'ಸೋನಾಲಿ ಬೇಂದ್ರೆ' ಕಿಡ್ನಾಪ್‌ಗೆ 'ಶೋಯೆಬ್ ಅಖ್ತರ್' ಸ್ಕೆಚ್ ; ನಟಿಯ 'ಮಾದಕ'ತೆಗೆ 'ಮಾರಕ' ಬೌಲರ್ ಕ್ಲೀನ್ ಬೋಲ್ಡ್ ?
ರಾವಲ್ಫಿಂಡಿ ಎಕ್ಸ್ ಪ್ರೆಸ್ ಎಂದೇ ಖ್ಯಾತಿಯನ್ನ ಗಳಿಸಿದವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್. ಇಷ್ಟೇ ಅಲ್ಲ ಕ್ರಿಕೆಟ್ ಮೈದಾನದಲ್ಲಿ ಇರಲಿ ಅಥವಾ ವ್ಯೆಯಕ್ತಿಕ ವಿಚಾರದಲ್ಲಿ ಇರಲಿ ವಿವಾದಗಳ ಹೊರತಾಗಿ ಬದುಕುವ ಹಂಬಲ ವಿಲ್ಲದವರು ಎಂಬ ಕುಖ್ಯಾತಿಯೂ ಇವ್ರದ್ದೇ. ಕ್ರಿಕೆಟ್ ಕ್ರೀಡಾಂಗಣದಲ್ಲಿ ಹತ್ತು ಹಲವು ದಾಖಲೆಗಳನ್ನ ಮುಡಿಗೇರಿಸಿಕೊಂಡು, ಮೈದಾನದ ಹೊರಗೆ ಅನೇಕ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿರುವ ಶೋಯೆಬ್ ಅಖ್ತರ್, ಅಂದಕಾಲತ್ತಿಲ್ ನ ಬಾಲಿವುಡ್ ನ ಬೆಡಗಿ ಸೋನಾಲಿ ಬೇಂದ್ರೆಗೆ ಮನ ಸೋತಿದ್ದರು. ಸೋನಾಲಿ ಸೌಂದರ್ಯಕ್ಕೆ ಮನಸೋತು , ಹೇಗಾದರೂ ಸರಿ ಸೋನಾಲಿಯನ್ನ ಕಿಡ್ನಾಪ್ ಮಾಡಬೇಕೆಂದು ಸ್ಕೆಚ್ ಹಾಕಿದ್ದರು ಎಂದರೆ ನೀವೂ ನಂಬ್ತೀರಾ. ಅಚ್ಚರಿ ಅನಿಸಿದರೂ ಇದು ನಿಜಾ.
ಹೌದು, 2019ರ ಆಚೀಚೆ ಶೋಯೆಬ್ ಅಖ್ತರ್ ಬಗ್ಗೆ ಇಂಥಹದ್ದೊಂದು ಸುದ್ದಿ ಸ್ಫೋಟಗೊಂಡಿತ್ತು. ಪಾಕಿಸ್ತಾನದಿಂದ ಭಾರತದವರೆಗೆ ಶೋಯೆಬ್ ಅಖ್ತರ್ ಬಗ್ಗೆ ಚರ್ಚೆ ನಡೆದಿತ್ತು. ಇದಕ್ಕೆ ಕಾರಣ ಅದೊಂದು ವರದಿ. ಅಸಲಿಗೆ 2019ರಲ್ಲಿ ಪಾಕಿಸ್ತಾನದ ಮಾರಕ ಬೌಲರ್ ನ ಮನಸು, ಸೋನಾಲಿ ಬೇಂದ್ರೆಯ ಮಾದಕತೆಗೆ ಶರಣಾಗಿದೆ ಎಂಬ ವರದಿ ಪ್ರಕಟಗೊಂಡಿದ್ದವು. ಸೋನಾಲಿ ನೆನಪಿನಲ್ಲಿ ಪ್ರೀತ್ಸೆ.. ಪ್ರೀತ್ಸೆ ಎಂದು ಕಣ್ಮುಚ್ಚಿ ಶೋಯೆಬ್ ಅಖ್ತರ್ ಕನವರಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಸಾಲದಕ್ಕೆ ಶೋಯೆಬ್ ಅಖ್ತರ್ ತಮ್ಮ ಪರ್ಸ್ ನಲ್ಲಿ ಸೋನಾಲಿ ಬೇಂದ್ರೆ ಅವರ ಫೋಟೋವನ್ನೂ ಕೂಡ ಇಟ್ಟುಕೊಂಡಿದ್ದಾರೆ ಎಂದು ಪಾಕಿಸ್ತಾನಕ್ಕೆ ಪಾಕಿಸ್ತಾನ ಮಾತನಾಡಿಕೊಳ್ಳಲು ಆರಂಭ ಮಾಡಿತ್ತು.

