ಪ್ಲೀಸ್‌ ನನ್ನ ನಂಬಿ, ಆಡಿಷನ್ ನೆಪದಲ್ಲಿ ಆ ವ್ಯಕ್ತಿ ನನ್ನ ಮೇಲೆ ಎಗರಿದ್ದ ಎಂದ ನಟಿ..!

ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂ. ಆರೇಳು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಮೀಟೂ ಅಭಿಯಾನದಡಿ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು. ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಇತ್ಯಾದಿ ಇತ್ಯಾದಿ ಆರೋಪಗಳೆಲ್ಲವೂ ಬಣ್ಣದ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಆದರೆ ಆ ನಂತರ ಆ ವಿಷಯ ಹಾಗೇ ತಣ್ಣಗಾಯಿತು.

Shilpa Shinde accuses a Bollywood filmmaker of early career harassment and being told to seduce him

ಆದರೆ ಈಗ ಮಲಯಾಳಂ ಚಿತ್ರರಂಗದ ಕುರಿತು ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಬಿರುಗಾಳಿ ಎದ್ದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾ‍ಷೆಯಲ್ಲಿ ಕೂಡ ಕಾಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಸೇರಿಕೊಂಡಿರುವ ಶಿಲ್ಪಾ ಶಿಂಧೆ ತಮ್ಮ ಕರಾಳ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆಡಿಷನ್ ನೆಪದಲ್ಲಿ ನಿರ್ಮಾಪಕ ಕೂಡ ಆಗಿದ್ದ ಆ ನಟ ನನಗೆ ಕೊಡಬಾರದ ಕಾಟವನ್ನೆಲ್ಲ ನೀಡಿದ್ದ ಎಂದು ಬಿಕ್ಕಿದ್ದಾರೆ.

ಅದು 98-99ನೇ ಇಸ್ವಿಯ ಆಸು ಪಾಸಿನ ಸಮಯ. ನಾನು ಆಗ ತಾನೇ ಕನಸೊತ್ತು ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದ್ದೆ. ಇದೇ ಸಂದರ್ಭದಲ್ಲಿ ಆಡಿಷನ್ ನೀಡಲು ಹೋದಾಗ ಆ ವ್ಯಕ್ತಿ ನನ್ನ ಕೈಯಲ್ಲಿ ಡ್ರೆಸ್‌ವೊಂದನ್ನು ನೀಡಿ ಹಾಕಿಕೊಳ್ಳುವಂತೆ ಹೇಳಿದ ಎಂದಿರುವ ಶಿಲ್ಪಾ ಶಿಂಧೆ, ನಾನು ನಿನ್ನ ಬಾಸ್, ನನ್ನನ್ನೂ ಮೋಹಿಸು ಇದೇ ನಿನ್ನ ಸನ್ನಿವೇಶ ಎಂದು ಹೇಳಿದ ಎಂದಿದ್ದಾರೆ. ನನ್ನಲ್ಲಿ ಇನ್ನೂ ಆಗ ಮುಗ್ದತೆ ಇತ್ತು. ಕಣ್ತುಂಬ ಕನಸುಗಳಿದ್ದವು. ಹೀಗಾಗಿ ಆ ಬಟ್ಟೆಯನ್ನು ಹಾಕಿಕೊಳ್ಳಲು ನಿರಾಕರಸಿದ ನಾನು, ಅವರು ಹೇಳಿದಂತೆಯೇ ಪ್ರಚೋದನಕಾರಿ ಸನ್ನಿವೇಶದಲ್ಲಿ ಅಭಿನಯಿಸಿದೆ ಎಂದಿರುವ ಶಿಲ್ಪಾ ಶಿಂಧೆ ಆ ನಂತರ ಆ ವ್ಯಕ್ತಿ ನನ್ನ ಮೇಲೆ ಎಗರಲು ಬಂದ, ಇದರಿಂದ ಬೆಚ್ಚಿ ಬಿದ್ದ ನಾನು ಅವನನ್ನು ದೂರ ತಳ್ಳಿ ಅಲ್ಲಿಂದ ಓಡಿ ಬಂದೆ ಎಂದು ಹೇಳಿದ್ದಾರೆ. ಹೊರಗಡೆ ನಿಂತ ಸೆಕ್ಯೂರಿಟಿ ಗಾರ್ಡ್‌ಗೆ ನನ್ನ ಪರಿಸ್ಥಿತಿ ಅರ್ಥವಾಯಿತು. ಹೀಗಾಗಿ ಆ ಸೆಕ್ಯೂರಿಟಿ ಕೂಡಲೇ ಇಲ್ಲಿಂದ ಓಡಿ ಹೋಗಿ ಎಂದು ನನಗೆ ಹೇಳಿದ್ದ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಶಿಲ್ಪಾ ಶಿಂಧೆ.

