ಕೋವಿಡ್-19 ಲಸಿಕೆ ಪಡೆದ ಮೊದಲ ಬಾಲಿವುಡ್ ನಟಿ ಶಿಲ್ಪಾ ಶಿರೋಡ್ಕರ್
ಕೋವಿಡ್-19 ಲಸಿಕೆಯನ್ನು ಹಾಕಲು ಭಾರತ ಸಜ್ಜಾಗುತ್ತಿದೆ. ಆದರೆ ಆಗಲೇ ಬಾಲಿವುಡ್ ನಟಿಯೊಬ್ಬರು ಕೋವಿಡ್-19 ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಹೌದು, ನಟಿ ಶಿಲ್ಪಾ ಶಿರೋಡ್ಕರ್ ಕೊರೊನಾ ಲಸಿಕೆ ಪಡೆಯುವ ಮೂಲಕ ಮೊದಲ ಬಾಲಿವುಡ್ ನಟಿ ಎನ್ನುವ ಪ್ರಸಿದ್ಧಿ ಪಡೆದಿದ್ದಾರೆ.
Recommended Video
47 ವರ್ಷದ ನಟಿ ಶಿಲ್ಪಾ ಶಿರೋಡ್ಕರ್ ದುಬೈನಲ್ಲಿ ವಾಸವಾಗಿದ್ದಾರೆ. ಲಸಿಕೆ ಪಡೆದ ಬಗ್ಗೆ ನಟಿ ಶಿಲ್ಪಾ ಶಿರೋಡ್ಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಎಡಗೈ ತೋಳಿಗೆ ಲಸಿಕೆ ಹಾಕಿಸಿಕೊಂಡಿರುವ ಫೋಟೋವನ್ನು ಶಿಲ್ಪಾ ಶೇರ್ ಮಾಡಿದ್ದಾರೆ. ಜೊತೆಗೆ 'ಲಸಿಕೆ ಮತ್ತು ಸರಕ್ಷಿತ. ಧನ್ಯವಾದಗಳು ಯುಎಇ' ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಶಿಲ್ಪಾ ಶಿರೋಡ್ಕರ್ ಟಾಲಿವುಡ್ ನ ಖ್ಯಾತ ನಟ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರ ಸಹೋದರಿ. 1989ರಲ್ಲಿ ಬಾಲಿವುಡ್ ಪ್ರವೇಶ ಮಾಡಿದ ನಟಿ ಶಿಲ್ಪಾ ಬ್ರಾಷ್ಟಾಚಾರ್ ಸಿನಿಮಾ ಮೂಲಕ ಬೆಳ್ಳಿ ಪರದೆ ಮೇಲೆ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

90ರ ದಶಕದ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಶಿಲ್ಪಾ ಶಿರೋಡ್ಕರ್, ಆಖೇಂನ್, ಕನ್ಹಯ್ಯ್, ಯೋಧಾ, ಹಮ್, ಗೋಪಿ ಕಿಶನ್ ಸೇರಿದಂತೆ ಅನೇರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿಲ್ಪಾ ಶಿರೋಡ್ಕರ್ ಕೊನೆಯದಾಗಿ ಗನ್ಸ್ ಆಫ್ ಬನಾರಸ್ ಸಿನಿಮಾದಲ್ಲಿ ನಟಿಸಿದ್ದಾರೆ. 2014ರಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ವಿನೋದ್ ಖನ್ನಾ ಅವರು ಕಾಣಿಸಿಕೊಂಡಿದ್ದರು.
2000ನೇ ಇಸವಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶಿಲ್ಪಾ ಬಳಿಕ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಉದ್ಯಮಿ ರಂಜಿತ್ ಅವರವನ್ನು ಮದುವೆಯಾದ ಶಿಲ್ಪಾ ಬಳಿಕ ದುಬೈನಲ್ಲಿ ನೆಲಿಸಿದ್ದಾರೆ. 2013ರಲ್ಲಿ ಮತ್ತೆ ಬಾಲಿವುಡ್ ಗೆ ಮರಳಿದ ಶಿಲ್ಪಾ ಎರಡೂ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