ಇನ್ನೂ ಇದೇ ಸಮಯದಲ್ಲಿ ಸೋನಾಲಿ ಬೇಂದ್ರೆ ಪ್ರೀತಿಯಲ್ಲಿ ಹುಚ್ಚನಾದ ಶೋಯೆಬ್ ಅಖ್ತರ್, ಸೋನಾಲಿ ಬೇಂದ್ರೆ ಅವರನ್ನ ಕಿಡ್ನಾಪ್ ಮಾಡಲು ಮುಂದಾಗಿದ್ದಾರೆ ಎಂಬ ಮಾತು ಕೂಡ ಕಿವಿಯಿಂದ ಕಿವಿಗೆ ಹಬ್ಬಿತ್ತು. ಶೋಯೆಬ್ ಅಖ್ತರ್ ಕಿವಿಗೂ ಈ ವಿಚಾರ ಬಿತ್ತು. ಕೂಡಲೇ ಭಗ್ನ ಪ್ರೇಮಿಯ ಪಟ್ಟವನ್ನ ಕಟ್ಟುತ್ತಾರೆ ಎಂದರಿತು ಎಚ್ಚೆತ್ತ ಶೋಯೆಬ್ ಅಖ್ತರ್ ಸ್ಪಷ್ಟೀಕರಣವನ್ನ ಕೊಟ್ಟರು.
ಸೋನಾಲಿ ಬೇಂದ್ರೆ ಅವರ ಕೆಲವೊಂದು ಸಿನಿಮಾಗಳನ್ನ ನಾನು ನೋಡಿದ್ದೇನೆ. ಆದರೆ ನಾನು ಅವರನ್ನ ಪ್ರೀತಿ ಮಾಡ್ತಿಲ್ಲ. ಅವರ ಅಭಿಮಾನಿಯೂ ನಾನಲ್ಲ ಎಂದಿದ್ದ ಶೋಯೆಬ್ ಅಖ್ತರ್, ಇಲ್ಲಿಯವರೆಗೆ ಒಮ್ಮೆಯೂ ಕೂಡ ಸೋನಾಲಿ ಬೇಂದ್ರೆ ಅವರನ್ನ ನಾನು ಭೇಟಿಯಾಗಿಲ್ಲ ಎಂದಿದ್ದರು. ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ಮೇಲೆ ಪಾಕಿಸ್ತಾನದ ರಾವಲ್ಪಿಂಡಿ ಎಕ್ಸ್ ಪ್ರೆಸ್ ಕಿಡಿಯನ್ನೂ ಕಾರಿದ್ದರು. ನನ್ನ ಪರ್ಸ್ ನಲ್ಲಿ ಸೋನಾಲಿ ಬೇಂದ್ರೆ ಫೋಟೋ ಇದೆ ಎನ್ನುವುದಕ್ಕೆ ಪುರಾವೆ ಇದ್ದರೆ ದಯವಿಟ್ಟು ನನಗೂ ತೋರಿಸಿ ಎಂದಿದ್ದರು.
ಅದಾಗ್ಯೂ, ಅದೇ ವೀಡಿಯೊದಲ್ಲಿ, ಶೋಯೆಬ್ ಅಖ್ತರ್ , ಸೋನಾಲಿ ಬೇಂದ್ರೆ ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ತಿಳಿದ ನಂತರ ನಾನು ಅವರ ಅಭಿಮಾನಿಯಾಗಿದ್ದೇನೆ ಎಂದು ಒಪ್ಪಿಕೊಂಡರು. ಆಕೆಯ ಇಚ್ಛಾಶಕ್ತಿಯನ್ನೂ ಶ್ಲಾಘಿಸಿದ್ದರು. ಸೋನಾಲಿ ಬೇಂದ್ರೆ ಅವರ ಬದುಕು ಅನೇಕರಿಗೆ ಪ್ರೇರಣೆ ಎಂದಿದ್ದರು. ಶೋಯೆಬ್ ಅಖ್ತರ್ ಅವರ ಈ ಹೇಳಿಕೆ ಕೂಡ ಅಷ್ಟೇ ವೈರಲ್ ಆಗಿತ್ತು. ಅನೇಕ ಅಭಿಮಾನಿಗಳ ಹೃದಯವನ್ನೂ ಕೂಡ ಶೋಯೆಬ್ ಅಖ್ತರ್ ಅವರ ಮಾತು ಗೆದ್ದಿತ್ತು.

ಸದ್ಯಕ್ಕೆ ಶೋಯೆಬ್ ಅಖ್ತರ್ ತಮ್ಮ ಜೀವನದಲ್ಲಿ ನೆಮ್ಮದಿಯಿಂದ ಇದ್ದಾರೆ. ಕ್ಯಾನ್ಸರ್ ಜೊತೆ ಬಡಿದಾಡಿ ಗೆದ್ದು ಬಂದ ಸೋನಾಲಿ ಬೇಂದ್ರೆ ಮನೆ..ಮಕ್ಕಳು..ಸಂಸಾರ ಎಂದು ಸುಖವಾಗಿದ್ದಾರೆ. ಸುಳ್ಳು ಸುದ್ದಿಯಿಂದ ಏನೆಲ್ಲ ಅವಾಂತರಗಳು ಸೃಷ್ಟಿಯಾಗುತ್ತವೆ ಅನ್ನುವುದಕ್ಕೆ ಈ ಪ್ರಕರಣ ಅತ್ಯುತ್ತಮ ಸಾಕ್ಷಿ


Click it and Unblock the Notifications











