಸ್ವಾಗತ ಮಾಡಿದ್ದಾರೆ.

  ಇದೇ ಸಂದರ್ಶನದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಮದುವೆ ಪ್ರಪೋಸ್ ಮಾಡಿರುವ ಬಗ್ಗೆಯೂ ವಿವರಿಸಿದ್ದಾರೆ. 5 ಕ್ಯಾರೇಟ್ ವಜ್ರದ ಉಂಗುರವನ್ನು ನೀಡಿ ರಾಜ್ ಕುಂದ್ರ ಪ್ರಪೋಸ್ ಮಾಡಿರುವುದಾಗಿ ಬಹಿರಂಗ ಪಡಿಸಿದ್ದಾರೆ.

  Vijay Deverakonda ತಮ್ಮನಿಗೋಸ್ಕರ ಸಾಲು ಸಾಲು ಟ್ವೀಟ್ ಮಾಡಿದ Rashmika | Filmibeat Kannada

  ಶಿಲ್ಪಾ ಶೆಟ್ಟಿ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇರುವ ಶಿಲ್ಪ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಫಿಟ್ ನೆಸ್ ಕಡೆ ಹೆಚ್ಚು ಗಮನ ಕೊಡುವ ಶಿಲ್ಪಾ ಶೆಟ್ಟಿ, ಯೋಗ, ವರ್ಕೌಟ್, ಡಯಟ್ ಅಂತ ಸದಾ ಬ್ಯುಸಿಯಾಗಿರುತ್ತಾರೆ.

  English summary
  Bollywood Actress Shilpa Shetty will give 20 carat diamond to her daughter in law only if She meets with Condition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X