shilpa-shinde-accuses-a-bollywood-filmmaker-of-early-career-harassment-and-being-told-to-seduce-him

ಇನ್ನೂ ಆ ವ್ಯಕ್ತಿ ಕೇವಲ ನಿರ್ಮಾಪಕನಷ್ಟೇ ಆಗಿರಲಿಲ್ಲ ನಟ ಕೂಡ ಆಗಿದ್ದ ಈ ಕಾರಣಕ್ಕೆ ನಾನು ಆ ಸನ್ನಿವೇಶ ಮಾಡಲು ಒಪ್ಪಿಕೊಂಡಿದ್ದೇ ಎಂದಿರುವ ಶಿಲ್ಪಾ ಶಿಂಧೆ, ನಾನು ಸುಳ್ಳು ಹೇಳ್ತಿಲ್ಲ ದಯವಿಟ್ಟು ನನ್ನ ನಂಬಿ ಎಂದು ಹೇಳಿದ್ದಾರೆ. ಆ ವ್ಯಕ್ತಿ ಯಾರೆಂದು ನಾನು ಹೇಳಲಾರೆ, ಯಾಕೆಂದರೆ ಅವನಿಗೆ ಎದೆಯೆತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ. ನಾನು ಹೆಸರು ಹೇಳುವುದರಿಂದ ಆ ಮಕ್ಕಳಿಗೆ ತೊಂದರೆಯಾಗಬಹುದು ಎಂದು ಹೇಳಿದ್ದಾರೆ. ಕೆಲ ವರ್ಷಗಳ ನಂತರ ಆ ವ್ಯಕ್ತಿ ನನಗೆ ಮತ್ತೆ ಸಿಕ್ಕಿದ್ದ ಆದರೆ ಆ ವ್ಯಕ್ತಿ ನನ್ನನ್ನು ಗುರುತು ಹಿಡಿಯಲಿಲ್ಲ ಎಂದಿರುವ ಶಿಲ್ಪಾ ಶಿಂಧೆ ಈ ಬಾರಿ ತುಂಬಾ ನಯವಾಗಿ ಆತ ಮಾತನಾಡಿದ್ದ ಎಂದಿದ್ದಾರೆ. ನನಗೆ ಅವಕಾಶ ನೀಡುವುದಾಗಿ ಕೂಡ ಹೇಳಿದ್ದ ಆದರೆ ನಾನು ಆ ಅವಕಾಶವನ್ನು ಅಲ್ಲಿಯೇ ತಿರಸ್ಕರಿಸಿದೆ ಎಂದಿದ್ದಾರೆ. ನಾನು ಯಾರು, ಆತ ನನ್ನ ಜೊತೆ ಮಾಡಿದ್ದೇನು ಎನ್ನುವುದು ಆ ವ್ಯಕ್ತಿಗೆ ಈಗ ನಿಜವಾಗಿಯೂ ನೆನಪಿಲ್ಲ ಎಂದು ಕೂಡ ಹೇಳಿದ್ದಾರೆ ಶಿಲ್ಪಾ ಶಿಂಧೆ.

More from Filmibeat

Read more about: casting couch actress me too
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X