ಅಕ್ಷಯ್ ಕುಮಾರ್‌ಗೆ ಆಘಾತ, 'ಕೇಸರಿ 2’ಗೆ ಭಾರಿ ಹೊಡೆತ..!

ಒಂದು ಚಿತ್ರದ ಹಿಂದೆ ಹತ್ತಾರು ಕಥೆಗಳಿರುತ್ತವೆ, ವ್ಯಥೆಗಳಿರುತ್ತವೆ. ಸಿನಿಮಾ ನಿರ್ಮಾಣ ಸಿನಿಮಾವೊಂದನ್ನು ಚಿತ್ರಮಂದಿರದಲ್ಲಿ ಕುಳಿತು ನೋಡಿದಷ್ಟು ಸುಲಭವಲ್ಲ. ಇಲ್ಲಿ ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು ಚಿತ್ರವನ್ನು ಮಾಡುವ ನಿರ್ಮಾಪಕರಿದ್ದಾರೆ. ಜೀವವನ್ನೇ ಬಸಿದು ನಿರ್ದೇಶನ ಮಾಡುವ ನಿರ್ದೇಶಕರಿದ್ದಾರೆ. ತಮ್ಮ ಚಿತ್ರಕ್ಕೆ ತಿಂಗಳಾನುಗಟ್ಟಲೆ ಕುಳಿತು ಸ್ಕ್ರಿಪ್ಟು, ಪ್ಲ್ಯಾನಿಂಗು, ನೂರಾರು ದಿನಗಳ ಚಿತ್ರೀಕರಣವನ್ನು ಮಾಡಿ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಅನೇಕರು ಇಲ್ಲಿ ದುಡಿಯುತ್ತಾರೆ.

ಆದರೆ ಈಗೀಗ ಯಾವ ಭಯ ಇಲ್ಲದೇ ಈಗಷ್ಟೇ ಬಿಡುಗಡೆಯಾದ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಮಾಡುವುದು, ಪೈರಸಿಯನ್ನು ಮಾಡುವ ಲೀಕಾಸುರರ ಹಾವಳಿ ಹೆಚ್ಚಾಗಿದೆ. ಈ ತರಹದ ವಿದ್ಯಮಾನ ಚಿತ್ರದ ಮಾರುಕಟ್ಟೆಗೆ ಗಳಿಕೆಗೆ ಪೆಟ್ಟು ನೀಡಬಹುದು ಎಂಬ ಅರಿವು ಇದ್ದರೂ ಕೂಡ ಅರಿವು ಇಲ್ಲದಂತೆ ಸೋಶಿಯಲ್ ಮೀಡಿಯಾದಲ್ಲಿ ಇಡೀ ಚಿತ್ರವನ್ನು ಅಪ್‌ಲೋಡ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Shock for Akshay Kumar as Kesari Chapter 2 leaked online just hours after its release

ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡ ಕಿಡಿಗೇಡಿಗಳು ಚಿತ್ರವನ್ನು ಸೆರೆ ಹಿಡಿದು ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆ. ಇದಕ್ಕೆ ಇನ್ನೊಂದು ಜ್ವಲಂತ ಉದಾಹರಣೆಯಂತೆ ನಿನ್ನೆ ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ನಿನ್ನೆ ಕೇಸರಿ 2 ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ತಮ್ಮ ಕೈಚಳಕ ತೋರಿಸಿರುವ ಕಿರಾತಕರು ತಮಿಳು ರಾಕರ್ಸ್, ಮೂವಿ ರೂಲ್ಸ್, ಫಿಲ್ಮಿ ಜಿಲ್ಲಾ, ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಚಿತ್ರವನ್ನು ಹರಿಬಿಟ್ಟಿದ್ದಾರೆ. ಚಿತ್ರದ HD, 1080p, 720p, 480p ಮತ್ತು 240p ಪ್ರಿಂಟ್‌ಗಳನ್ನು ಆನ್‌ಲೈನ್‌ನಲ್ಲಿ ಆಗುಂತಕರು ಲೀಕ್ ಮಾಡಿದ್ದಾರೆ.

ಕೇವಲ ಸಂಪೂರ್ಣ ಚಿತ್ರದ ಪ್ರಿಂಟ್ ಮಾತ್ರವಲ್ಲದೇ, ಚಿತ್ರದ ಕೆಲ ಪ್ರಮುಖ ಸನ್ನಿವೇಶಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಚಿತ್ರದ ಮೇಲೆ ಚಿತ್ರಪ್ರೇಮಿಗಳಿಗೆ ಇರುವ ಕುತೂಹಲಕ್ಕೆ ತಣ್ಣೀರು ಎರಚುತ್ತಿದ್ದಾರೆ.

ಈ ಎಲ್ಲ ವಿದ್ಯಮಾನಗಳಿಂದ ಕೇಸರಿ 2 ಚಿತ್ರತಂಡಕ್ಕೆ ಅದರಲ್ಲಿಯೂ ಅಕ್ಷಯ್ ಕುಮಾರ್‌ಗೆ ಸಹಜವಾಗಿ ಆಘಾತವಾಗಿದೆ. ಯಾಕೆಂದರೆ ಕೇಸರಿ 2 ಅಕ್ಷಯ್ ಕುಮಾರ್ ಪಾಲಿಗೆ ತುಂಬಾನೇ ಮಹತ್ವವಾದ ಚಿತ್ರ. ಸೋಲಿನ ಸುಳಿಯಲ್ಲಿ ಸಿಲುಕಿರುವ ಅಕ್ಷಯ್ ಕುಮಾರ್ ಈ ಚಿತ್ರದ ಮೂಲಕ ಗೆಲ್ಲುವ ಭರವಸೆಯಲ್ಲಿದ್ದಾರೆ.

ಇದಕ್ಕೆ ಪೂರಕವಾಗಿ ಕೇಸರಿ 2 ಚಿತ್ರವನ್ನು ಹಲವಾರು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ವಿಮರ್ಷಕರು ಕೂಡ ಕೇಸರಿ 2 ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ. ಹೀಗಿರುವಾಗ ಇದೀಗ ಕೇಸರಿ 2 ಸಂಪೂರ್ಣ ಚಿತ್ರವನ್ನು ಆನ್‌ಲೈನ್‌ನಲ್ಲಿ ತೇಲಿ ಬಿಡಲಾಗಿದೆ. ಈ ಮೂಲಕ ತಂಡದ ಶ್ರಮಕ್ಕೆ ಮತ್ತು ಕನಸುಗಳಿಗೆ ಕೊಳ್ಳಿ ಇಡುವ ಪ್ರಯತ್ನವನ್ನು ಮಾಡಲಾಗಿದೆ.

ಇನ್ನು ಕೇಸರಿ 2 ಚಿತ್ರದ HD ಪ್ರಿಂಟ್ ಲೀಕ್ ಆದ ಬೆನ್ನಲ್ಲೇ ಈ ಆನ್‌ಲೈನ್‌ ಕಳ್ಳರನ್ನು ಹಿಡಿಯೋದಾದರೂ ಹೇಗೆ ? ಇದರ ಹಿಂದೆ ಇರುವ ಕಾಣದ ಕೈಗಳ್ಯಾವುವು ? ಹಗಲಿರುಳು ಶ್ರಮ ವಹಿಸಿ ತಯಾರು ಮಾಡಿದ ಚಿತ್ರದ ಪ್ರತಿಯನ್ನು ಕದ್ದು ಮಾರಿಕೊಂಡು ದುಡ್ಡು ಮಾಡುತ್ತಿರುವ ಖದೀಮರು ಯಾರು ? ಚಿತ್ರರಂಗಕ್ಕೆ ಸಂಬಂಧಿಸಿದ ತಂತ್ರೆಜ್ಞರಿಂದಲೇ ಚಿತ್ರಗಳು ಈ ತರ ಲೀಕ್ ಆಗುತ್ತಿವೆಯಾ ? ಯುಎಫ್‌ಓ ಕ್ಯೂಬ್‌ಗೆ ಕೊಟ್ಟಾಗ ಯಾರಾದರೂ ಗೋಲ್‌ಮಾಲ್ ಮಾಡುತ್ತಿದ್ದಾರಾ ಎನ್ನುವ ಅನೇಕ ಪ್ರಶ್ನೆಗಳು ಕೇವಲ ಚಿತ್ರರಂಗದವರನ್ನು ಮಾತ್ರವಲ್ಲ ಚಿತ್ರಮಂದಿರದಲ್ಲಿಯೇ ಚಿತ್ರವನ್ನು ನೋಡುವ ಅಭ್ಯಾಸವನ್ನು ಮಾಡಿಕೊಂಡಿರುವ ಸಾಮಾನ್ಯ ಸಿನಿಮಾ ಪ್ರೇಮಿಗಳನ್ನು ಕೂಡ ಕಾಡುತ್ತಿವೆ.

Disclaimer: Filmibeat Kannada ಪೈರಸಿಯನ್ನು ಬೆಂಬಲಿಸುವುದಿಲ್ಲ, ಪೈರಸಿಯ ಪ್ರಚಾರ ಮಾಡುವುದಿಲ್ಲ. 1957ರ ಸಿನಿಮಾಟೋಗ್ರಾಫ್ ಕಾಯ್ದೆ ಮತ್ತು 1957 ರ ಹಕ್ಕುಸ್ವಾಮ್ಯ ಕಾಯ್ದೆಯಡಿಯಲ್ಲಿ ಪೈರಸಿ ಮಾಡುವುದು ಕ್ರಿಮಿನಲ್ ಅಪರಾಧ. ಯಾವುದೇ ರೂಪದಲ್ಲಿ ಪೈರಸಿಯಲ್ಲಿ ಭಾಗವಹಿಸುವುದರಿಂದ ಅಥವಾ ಪ್ರೋತ್ಸಾಹಿಸುವುದರಿಂದ ದೂರವಿರಲು ನಾವು ಓದುಗರಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

More from Filmibeat

Read more about: akshay kumar piracy bollywod
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X